ಆಗ್ರಾದ ತಾಜ್‌ ಮಹಲ್‌ಗೆ ರಕುಲ್ ಪ್ರೀತ್ ಮತ್ತು ಜಾಕಿ ಬಗ್ನಾನಿ ದಿಢೀರ್ ಭೇಟಿ!

ಕನ್ನಡದ ಗಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ ನಂತರ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾದರು. ತೆಲುಗಿನ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಗ್ಲ್ಯಾಮರಸ್ ನಟಿ ಈ ನಟಿಯ ಸಿನಿ ಜರ್ನಿ ಸ್ಯಾಂಡಲ್‌ವುಡ್‌ನಿಂದ ಆರಂಭವಾಗಿದ್ದರೂ ಮಿಂಚಿದ್ದು ಮಾತ್ರ ಟಾಲಿವುಡ್‌ನಲ್ಲಿ. ಈಗ ಟಾಲಿವುಡ್, ಕಾಲಿವುಡ್ ಬಿಟ್ಟು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸ್ತಿರೋ ನಟಿ ರಕುಲ್ ಪ್ರೀತ್ ಸಿಂಗ್. ಅದ್ಯಾವಾಗ ಬಾಲಿವುಡ್ ಹಾರಿದರೋ ಅಲ್ಲಿಂದ ಸದಾ ಸುದ್ದಿಯಲ್ಲೇ ಇದ್ದಾರೆ. ಈ ಬ್ಯೂಟಿಫುಲ್ ನಟಿ ಕೆಲವೊಮ್ಮೆ ಸಿನಿಮಾ ವಿಚಾರಕ್ಕೆ ಸದ್ದು ಮಾಡಿದರೆ, ಮತ್ತೆ ಕೆಲವೊಮ್ಮೆ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ.

ಸದ್ಯ ಇದೀಗ ರಾಕುಲ್ ಪ್ರೀತ್ ಸಿಂಗ್ ಮತ್ತು ಪ್ರಿಯಕರ ಜಾಕಿ ಭಗ್ನಾನಿ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಇಬ್ಬರು ತಮ್ಮ ಪ್ರೀತಿಯನ್ನು ಅನೌನ್ಸ್ ಮಾಡಿಕೊಂಡ ನಂತರ ಅಲ್ಲಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಇಂದು ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ತಾಜ್‌ಮಹಲ್ ಪ್ರೀತಿಯ ಸಂಕೇತ . ಹೀಗಾಗಿ ರಾಕುಲ್ ಮತ್ತು ಜಾಕಿ ಇಂದು ಇಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ತಾಜ್‌ ಮಹಲ್‌ನಿಂದ ಹೊರ ಬಂದಾಗ ಅಭಿಮಾನಿಗಳ ಕಣ್ಣಿಗೆ ಬಿದ್ದಿರುವ ಈ ಜೋಡಿಯ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ಕೂಡ ಕುರ್ತ ಮಾದರಿಯ ಬಟ್ಟೆಯಲ್ಲಿ ತಾಜ್‌ಮಹಲ್‌ಗೆ ಭೇಟಿ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.

ರಕುಲ್ ಮದುವೆ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ: ಕೊನೆಗೂ ಬಾಯ್ಬಿಟ್ಟ ರಕುಲ್
ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ 31ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ರಕುಲ್ ತನ್ನ ಪ್ರೀತಿಯ ಗುಟ್ಟುನ್ನು ರಟ್ಟು ಮಾಡಿದ್ದರು. ಟ್ವಿಟರ್‌ನಲ್ಲಿ ಬಾಯ್ ಫ್ರೆಂಡ್ ಜೊತೆ ಇರುವ ಫೋಟೊ ಶೇರ್ ಮಾಡಿ, ಇಡೀ ವಿಶ್ವಕ್ಕೆ ತಾನು ಪ್ರೀತಿಯಲ್ಲಿ ಬಿದ್ದಿರುವ ವಿಷಯವನ್ನು ತಿಳಿಸಿದ್ದರು. ಅಂದ ಹಾಗೆ ಬಾಲಿವುಡ್‌ನಲ್ಲಿ ನಿರ್ಮಾಪಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಜಾಕಿಭಗ್ನಾನಿ ಜೊತೆ ರಕುಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ.

