ಮುಕೇಶ್ ಅಂಬಾನಿ ಕಟ್ಟಿದ ₹15 ಸಾವಿರ ಕೋಟಿಯ ಬಂಗಲೆ 'ಅಂಟಿಲಿಯಾ'; ಐಷಾರಾಮಿ ಗೂಡಿನೊಳಗೆ ಏನೇನಿದೆ?

ಭಾರತದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ತಮ್ಮ ಮಗನ ಮದುವೆ ಸಂಭ್ರಮದಲ್ಲಿದ್ದಾರೆ. ಜುಲೈ 12ರಂದು ಅದ್ಧೂರಿಯಾಗಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮದುವೆ ಮಾಡಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ವಿಶ್ವದ ಮೂಲೆ ಮೂಲೆಯಿಂದ ಗಣ್ಯರು ಆಗಮಿಸಿ, ಶುಭ ಹಾರೈಸಿದ್ದಾರೆ.

ಹಾಗಂತ ಅನಂತ್ ಅಂಬಾನಿಯ ಮದುವೆ ಸಮಾರಂಭ ಇಲ್ಲಿಗೆ ಮುಗೀತು ಅಂತೇನು ಇಲ್ಲ. ಮದುವೆ ಬಳಿಕ ಇನ್ನೂ ಒಂದು ಸಂಭ್ರಮವಿದೆ. ಅದನ್ನು ಲಂಡನ್‌ನಲ್ಲಿ ಆಯೋಜನೆ ಮಾಡಲಾಗಿದೆ ಅಂತ ಈಗಾಗಲೇ ವರದಿಯಾಗಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಈ ದಶಕದ ದುಬಾರಿ ವಿವಾಹ ಅಂತ ನಿಸ್ಸಂದೇಹವಾಗಿ ಹೇಳಬಹುದು.

Lesser known facts about Mukesh Ambani most expensive Rs 15000 Crore house Antilia

ಮುಕೇಶ್ ಅಂಬಾನಿ ತನ್ನ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಮಗನ ಮದುವೆಗೆ 5 ಸಾವಿರ ಕೋಟಿ ಖರ್ಚು ಮಾಡಿರುವ ಮುಕೇಶ್ ಅಂಬಾನಿ ಇನ್ನು ತಮ್ಮ ಐಷಾರಾಮಿ ಮನೆಗೆ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ? ಮನೆಯೊಳಗೆ ಏನೆಲ್ಲಾ ಇದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಅಂಟಿಲಿಯಾ'ದಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಅವರ ಮಕ್ಕಳು ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ ಅಂಬಾನಿ, ಮೊಮ್ಮಗಳು ವೇದಾ ಆಕಾಶ್ ಅಂಬಾನಿ ವಾಸವಿದ್ದಾರೆ. ಈಗ ಅನಂತ್ ಅಂಬಾನಿಯ ಪತ್ನಿ ರಾಧಿಕಾ ಮರ್ಚೆಂಟ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ವಿಶ್ವದ ಅತೀ ದುಬಾರಿ ಏರಿಯಾದಲ್ಲಿ 'ಅಂಟಿಲಿಯಾ' ಇದ್ದು, ಇದರ ಮೌಲ್ಯ ಸುಮಾರು 15 ಸಾವಿರ ಕೋಟಿ ರೂಪಾಯಿ ಎಂದು ವರದಿಯಾಗಿದೆ.

Lesser known facts about Mukesh Ambani most expensive Rs 15000 Crore house Antilia

ಮುಕೇಶ್ ಅಂಬಾನಿಯ 'ಅಂಟಿಲಿಯಾ' ನಾಲ್ಕು ಲಕ್ಷ ಚದರ ಅಡಿಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಎತ್ತರ 570 ಅಡಿ ಎತ್ತರವಿದ್ದು, ಸುಮಾರು 27 ಅಂತಸ್ತುಗಳನ್ನು ಹೊಂದಿದೆ. 15ನೇ ಶತಮಾನದಲ್ಲಿತ್ತು ಎನ್ನಲಾಗಿದ್ದ ಪೌರಾಣಿಕ ದ್ವೀಪವನ್ನು ಗಮನದಲ್ಲಿಟ್ಟುಕೊಂಡು ಈ 'ಅಂಟಿಲಿಯಾ'ವನ್ನು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. 2006ರಲ್ಲಿ 'ಅಂಟಿಲಿಯಾ' ನಿರ್ಮಾಣ ಕೆಲಸ ಆರಂಭ ಆಗಿತ್ತು. 2010ರಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿತ್ತು.

'ಅಂಟಿಲಿಯಾ' ನಿರ್ಮಾಣಗೊಂಡ ಬಳಿಕ 2011ರಲ್ಲಿ ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಶಿಫ್ಟ್ ಆಗಿದ್ದರು. ಈ ಭವ್ಯ ಬಂಗಲೆಗೆ ಶಿಫ್ಟ್ ಆಗುವಾಗಲೂ ಸುಮಾರು 10 ದಿನಗಳ ಕಾಲ ಅದ್ಧೂರಿಯಾಗಿ ಗೃಹ ಪ್ರವೇಶವನ್ನು ಮಾಡಿದ್ದರು. 27 ಅಂತಸ್ಥಿನ ಈ ಭವ್ಯ ಬಂಗಲೆಯಲ್ಲಿ ಸುಮಾರು 49 ಬೆಡ್‌ ರೂಮ್‌ಗಳಿವೆ. ಹೀಗಾಗಿ ಮನೆಯಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ ಎನ್ನಲಾಗಿದೆ.

ಮುಕೇಶ್ ಅಂಬಾನಿಯ 'ಅಂಟಿಲಿಯಾ'ದಲ್ಲಿ 168 ಕಾರುಗಳನ್ನು ಪಾರ್ಕ್ ಮಾಡುವುದಕ್ಕೆ ಪಾರ್ಟಿಂಗ್ ಏರಿಯಾವಿದೆ. ಹಾಗೇ 50 ಸೀಟುಗಳ ಕ್ಯಾಪಾಸಿಟಿಯ ಥಿಯೇಟರ್ ಇದೆ. ಹಾಗೇ ತೂಗಾಡುವ ತೋಟವಿದೆ. ಸ್ವಿಮ್ಮಿಂಗ್ ಪೂಲ್ ಇದೆ. ಆರೋಗ್ಯ ಕೇಂದ್ರ, ಸ್ಪಾ, ದೇವಸ್ಥಾನ, ಸ್ನೋ ರೂಮ್‌ಗಳಿವೆ. ಈ ಐಷಾರಾಮಿ ಬಂಗಲೆಯನ್ನು ಮೆಂಟೈನ್ ಮಾಡುವುದಕ್ಕೆಂದೇ ಸುಮಾರು 600 ಮಂದಿ ಕೆಲಸಗಾರರು ಇದ್ದಾರೆ.

More from Filmibeat

English summary
Facts about Mukesh Ambani most expensive Rs. 15000 Crore house Antilia
Read more about: mukesh ambani house ಮನೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X