'ಈ' ಕಾರಣಕ್ಕಾಗಿ ಅನಿಲ್ ಕಪೂರ್ ಜೊತೆ ನಟಿಸುವುದನ್ನು ನಿಲ್ಲಿಸಿದ್ದ ಮಾಧುರಿ

ಬಾಲಿವುಡ್ ನ ಜನಪ್ರಿಯ ಜೋಡಿಗಳಲ್ಲಿ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಜೋಡಿ ಕೂಡ ಒಂದು. ತೇಜಾಬ್ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ ಈ ಜೋಡಿ ಆನಂತರ ಭಾರತೀಯ ಚಿತ್ರರಂಗದಲ್ಲಿ ಮೋಸ್ಟ್ ವಾಂಟೆಡ್ ಜೋಡಿಯಾಗಿ ಹರಹೊಮ್ಮಿತ್ತು. ಆನಂತರ ಬೇಟ, ಖೇಲ್, ರಾಮ್ ಲಖನ್, ರಾಜ್ ಕುಮಾರ್, ಜಿಂದಗಿ ಏಕ್ ಜುಮಾ, ಜಮಾಯಿ ರಾಜ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಮಿಂಚಿದ್ದಾರೆ.

Recommended Video

Nick Jonas Celebrates First Holi with Priyanka Chopra

90ರ ದಶಕದಲ್ಲಿ ಈ ಜೋಡಿ ಬಾಲಿವುಡ್ ನ ಉತ್ತುಂಗದಲ್ಲಿ ಇತ್ತು. ಅನಿಲ್ ಮತ್ತು ಮಾಧುರಿ ಇದ್ದಾರೆ ಅಂದರೆ ಆ ಸಿನಿಮಾ ಸೂಪರ್ ಹಿಟ್ ಆಗುವುದು ಪಕ್ಕಾ ಆಗಿತ್ತು. ಆದರೆ 2000ನೇ ಇಸವಿಯಲ್ಲಿ ರಿಲೀಸ್ ಆದ 'ಪುಕಾರ್' ಸಿನಿಮಾದ ನಂತರ ಸೂಪರ್ ಹಿಟ್ ಜೋಡಿ ಒಟ್ಟಿಗೆ ನಟಿಸಿಲ್ಲ. ಪುಕಾರ್ ಸಿನಿಮಾದ ನಂತರ ಮಾಧುರಿ, ಅನಿಲ್ ಕಪೂರ್ ಜೊತೆ ನಟಿಸುವುದಿಲ್ಲ ಎನ್ನುವ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನಟಿ ಮಾಧುರಿ ದೀಕ್ಷಿತ್ ಈಗ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಅಫೇರ್ ವದಂತಿ

ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಅಫೇರ್ ವದಂತಿ

90ರ ದಶಕ, ಮಾಧುರಿ ಮತ್ತು ಅನಿಲ್ ಕಪೂರ್ ಇಬ್ಬರು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಸಮಯವದು. ಸಾಕಷ್ಟು ಸೂಪರ್ ಹಿಟ್

ಸಿನಿಮಾಗಳನ್ನು ನೀಡಿದ್ದ ಈ ಜೋಡಿ ನಡುವೆ ಆಗಲೆ ಗಾಸಿಪ್ ಜೋರಾಗಿ ಕೇಳಿ ಬರುತ್ತಿತ್ತು. ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಸಿನಿಮಾ ಸೆಟ್ ಗಳಲ್ಲಿ ಆತ್ಮೀಯವಾಗಿ ಇರುವುದನ್ನು ನೋಡಿದವರು ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲ್ಲದೆ ರೀಲ್ ಜೋಡಿ ರಿಯಲ್ ಲೈಫ್ ನಲ್ಲಿಯೂ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ವಿಪರೀತವಾಗಿ ಕೇಳಿ ಬಂದಿತ್ತು.

ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇಕೆ ಮಾಧುರಿ?

ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇಕೆ ಮಾಧುರಿ?

