Pahalgam:ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ ಪಹಲ್ಗಾಮ್‌ನಲ್ಲಿ ಚಿತ್ರೀಕರಿಸಿದ ಪ್ರಮುಖ ಸಿನಿಮಾಗಳು ಇವೇನೆ

ಕಾಶ್ಮೀರ ಪ್ರವಾಸಿಗರ ತಾಣ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದಕ್ಕೆ ದೇಶ-ವಿದೇಶದಿಂದ ಜನರು ಆಗಮಿಸುತ್ತಾರೆ. ಆರ್ಟಿಕಲ್ 370ಯನ್ನು ತೆಗೆದು ಹಾಕಿದ ಬಳಿಕ ಪ್ರವಾಸಿಗರು ಕಾಶ್ಮೀರಕ್ಕೆ ಬರುವ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಅಲ್ಲಿ ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಇದು ಪ್ರವಾಸಿಗರಿಗಷ್ಟೇ ಅಲ್ಲ, ಸಿನಿಮಾ ಮಂದಿಗೂ ನೆಚ್ಚಿನ ತಾಣವಾಗಿತ್ತು.

ಕಾಶ್ಮೀರದಲ್ಲಿರುವ ಪಹಲ್ಗಾಮ್ ಅನ್ನು ಭಾರತದ 'ಮಿನಿ ಸ್ವಿಡ್ಜರ್‌ಲ್ಯಾಂಡ್ ಎಂದೇ ಕರೆಯುತ್ತಾರೆ. ಇಲ್ಲಿರುವ ಜನರಿಗೆ ಪ್ರವಾಸಿಗರೇ ದೇವರು. ಅವರಿಂದಲೇ ಪ್ರತಿ ದಿನ ದುಡಿಮೆ ಆಗುತ್ತಿತ್ತು. ಆದರೆ, ಉಗ್ರರ ದಾಳಿ ಪ್ರವಾಸಿಗರಲ್ಲಿ ಭಯ ಹುಟ್ಟಿದ್ದಷ್ಟೇ ಅಲ್ಲ. ಅಲ್ಲಿನ ಸ್ಥಳೀಯ ಹೊಟ್ಟೆಗೆ ಹೊಡೆದಿದ್ದಾರೆ. ಕಾಶ್ಮೀರದ ಹಲವು ಭಾಗಗಳು ಪ್ರವಾಸಿಗರಿಗಷ್ಟೇ ಅಲ್ಲ. ಸಿನಿಮಾ ಮಂದಿಗೆ, ಅದರಲ್ಲೂ ಬಾಲಿವುಡ್ ಮಂದಿಗೆ ನೆಚ್ಚಿನ ತಾಣವಾಗಿತ್ತು.

ಇದೇ ಪಹಲ್ಗಾಮ್‌ನಲ್ಲಿ ಈ ಹಿಂದೆ ಸಾಕಷ್ಟು ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಹಲವು ಭಾಗಗಳಲ್ಲಿ ಉಗ್ರರು ಟೆನ್ಷನ್ ಇದ್ದಿದ್ದರಿಂದ ಸಿನಿಮಾ ಮಂದಿ ಶೂಟಿಂಗ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಭಯೋತ್ಪಾದಕರು ಇಲ್ಲದೇ ಹೋಗಿದ್ದರೆ, ಕಾಶ್ಮೀರ ಅದೆಷ್ಟೋ ಫಿಲ್ಮ್‌ ಮೇಕರ್‌ಗಳ ನೆಚ್ಚಿನ ತಾಣವಾಗುತ್ತಿತ್ತು. ಆದರೂ, ಇಲ್ಲಿ ಚಿತ್ರೀಕರಣಗೊಂಡ ಕೆಲವು ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

List of Iconic Bollywood films filmed in Jammu and Kashmir s Pahalgam

ಸಲ್ಮಾನ್ ಖಾನ್- 'ಭಜರಂಗಿ ಭಾಯಿಜಾನ್'