Lovebirds Rakul Preet Singh and Jackky Bhagnani Visit Taj Mahal in Agra
ಸದ್ಯ ರಕುಲ್ ಪ್ರೀತ್ ಸಿಂಗ್ ಬಾಲಿವುಡ್‌ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಚಿತ್ರ ಅಂದರೆ, ರಕುಲ್ ಸಿನಿಮಾಗಳಿಗಿಂತ ಹೆಚ್ಚಾಗಿ ಈಗ ಆಕೆಯ ಮದುವೆ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ತನ್ನ ಪ್ರೀತಿ ವಿಚಾರವನ್ನು ಅದ್ಯಾವಾಗ ಹೇಳಿಕೊಂಡರೋ, ಅಲ್ಲಿಂದ ರಕುಲ್ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಜಾಕಿ ಭಗನಾನಿ-ರಕುಲ್ ಇಬ್ಬರು ಒಂದೇ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ರಿಲೇಷನ್ ಶಿಪನ್ನು ಕನ್ಫರ್ಮ್ ಮಾಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಮಿಂಚಿನ ನಟಿ ರಕುಲ್, ಬಾಲಿವುಡ್ ಖ್ಯಾತ ನಿರ್ಮಾಪಕನ ಪುತ್ರ-ನಟನೂ ಆಗಿರುವ ಜಾಕಿ ಭಗ್ನಾನಿಯನ್ನು ಪ್ರೀತಿಸುತ್ತಿರುವುದು ಈಗ ಎಲ್ಲರಿಗೂ ತಿಳಿದಿದೆ. ಹೀಗಾಗಿ ಇತ್ತೀಚೆಗೆ ತನ್ನ ಪ್ರೀತಿ ಮತ್ತು ಮದುವೆ ಬಗ್ಗೆ ಕೂಡ ರಕುಲ್ ಮಾತನಾಡಿದ್ದರು.

Lovebirds Rakul Preet Singh and Jackky Bhagnani Visit Taj Mahal in Agra
"ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತಾಡಲೇ ಬೇಕಿತ್ತು ಅದಕ್ಕೆ ಮಾತನಾಡಿದೆ. ನಾನು ಕೇಳಬೇಕೆಂದಿರುವ ವಿಷಯಗಳನ್ನು ಕೇಳುವುದಕ್ಕಾಗಿಯೇ ಆಯ್ಕೆ ಮಾಡಿಕೊಂಡಿದ್ದೆ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಬಾರದೆಂದು ಈ ಆಯ್ಕೆ ಮಾಡಿಕೊಂಡಿದ್ದೆ. ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಯಾಕೆ ಮಾತನಾಡಿದೆ ಅಂದರೆ, ಅದೊಂದು ಸುಂದರ ವಿಷಯವಾಗಿತ್ತು. ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಎಂದಿದ್ದೆ. ತಾರೆಯರ ಜೀವನ ಯಾವಾಗಲೂ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿರುತ್ತೆ. ಅದು ನನ್ನ ಬದುಕಿನ ಮೇಲೆ ಪರಿಣಾಮ ಬೀರಬಾರದು ಎಂದುಕೊಂಡಿದ್ದೇನೆ." ಎಂದು ಹೇಳಿದ್ದಾರೆ.ಮುಂದಿನ ವರ್ಷ ಈ ಇಬ್ಬರು ಪ್ರಣಯ ಪಕ್ಷಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Rakul Preet Singh and Jackky Bhagnani were spotted today as they visited Taj Mahal in Agra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X