ರಕುಲ್ ಮದುವೆ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ: ಕೊನೆಗೂ ಬಾಯ್ಬಿಟ್ಟ ರಕುಲ್

ಈ ನಟಿಯ ಸಿನಿ ಜರ್ನಿ ಸ್ಯಾಂಡಲ್‌ವುಡ್‌ನಿಂದ ಆರಂಭವಾಗಿದ್ದರೂ ಮಿಂಚಿದ್ದು ಮಾತ್ರ ಟಾಲಿವುಡ್‌ನಲ್ಲಿ. ಈಗ ಟಾಲಿವುಡ್, ಕಾಲಿವುಡ್ ಬಿಟ್ಟು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸ್ತಿರೋ ನಟಿ ರಕುಲ್ ಪ್ರೀತ್ ಸಿಂಗ್. ಅದ್ಯಾವಾಗ ಬಾಲಿವುಡ್ ಹಾರಿದರೋ ಅಲ್ಲಿಂದ ಸದಾ ಸುದ್ದಿಯಲ್ಲೇ ಇದ್ದಾರೆ. ಈ ಬ್ಯೂಟಿಫುಲ್ ನಟಿ ಕೆಲವೊಮ್ಮೆ ಸಿನಿಮಾ ವಿಚಾರಕ್ಕೆ ಸದ್ದು ಮಾಡಿದರೆ, ಮತ್ತೆ ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಾಗಿದ್ದಾರೆ.

ಸದ್ಯ ರಕುಲ್ ಪ್ರೀತ್ ಸಿಂಗ್ ಬಾಲಿವುಡ್‌ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಚಿತ್ರ ಅಂದರೆ, ರಕುಲ್ ಸಿನಿಮಾಗಳಿಗಿಂತ ಹೆಚ್ಚಾಗಿ ಈಗ ಆಕೆಯ ಮದುವೆ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ತನ್ನ ಪ್ರೀತಿ ವಿಚಾರವನ್ನು ಅದ್ಯಾವಾಗ ಹೇಳಿಕೊಂಡರೋ, ಅಲ್ಲಿಂದ ರಕುಲ್ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ರಕುಲ್ ತನ್ನ ಮದುವೆ, ಬಾಯ್‌ಫ್ರೆಂಡ್, ಸಿನಿಮಾ ಬಗ್ಗೆ ಇರುವ ಗುಟ್ಟನ್ನು ರಟ್ಟು ಮಾಡಿದ್ದಾರೆ.

ರಕುಲ್ ಲವ್ ಸ್ಟೋರಿ ರಿವೀಲ್ ಆಗಿದ್ದೇಗೆ?

ರಕುಲ್ ಲವ್ ಸ್ಟೋರಿ ರಿವೀಲ್ ಆಗಿದ್ದೇಗೆ?

ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ 31ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ರಕುಲ್ ತನ್ನ ಪ್ರೀತಿಯ ಗುಟ್ಟುನ್ನು ರಟ್ಟು ಮಾಡಿದ್ದರು. ಟ್ವಿಟರ್‌ನಲ್ಲಿ ಬಾಯ್ ಫ್ರೆಂಡ್ ಜೊತೆ ಇರುವ ಫೋಟೊ ಶೇರ್ ಮಾಡಿ, ಇಡೀ ವಿಶ್ವಕ್ಕೆ ತಾನು ಪ್ರೀತಿಯಲ್ಲಿ ಬಿದ್ದಿರುವ ವಿಷಯವನ್ನು ತಿಳಿಸಿದ್ದರು. ಅಂದ ಹಾಗೆ ಬಾಲಿವುಡ್‌ನಲ್ಲಿ ನಿರ್ಮಾಪಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಜಾಕಿಭಗ್ನಾನಿ ಜೊತೆ ರುಕುಲ್ ಡೇಟಿಂಗ್ ನಡೆಸುತ್ತಿದ್ದಾರೆ. ಇಲ್ಲಿಂದ ರಕುಲ್ ಮದುವೆ ಬಗ್ಗೆ ಬಾಲಿವುಡ್ ಮಂದಿ ಚರ್ಚೆ ಮಾಡಲು ಆರಂಭಿಸಿದ್ದರು.

ರಕುಲ್ ಹಾಗೂ ಜಾಕಿ ಮದ್ವೆ ಯಾವಾಗ?

ರಕುಲ್ ಹಾಗೂ ಜಾಕಿ ಮದ್ವೆ ಯಾವಾಗ?