ಪಹಲ್ಗಾಮ್‌ನ ಜನಪ್ರಿಯ ಬೈಸರನ್‌ ಕಣಿವೆಯಲ್ಲಿ ಹಲವು ಸಿನಿಮಾಗಳು ಚಿತ್ರೀಕರಣಗೊಂಡಿವೆ. ಇಲ್ಲಿನ ಹಚ್ಚ ಹಸುರಾದ ಹುಲ್ಲುಗಾವರು ಸ್ವಿಡ್ಜರ್‌ಲ್ಯಾಂಡ್‌ನ ಫೀಲ್ ಕೊಡುತ್ತವೆ. ಹೀಗಾಗಿ ರೊಮ್ಯಾಂಟಿಕ್ ಸೀನ್‌ಗಳಿಗೆ, ಹಾಡುಗಳಿಗೆ ಈ ಕಣಿವೆಯನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಸಲ್ನಾನ್ ಖಾನ್ ನಟಿಸಿದ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಎಮೋಷನಲ್ ಸೀನ್‌ಗಳಿಗೆ ಈ ಕಣಿವೆಯನ್ನು ಬಳಸಿಕೊಳ್ಳಲಾಗಿತ್ತು. ಪಾಕಿಸ್ತಾನದ ಪುಟ್ಟ ಬಾಲಕಿಯನ್ನು ಗಡಿಯ ಮೂಲಕ ಅವರ ಪೋಷಕರಿಗೆ ಸೇರಿಸುವ ಕಥೆ ಇದಾಗಿತ್ತು. ಕಬೀರ್ ಖಾನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

List of Iconic Bollywood films filmed in Jammu and Kashmir s Pahalgam

ರಣ್‌ಬೀರ್ ಕಪೂರ್- 'ಯೇ ಜವಾನಿ ಹೇ ದಿವಾನಿ'

ಬಾಲಿವುಡ್‌ನ ಮತ್ತೊಂದು ಸೂಪರ್‌ ಹಿಟ್ ಸಿನಿಮಾ 'ಯೇ ಜವಾನಿ ಹೇ ದಿವಾನಿ' ಸಿನಿಮಾದ ಕೆಲವು ದೃಶ್ಯಗಳನ್ನು ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯ ರಾಯ್ ಕಪೂರ್ ಹಾಗೂ ಕಲ್ಕಿ ನಟಿಸಿದ್ದರು. ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಪಹಲ್ಗಾಮ್‌ನಲ್ಲಿ ಶೂಟ್ ಮಾಡಲಾಗಿತ್ತು. ಹಾಗೇ ಗುಲ್ಮಾರ್ಗ್‌ ಮತ್ತು ಶ್ರೀನಗರದಲ್ಲೂ ಚಿತ್ರೀಕರಣ ಮಾಡಿದ್ದರು.

List of Iconic Bollywood films filmed in Jammu and Kashmir s Pahalgam

ಶಾಹಿದ್ ಕಪೂರ್- 'ಹೈದರ್'

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ್ದ 'ಹೈದರ್' ಸಿನಿಮಾದ ಬಹುತೇಕ ಚಿತ್ರೀಕರಣ ಕಾಶ್ಮೀರದಲ್ಲಿ ಆಗಿತ್ತು. ಕೆಲವು ದೃಶ್ಯಗಳನ್ನು ಪಹಲ್ಗಾಮ್‌ನಲ್ಲೂ ಚಿತ್ರೀಕರಣ ಮಾಡಲಾಗಿತ್ತು. ಶಾಹಿದ್ ಕಪೂರ್ ಈ ಸಿನಿಮಾದಲ್ಲಿ ಮಿಂಚಿದ್ದರು. ಇವರ ಪರ್ಫಾಮೆನ್ಸ್‌ಗೆ ಭರಪೂರ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಈ ಸಿನಿಮಾ ಪಹಲ್ಗಾಮ್‌ನ ಸನ್ನಿವೇಶಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿತ್ತು.

List of Iconic Bollywood films filmed in Jammu and Kashmir s Pahalgam

ಆಲಿಯಾ ಭಟ್-'ರಾಜಿ'

ಬಾಲಿವುಡ್‌ನ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ 'ರಾಜಿ'. ಈ ಸಿನಿಮಾದಲ್ಲಿ ಆಲಿಯಾ ಭಟ್, ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದ ಈ ಸಿನಿಮಾದ ಕೆಲವು ದಿನಗಳನ್ನು ಕೂಡ ಪೆಹಲ್ಗಾಮ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಗೇ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.

List of Iconic Bollywood films filmed in Jammu and Kashmir s Pahalgam

ಆಲಿಯಾ ಭಟ್- 'ಹೈವೇ'

ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿದ ಮತ್ತೊಂದು ಸಿನಿಮಾ 'ಹೈವೇ' ಕೂಡ ಇಲ್ಲೇ ಶೂಟಿಂಗ್ ಆಗಿದೆ. ಇಮ್ತಿಯಾಜ್ ಅಲಿ ನಿರ್ದೇಶಿಸಿದ ಈ ಸಿನಿಮಾ ಪಹಲ್ಗಾಮ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

More from Filmibeat

English summary
List of Iconic Bollywood films filmed in Jammu and Kashmir's Pahalgam;
Read more about: movies kashmir
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X