ಲಕ್ನೋದಲ್ಲಿ'ಅಕ್ಷಯ್ ಕುಮಾರ್ ಮುರ್ದಾಬಾದ್' ಘೋಷಣೆ; ಪ್ರಚಾರಕ್ಕೆ ಹೋದ ನಟರ ಮೇಲೆ ಚಪ್ಪಲಿ ಎಸೆತ!
ಬಾಲಿವುಡ್‌ನ ಇಬ್ಬರೂ ಆಕ್ಷನ್ ಹೀರೊಗಳು ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ತಮ್ಮ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಸಿನಿಮಾ 'ಬಡೇ ಮಿಯಾ ಛೋಟೆ ಮಿಯಾ' ಪ್ರಚಾರ ಮಾಡುತ್ತಿದ್ದಾರೆ. ನಿನ್ನೆ (ಫೆಬ್ರವರಿ 26) ಈ ಇಬ್ಬರೂ ಆಕ್ಷನ್ ಹೀರೊಗಳು ಲಕ್ನೋಗೆ ಸಿನಿಮಾ ಪ್ರಚಾರಕ್ಕೆಂದು ಹೋಗಿದ್ದರು. ಈ ವೇಳೆ ಅನಿರೀಕ್ಷಿತ ಘಟನೆಗಳು ನಡೆದಿವೆ.
ಉತ್ತರ ಪ್ರದೇಶದ ಲಕ್ನೋದ ಘಂಟಾಘರ್ ಅನ್ನುವಲ್ಲಿ 'ಬಡೇ ಮಿಯಾ ಛೋಟೆ ಮಿಯಾ' ಸಿನಿಮಾದ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಆಯೋಜಕರು ಈ ಮೊದಲೇ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಆಗಮಿಸಲಿದ್ದಾರೆಂದು ತಿಳಿಸಿದ್ದರು. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಇಬ್ಬರೂ ತಮ್ಮ ಸಿನಿಮಾದ ಪ್ರಚಾರ ಮಾಡುತ್ತಿರುವ ವೇಳೆ ಅಭಿಮಾನಿಗಳ ಗುಂಪು ರೊಚ್ಚಿಗೆದ್ದಿದ್ದರು. ನೋಡ ನೋಡುತ್ತಿದ್ದಂತೆ ಜನರು ಹೆಚ್ಚಾಗಿತ್ತು. ಜನರು ಗುಂಪು ಇಬ್ಬರೂ ಬಾಲಿವುಡ್ ನಟರ ಮೇಲೆ ಶೂ ಹಾಗೂ ಚಪ್ಪಲಿ ಎಸೆಯುವುದಕ್ಕೆ ಆರಂಭಿಸಿದ್ದರು. ಅಕ್ಷಯ್ ಕುಮಾರ್ ಮುರ್ದಾಬಾದ್ ಎಂಬ ಘೋಷಣೆಗಳನ್ನು ಕೂಗುವುದಕ್ಕೆ ಶುರುವಿಟ್ಟುಕೊಂಡರು. ಅಸಲಿಗೆ ಲಕ್ನೋದಲ್ಲಿ ನಡೆದ ಘಟನೆ ಏನು? ತಿಳಿಯುವುದಕ್ಕೆ ಮುಂದೆ ಓದಿ..
