ಸಲ್ಮಾನ್ ಖಾನ್ ಕೊಲ್ಲಲು ಶಾರ್ಪ್‌ಶೂಟರ್ ನೇಮಿಸಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ!

ಬಾಲಿವುಡ್‌ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್‌ಗೆ ಅನಾಮದೇಯ ಪತ್ರವೊಂದು ಬಂದಿತ್ತು. ಈ ಪತ್ರದಲ್ಲಿ ಸಲೀಂ ಖಾನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಈಗ ಮತ್ತೊಂದು ಶಾಕಿಂಗ್ ಸುದ್ದಿ ರಿವೀಲ್ ಆಗಿದ್ದು, ಸಲ್ಮಾನ್ ಖಾನ್‌ರನ್ನೂ ಕೊಲೆ ಮಾಡಲು ಯತ್ನಿಸಿದ್ದರು ಎನ್ನುವ ಸಂಗತಿ ಹೊರಬಿದ್ದಿದೆ.

ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಗುರುತಿಸಲಾಗಿದೆ. ಆತನನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹಚರ ವಿಕ್ರಂ ಬ್ರಾರ್ ಪೊಲೀಸರು ಎಂದು ಗುರುತಿಸಿದ್ದಾರೆ.

ಇದೇ ವೇಳೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೊಲೆ ಮಾಡುವ ಯತ್ನ ಮಾಡಲಾಗಿತ್ತು. ಸಲ್ಮಾನ್ ಖಾನ್ ವಾಸಿಸುವ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್ ಮುಂದೆ ಶಾರ್ಪ್ ಶೂಟರ್ ಅನ್ನು ನೇಮಿಸಲಾಗಿತ್ತು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಸಲ್ಲು ಮನೆ ಮುಂದೆ ಶಾರ್ಪ್‌ಶೂಟರ್

ಸಲ್ಲು ಮನೆ ಮುಂದೆ ಶಾರ್ಪ್‌ಶೂಟರ್

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಶಂಕಿತ ಗ್ಯಾಂಗಸ್ಟರ್‌ ಲಾರೆನ್ಸ್ ಬಿಷ್ಣೋಯಿ ಮತ್ತೆ ಸುದ್ದಿಯಲ್ಲಿದ್ದಾನೆ. ಈತನೇ ಸಲ್ಮಾನ್ ಖಾನ್ ನೆಲೆಸಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮುಂದೆ ಶಾರ್ಪ್‌ಶೂಟರ್‌ ಅನ್ನು ನೇಮಿಸಿದ್ದ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ. ಸಲ್ಮಾನ್ ಖಾನ್ ಅನ್ನು ಚೇಸ್ ಮಾಡಿ ಕೊಲ್ಲಲು ವಿಶೇಷವಾದ ಆಯುಧವನ್ನು ಶಾರ್ಪ್‌ಶೂಟರ್‌ ಬಳಸಿದ್ದ ಎನ್ನಲಾಗಿದೆ. ಅಲ್ಲದೆ ಗ್ಯಾಂಗ್‌ಸ್ಟರ್ ಹಾಗೂ ಅವರ ಸಹಚರ ನಟನ ಚಲನವಲನಗಳನ್ನು ಗಮನಿಸುತ್ತಿಲೇ ಇದ್ದರು ಎನ್ನಲಾಗಿದೆ.

ಬಾಡಿಗಾರ್ಡ್‌ ಇಲ್ಲದೆ ಸಲ್ಲು ಸೈಕಲ್ ಸವಾರಿ

ಬಾಡಿಗಾರ್ಡ್‌ ಇಲ್ಲದೆ ಸಲ್ಲು ಸೈಕಲ್ ಸವಾರಿ

ಶಾರ್ಪ್‌ಶೂಟರ್‌ಗೆ ಸಲ್ಮಾನ್ ಖಾನ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ಸಲ್ಮಾನ್ ಖಾನ್ ತನ್ನ ಅಪಾರ್ಟ್‌ಮೆಂಟ್ ಸುತ್ತಮುತ್ತ ಸೈಕಲ್ ಸವಾರಿ ಮಾಡುವುದನ್ನು ಗಮನಿಸಿದ್ದ ಎನ್ನಲಾಗಿದೆ. ಸಲ್ಮಾನ್ ಅಪಾರ್ಟ್‌ಮೆಂಟ್ ಮುಂದೆನೇ ಸ್ಕೆಚ್ ಹಾಕಿದ್ದ. ಆದರೆ ಮನೆಯ ಮುಂದೆ ಪೊಲೀಸರು ಇದ್ದಿದ್ದನ್ನು ಕಂಡು ಹೊರಗಡೆ ಕೊಲೆ ಮಾಡಲು ಯತ್ನಿಸಿದ್ದ. ಆದರೆ ಕೊನೆಯ ಕ್ಷಣದಲ್ಲಿ ಪೊಲೀಸರಿಗೆ ಸಿಕ್ಕಿ ಬೀಳಬಹುದೆಂಬ ಕಾರಣಕ್ಕೆ ಹಿಂದೆ ಸರಿದಿದ್ದ ಎನ್ನಲಾಗಿದೆ.

