ಲತಾ ಮಂಗೇಶ್ಕರ್,ರಫಿ ಮಗನ ನಡುವೆ ನಡೆದ ಜಟಾಪಟಿ

Lata Mangeshkar insecure of my father Mohd Rafi success
ಭಾರತದ ಕೋಗಿಲೆ ಎಂದೇ ಪ್ರಸಿದ್ದ ಪಡೆದ ಲತಾ ಮಂಗೇಶ್ಕರ್ ಮತ್ತು ಮೊಹಮ್ಮದ್ ರಫಿ ಇಬ್ಬರೂ ದೇಶ ಕಂಡ ಮಹಾನ್ ಕಲಾವಿದರು. ಎಂದೋ ನಡೆದ ಘಟನೆಯನ್ನು ಮೆಲುಕು ಹಾಕಲು ಹೋಗಿ ಈ ಇಬ್ಬರು ಕಲಾವಿದರ ಕುಟುಂಬದ ನಡುವೆ ವೈಮನಸ್ಸು ಏರ್ಪಟ್ಟಿದೆ.

ರಾಷ್ಟ್ರೀಯ ದಿನ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಾನು ಮೊಹಮ್ಮದ ರಫಿ ಜೊತೆ ಹಾಡುವುದನ್ನು ನಿಲ್ಲಿಸಿದ್ದೆ. ರಫಿ ಅವರಿಂದ ಕ್ಷಮಾಪಣಾ ಪತ್ರ ಬಂದ ನಂತರವಷ್ಟೇ ಅವರ ಜೊತೆ ಹಾಡಲು ಒಪ್ಪಿಕೊಂಡಿದ್ದೆ ಎಂದು ಲತಾ ಮಂಗೇಶ್ಕರ್ ಹೇಳಿಕೆ ನೀಡಿದ್ದರು.

ಗೌರವ ಧನದ ವಿಚಾರಕ್ಕಾಗಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ನನ್ನ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಜೊತೆ ಇನ್ನು ಮುಂದೆ ಹಾಡುವುದಿಲ್ಲ ಎಂದು ರಫಿ ಹೇಳಿಕೆ ನೀಡಿದ್ದರು. ಸಿಟ್ಟಿನಿಂದ ನಾನೂ ಇನ್ನೆಂದೂ ರಫಿ ಜೊತೆ ಹಾಡುವುದಿಲ್ಲ ಎಂದು ಹೇಳಿದ್ದೆ.

ಆ ನಂತರ ಅವರು ನನಗೆ ಕ್ಷಮಾಪಣಾ ಪತ್ರ ಕಳುಹಿಸಿಕೊಟ್ಟರು ಎಂದು ಲತಾ ಪತ್ರಿಕೆಯೊಂದಕ್ಕೆ ಹೇಳಿದ್ದರು.

ಇದರಿಂದ ಸಿಟ್ಟಾದ ಮೊಹಮ್ಮದ್ ರಫಿ ಪುತ್ರ ಶಹೀದ್ ರಫಿ, ನನ್ನ ತಂದೆ ಈ ದೇಶದ ಆಸ್ತಿ. ನನ್ನ ತಂದೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳಿಲ್ಲ. ಲತಾಜಿ ಬಳಿ ಆ ಪತ್ರ ಇದ್ದರೆ ತೋರಿಸಲಿ, ಇಲ್ಲದಿದ್ದರೆ ಇನ್ನು ಹತ್ತು ದಿನದೊಳಗೆ ಅವರು ಕ್ಷಮೆ ಕೇಳಬೇಕು.

ಇದು ನಡೆಯದಿದ್ದರೆ ನಾನು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದೇಶದ ಯಾವುದೇ ಗಾಯಕರಿಗೆ ಇರದಷ್ಟು ಅಭಿಮಾನಿಗಳು ನನ್ನ ತಂದೆಗೆ ಇದ್ದಾರೆ. ಲತಾ ಮಂಗೇಶ್ಕರ್ ಅವರಿಗೆ ಇದರ ಭಯ ಕಾಡಿರಬಹುದು. ನನ್ನ ತಂದೆಯ ಜೀವಿತಾವಧಿಯಲ್ಲಿ ಅವರಿಗೆ ಬೇರೊಬ್ಬರ ಪೈಪೋಟಿ ಅನ್ನೋದೇ ಇರಲಿಲ್ಲ.

ಬಾಲಿವುಡ್ ಜಗತ್ತಿನಲ್ಲಿ ಏಕಸ್ವಾಮ್ಯತೆ ಅವರು ಸಾಧಿಸಿದ್ದರು. ಲತಾ ಅವರ ಹೇಳಿಕೆ ಮನಸಿಗೆ ನೋವು ತಂದಿದೆ ಎಂದು ಶಹೀದ್ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

ಶಮ್ಮಿ ಕಪೂರ್, ಧರ್ಮೇಂದ್ರ ಮುಂತಾದ ಹೆಸರಾಂತ ನಟರು ಅವರ ಚಿತ್ರದ ಹಾಡನ್ನು ನನ್ನ ತಂದೆಯಿಂದಲೇ ಹಾಡಿಸಬೇಕೆಂದು ಡಿಮಾಂಡ್ ಮಾಡುತ್ತಿದ್ದರು.

ಆದರೆ ಆ ಸಮಯದಲ್ಲಿ ಮಹಿಳಾ ಗಾಯಕಿಯ ವಿಚಾರಕ್ಕೆ ಬಂದಾಗ ಲತಾಗೆ ಪೈಪೋಟಿ ನೀಡಲು ಸುಮನ್ ಕಲ್ಯಾಣಪುರ್, ಹೇಮಲತಾ, ಮುಬಾರಕ್ ಬೇಗಂ ಮುಂತಾದವರಿದ್ದರು ಎನ್ನುವುದು ಲತಾ ಅವರಿಗೆ ತಿಳಿದಿರಲಿ ಎಂದು ಶಹೀದ್ ಗರಂ ಆಗಿದ್ದಾರೆ.

ಕೃಪೆ: ಫಸ್ಟ್ ಪೋಸ್ಟ್

More from Filmibeat

English summary
Shahid Rafi, son of legendary playback singer Mohammad Rafi, has refuted claims by Lata Mangeshkar that his father had sent her an apology letter to resolve an issue between them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X