ಅಕ್ಷಯ್, ಟೈಗರ್ ಸಿನಿಮಾ ಪ್ರಚಾರ
'ಬಡೇ ಮಿಯಾ ಛೋಟೆ ಮಿಯಾ' ಸಿನಿಮಾ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಜೋಷ್‌ನಲ್ಲಿಯೇ ಭಾಗವಹಿಸಿದ್ದರು. ಮೊದಲ ಜನರಿಗೆ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬರುತ್ತಾರೆಂದು ತಿಳಿಸಿದ್ದರಿಂದ ಘಂಟಾಘರ್ ಬಳಿಕ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. ಇದೇ ವೇಳೆ ಬಾಲಿವುಡ್‌ನ ಈ ಇಬ್ಬರು ಆಕ್ಷನ್ ಹೀರೊಗಳು ಸ್ಪಂಟ್‌ಗಳ ಮೂಲಕ ರಂಜಿಸಿದ್ದರು. ಈ ವೇಳೆ ಅಭಿಮಾನಿಗಳು ತಮ್ಮ ಸ್ಟಾರ್ ನಟರಿಗೆ ಕೆಲವು ಬೇಡಿಕೆಗಳನ್ನು ಇಟ್ಟರು. ಅಲ್ಲದೆ ನೂಕುನುಗ್ಗಲು ಹೆಚ್ಚಾಯ್ತು. ಇದು ಬಳಿಕ ಗಲಾಟೆಗೆ ಇರುಗಿತ್ತು.
ಲಕ್ನೋದಲ್ಲಿ ನಡೆದಿದ್ದೇನು?
ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನೋಡುವ ಉತ್ಸಾಹದಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಅಕ್ಷಯ್ ಕುಮಾರ್ ಹಾಡು ಹೇಳುವಂತೆ ಮನವಿ ಮಾಡಿದ್ದರು. ಮತ್ತೆ ಕೆಲವರು ಇನ್ನು ಹಲವು ಬೇಡಿಕೆಗಳನ್ನು ಇಬ್ಬರು ನಟರ ಮುಂದಿಟ್ಟಿದ್ದರು. ಆದರೆ, ನೋಡ ನೋಡುತ್ತಿದ್ದಂತೆ ಅಭಿಮಾನಿಗಳ ಸಂಖ್ಯೆ ಏರಿಕೆಯಾಗುವುದಕ್ಕೆ ಶುರುವಾಗಿತ್ತು. ಜನರ ನಡುವೆ ಕಿತ್ತಾಟ ಶುರುವಾಯ್ತು. ಇನ್ನೊಂದು ಕಡೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಎಷ್ಟೇ ಮನವಿ ಮಾಡಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ನಟರ ಮೇಲೆ ಶೋ, ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದರು.
'ಅಕ್ಷಯ್ ಕುಮಾರ್ ಮುರ್ದಾಬಾದ್ ಘೋಷಣೆ'
ಜನಸಂದಣಿ ಹೆಚ್ಚಾಗುತ್ತಿದ್ದಂತೆ ಆಕ್ರೋಶಗೊಂಡ ಜನರು ಅಕ್ಷಯ್ ಕುಮಾರ್ ಮುರ್ದಾವಾದ್ ಘೋಷಣೆಗಳನ್ನು ಕೂಗುವುದಕ್ಕೆ ಶುರುಮಾಡಿದರು. ಕೈ ಮೀರಿ ಹೋಗುತ್ತಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದ್ದರು. ಕಂಟ್ರೋಲ್ ಮಾಡುವುದಕ್ಕೆ ಅದೆಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಬಳಿಕ ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಸಿನಿಮಾ ಯಾವಾಗ ರಿಲೀಸ್?
ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಬಾಲಿವುಡ್‌ನ ಆಕ್ಷನ್ ಹೀರೊಗಳೇ. ಹೀಗಾಗಿ ಆಕ್ಷನ್ ಸೀನ್‌ಗಳನ್ನು ಹೆಚ್ಚು ನಿರೀಕ್ಷೆ ಮಾಡಬಹುದು. ಮುಂಬರುವ ಈದ್‌ಗೆ 'ಬಡೇ ಮಿಯಾ ಛೋಟೆ ಮಿಯಾ' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಇಬ್ಬರು ನಟರು ಈಗಿನಿಂದಲೇ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸತತ ಸೋಲುಗಳನ್ನು ಕಂಡಿರೋ ಇವರಿಬ್ಬರಿಗೂ ಈ ಸಿನಿಮಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.


Click it and Unblock the Notifications