ವಿಕ್ರಂ ಬ್ರಾರ್ ಮೇಲಿರುವ ಕೇಸ್ ಎಷ್ಟು?

ವಿಕ್ರಂ ಬ್ರಾರ್ ಮೇಲಿರುವ ಕೇಸ್ ಎಷ್ಟು?

ಸಲ್ಮಾನ್ ಖಾನ್ ತಂದೆ ಸಲೀಂ ಖಾನ್‌ಗೆ ಬೇದರಿಕೆ ಪತ್ರ ಕಳುಹಿಸಿದ್ದ ಶಂಕಿತ ವಿಕ್ರಂ ಬ್ರಾರ್ ಮೇಲೆ ಹಲವು ಕೇಸ್‌ಗಳಿವೆ. ಎರಡು ಡಜನ್‌ಗೂ ಅಧಿಕ ಕೇಸ್‌ಗಳು ಬೇರೆ ಬೇರೆ ರಾಜ್ಯಗಳಲ್ಲಿ ಈತನ ಮೇಲಿದೆ ಎಂದು ಹೇಳಲಾಗಿದೆ. ಸದ್ಯ ಈಗ ವಿದೇಶದಲ್ಲಿದ್ದು, ಅಲ್ಲಿಂದ ಸ್ಕೆಚ್ ಹಾಕುತ್ತಿದ್ದಾನೆ ಎನ್ನಲಾಗಿದೆ. ಸಲೀಂ ಖಾನ್ ವಾಕ್ ಮಾಡಿ ಬೆಂಚಿನ ರೆಸ್ಟ್ ಮಾಡುತ್ತಿದ್ದಾಗ, ಪತ್ರವೊಂದನ್ನು ನೀಡಲಾಗಿತ್ತು. ಇದರಲ್ಲಿ ಎಲ್‌ ಬಿ ಎಂಬ ಪದವಿದ್ದು, ಅದು ಲಾರೆನ್ಸ್ ಬಿಷ್ಣೋಯಿ ಎಂದು ಪೊಲೀಸರು ಅನುಮಾವ ವ್ಯಕ್ತಪಡಿಸಿದ್ದಾರೆ. ವಿಕ್ರಂ ಬ್ರಾರ್ ಮೂಲಕ ಲಾರೆನ್ಸ್ ಇವೆಲ್ಲ ಕೆಲಸ ಮಾಡಿಸಿದ್ದಾನೆ ಎಂದು ಶಂಕಿಸಲಾಗಿದೆ.

ಸಲ್ಲು ಮೇಲೆ ಈ ದ್ವೇಷ ಯಾಕೆ?

ಸಲ್ಲು ಮೇಲೆ ಈ ದ್ವೇಷ ಯಾಕೆ?

ಲಾರೆನ್ಸ್ ಬಿಷ್ಣೋಯಿ ಈ ಹಿಂದೆ ಕೂಡ ಸಲ್ಮಾನ್ ಖಾನ್ ಅನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. 1998ರಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಕೇಸ್‌ನಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತಿದ್ದಂತೆ ಲಾರೆನ್ಸ್ ಬಿಷ್ಣೋಯಿ ಬಾಲಿವುಡ್‌ ಸೂಪರ್‌ಸ್ಟಾರ್ ವಿರುದ್ಧ ತಿರುಗಿಬಿದ್ದಿದ್ದ. ಈಗ ಸಲ್ಮಾನ್ ಖಾನ್‌ ನೆಲೆಸಿರುವ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್‌ಗೆ ಸೆಕ್ಯೂರಿಟಿಯನ್ನು ಪೊಲೀಸರು ಮತ್ತಷ್ಟು ಹೆಚ್ಚಿಸಲಾಗಿದೆ.

More from Filmibeat

English summary
Lawrence Bishnoi's Aide Posted Sharpshooter Outside Salman Khan Galaxy Apartment, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X