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಡೇಟಿಂಗ್ ನಡೆಸುತ್ತಿರುವ ವಿಷಯಕ್ಕೆ ಬಹಿರಂಗಗೊಳ್ಳುತ್ತಿದ್ದಂತೆ ಇವರ ಮದುವೆ ಬಗ್ಗೆನೂ ಚರ್ಚೆಯಾಗುತ್ತಿತ್ತು. ಬಾಲಿವುಡ್ ತಾರೆಯರು ಒಬ್ಬೊಬ್ಬರಾಗೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ, ರಕುಲ್ ಕೂಡ 2022ರಂದು ಜ್ಯಾಕಿಯನ್ನು ವಿವಾಹವಾಗುತ್ತಾರೆ ಅಂತ ಗುಲ್ಲೆದ್ದಿತ್ತು. ಆದರೆ, ತನ್ನ ಪ್ರೀತಿಯ ವಿಷಯವನ್ನು ಯಾಕೆ ಬಹಿರಂಗ ಪಡಿಸಿದೆ ಅನ್ನುವ ಬಗ್ಗೆ ರಕುಲ್ ವೆಬ್‌ಸೈಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ. "ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತಾಡಲೇ ಬೇಕಿತ್ತು ಅದಕ್ಕೆ ಮಾತನಾಡಿದೆ. ನಾನು ಕೇಳಬೇಕೆಂದಿರುವ ವಿಷಯಗಳನ್ನು ಕೇಳುವುದಕ್ಕಾಗಿಯೇ ಆಯ್ಕೆ ಮಾಡಿಕೊಂಡಿದ್ದೆ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಬಾರದೆಂದು ಈ ಆಯ್ಕೆ ಮಾಡಿಕೊಂಡಿದ್ದೆ. ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಯಾಕೆ ಮಾತನಾಡಿದೆ ಅಂದರೆ, ಅದೊಂದು ಸುಂದರ ವಿಷಯವಾಗಿತ್ತು. ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಎಂದಿದ್ದೆ. ತಾರೆಯರ ಜೀವನ ಯಾವಾಗಲೂ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿರುತ್ತೆ. ಅದು ನನ್ನ ಬದುಕಿನ ಮೇಲೆ ಪರಿಣಾಮ ಬೀರಬಾರದು ಎಂದುಕೊಂಡಿದ್ದೇನೆ." ಎಂದು ಹೇಳಿದ್ದಾರೆ.

ಮದುವೆ ಆಗುವಾಗ ಹೇಳುತ್ತೇನೆ

ಮದುವೆ ಆಗುವಾಗ ಹೇಳುತ್ತೇನೆ

ರಕುಲ್ ಪ್ರೀತ್ ಸಿಂಗ್ 2022ರಲ್ಲಿ ಜಾಕಿ ಭಗ್ನಾನಿಯನ್ನು ವಿವಾಹವಾಗುತ್ತಾರೆ ಅನ್ನುವ ಬಗ್ಗೆನೂ ಪ್ರತಿಕ್ರಿಯಿಸಿದ್ದಾರೆ. "ಬೇರೆ ಎಲ್ಲಾ ವಿಷಯಗಳಂತೆ ಮದುವೆ ವಿಷಯವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಸದ್ಯಕ್ಕೆ ನಾನು ಕೇವಲ ನನ್ನ ವೃತ್ತಿ ಬಗ್ಗೆ ಗಮನ ಹರಿಸುತ್ತಿದ್ದೇನೆ. ನಾನು ಯಾಕೆ ಇಲ್ಲಿಗೆ ಬಂದಿರುವೆನೋ ಆಗ ಮಾತ್ರ ಗಮನ ಹರಿಸಿದ್ದೇನೆ." ಎಂದು ರಕುಲ್ ಪ್ರೀತ್ ಸಿಂಗ್ ಮದುವೆ ವಿಚಾರವಾಗಿ ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಕಾಂಡೋಲ್ ಹಿಡಿದು ನಿಂತ 'ಛತ್ರಿವಾಲಿ' ರಕುಲ್

ಕಾಂಡೋಲ್ ಹಿಡಿದು ನಿಂತ 'ಛತ್ರಿವಾಲಿ' ರಕುಲ್

ರಕುಲ್ ಪ್ರೀತ್ ಸಿಂಗ್ ಸದ್ಯ 'ಛತ್ರಿವಾಲಿ' ಅನ್ನುವ ಬಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರದ್ದು ಕಾಂಡೋಮ್ ಪರೀಕ್ಷೆ ಮಾಡುವ ಪಾತ್ರ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

More from Filmibeat

English summary
In an interview, Rakul Preet Singh opened up about her personal life and even shared her wedding plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X