ಈ ಸಮಯದಲ್ಲಿ ಅನಿಲ್ ಕಪೂರ್ ಅಭಿನಯದ ಸಿನಿಮಾ ಚಿತ್ರೀಕರಣಕ್ಕೆ ಅವರ ಪತ್ನಿ ಸುನೀತಾ ಮಕ್ಕಳನ್ನು ಕರೆದುಕೊಂಡು ಬಂದಿದ್ದರಂತೆ. ಕುಟುಂಬದ ಜೊತೆ ಅನಿಲ್ ಕಪೂರ್ ಮಾತನಾಡುತ್ತಿರುವಾಗ ಮಾಧುರಿ ದೀಕ್ಷಿತ್ ಹಾಗೆ ಪಾಸ್ ಆಗುತ್ತಾರಂತೆ. ಅನಿಲ್ ಕಪೂರ್ ಅವರ ಸುಂದರ ಕುಟುಂಬವನ್ನು ನೋಡಿದ ಮಾಧುರಿ ಆ ಕ್ಷಣವೇ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರಂತೆ.

ನನ್ನಿಂದ ಅನಿಲ್ ಕುಟುಂಬದ ನೆಮ್ಮದಿ ಹಾಳಾಗಬಾರದು

ನನ್ನಿಂದ ಅನಿಲ್ ಕುಟುಂಬದ ನೆಮ್ಮದಿ ಹಾಳಾಗಬಾರದು

"ತನ್ನಿಂದ ಅವರ ಮನೆ ಒಡೆಯುವುದು ಬೇಡ, ನನ್ನಿಂದ ಅವರ ಕುಟುಂಬದ ನೆಮ್ಮದಿ ಹಾಳಾಗಬಾರದು" ಎಂದು ಮಾಧುರಿ ಇನ್ಮುಂದೆ ಅನಿಲ್ ಕಪೂರ್ ಜೊತೆ ಸಿನಿಮಾ ಮಾಡಬಾರದು ಎಂದು ನಿರ್ಧರಿಸುತ್ತಾರೆ. ಸಿನಿಮಾ ಮಾತ್ರವಲ್ಲದೆ ಅವರಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಅದರಂತೆ ಮಾಧುರಿ ಆ ನಂತರ ಅನಿಲ್ ಕಪೂರ್ ಜೊತೆ ಯಾವುದೆ ಸಿನಿಮಾ ಮಾಡುವುದಿಲ್ಲ.

17 ವರ್ಷದ ಬಳಿಕ ಒಂದಾದ ಜೋಡಿ

17 ವರ್ಷದ ಬಳಿಕ ಒಂದಾದ ಜೋಡಿ

17 ವರ್ಷದ ಹಿಂದೆ ಮಾಧುರಿ ತೆಗೆದುಕೊಂಡ ನಿರ್ಧಾರ 'ಟೋಟಲ್ ಧಮಾಲ್' ಸಿನಿಮಾದಲ್ಲಿ ಕೊನೆಗೊಳ್ಳುತ್ತದೆ. ಹೌದು, ಕಳೆದ ವರ್ಷ ಈ ಜೋಡಿ ಟೋಟಲ್ ಧಮಾಲ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನಿಲ್ ಮತ್ತು ಮಾಧುರಿಯನ್ನು ಮತ್ತೆ ತೆರೆಮೇಲೆ ಒಟ್ಟಿಗೆ ನೋಡುವ ಕನಸಿಟ್ಟುಕೊಂಡಿದ್ದ ಅದೆಷ್ಟೊ ಅಭಿಮಾನಿಗಳಿಗೆ ಟೋಟಲ್ ಧಮಾಲ್ ಸಿನಿಮಾ ನನಸು ಮಾಡಿತ್ತು. ಈ ಸಿನಿಮಾ ಹೇಳುವಷ್ಟು ಸಕ್ಸಸ್ ಕಾಣಲಿಲ್ಲ. ಆದರೆ ಜನಪ್ರಿಯ ಜೋಡಿಯನ್ನು ಒಟ್ಟಿಗೆ ನೋಡಿದ್ದೇ ಅಭಿಮಾನಿಗಳಿಗೆ ವಿಶೇಷವಾಗಿತ್ತು.

More from Filmibeat

English summary
Actress Madhuri Dixit reveals reason behind that she has stopped acting with Anil Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X