ಅಜಯ್ ದೇವಗನ್ ರೀತಿ ಸರ್ಕಸ್ ಮಾಡಿ 'ಸಿಂಗಂ' ಆಗಲು ಹೊರಟ ಪೊಲೀಸಪ್ಪ!: ವೈರಲ್ ವಿಡಿಯೋ

ಅಜಯ್ ದೇವಗನ್ ಮೊದಲ ಬಾರಿಗೆ ನಟಿಸಿದ್ದ 1991ರ 'ಪೂಲ್ ಔರ್ ಕಾಂಟೆ' ಚಿತ್ರದ ಪ್ರಸಿದ್ಧ ಸ್ಟಂಟ್ ನಿಮಗೆ ಗೊತ್ತಿರಬಹುದು. ಅನೇಕ ಸಿನಿಮಾಗಳಲ್ಲಿ ಈ ರೀತಿಯ ಸ್ಟಂಟ್ ನೋಡಿರಬಹುದು. ಈಗಲೂ ಈ ಸ್ಟಂಟ್ ಬಹಳ ಫೇಮಸ್. ಅಕ್ಕ ಪಕ್ಕ ಸಾಗುವ ಎರಡು ಬೈಕ್‌ಗಳ ಮೇಲೆ ಕಾಲುಗಳನ್ನಿರಿಸಿಕೊಂಡು ಸಾಗುವ ದೃಶ್ಯ ವೀಕ್ಷಕರಲ್ಲಿ ರೋಮಾಂಚನ ಮೂಡಿಸಿತ್ತು.

ಈಗ ಇದೇ ರೀತಿಯ ಸ್ಟಂಟ್ ಮಾಡುವ ಮೂಲಕ ತಾವು ಯಾವ ಆಕ್ಷನ್ ಹೀರೋಗಳಿಗೂ ಕಮ್ಮಿಯಿಲ್ಲ ಎಂದು ವಿಡಿಯೋ ಮಾಡಿ ಸಂಭ್ರಮಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಅನೇಕರು ಅಬ್ಬಾ ನಮ್ಮ ಪೊಲೀಸಪ್ಪನ ಸಾಹಸವೇ ಎಂದು ಬೆರಗಾಗಿದ್ದಾರೆ.

ತಮ್ಮ ಸಾಹಸವನ್ನು ಎಲ್ಲರೂ ಮೆಚ್ಚಿಕೊಂಡು ಶಹಬ್ಬಾಷ್ ಎನ್ನುತ್ತಾರೆ ಎಂದೇ ಆ ಅಧಿಕಾರಿ ಭಾವಿಸಿದ್ದರು. ಆದರೆ ಅವರ ಮೇಲಧಿಕಾರಿಗಳು ವಿಡಿಯೋ ಕಂಡು ಕೋಪಗೊಂಡಿದ್ದಾರೆ. ಹೀಗೆ ಅಧಿಕಾರಿ ತಮಗೆ ತಾವೇ ಸಂಕಷ್ಟವನ್ನು ಆಹ್ವಾನಿಸಿಕೊಂಡಿದ್ದಾರೆ. ಮುಂದೆ ಓದಿ

ಅಜಯ್ ದೇವಗನ್ ರೀತಿ ಸ್ಟಂಟ್

ಅಜಯ್ ದೇವಗನ್ ರೀತಿ ಸ್ಟಂಟ್

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ನರಸಿಂಗ್ ಗಡ ಪೊಲೀಸ್ ಠಾಣೆಯ ಉಸ್ತುವಾರಿಯಾಗಿರುವ ಮನೋಜ್ ಯಾದವ್ ಎಂಬ ಪೊಲೀಸ್ ಅಧಿಕಾರಿ, ಅಜಯ್ ದೇವಗನ್ ಅವರಂತೆಯೇ ಸ್ಟಂಟ್ ಮಾಡಿದ್ದರು. ಅದರ ವಿಡಿಯೋವನ್ನೂ ಚಿತ್ರೀಕರಿಸಿದ್ದರು.

ಕಾರ್‌ಗಳ ಮೇಲೆ ನಿಂತು ಸಾಹಸ

ಕಾರ್‌ಗಳ ಮೇಲೆ ನಿಂತು ಸಾಹಸ

ನಿಧಾನವಾಗಿ ಚಲಿಸುವ ಎರಡು ಕಾರ್‌ಗಳ ಚಾವಣಿಯ ಮೇಲೆ ಆಚೆ ಈಚೆ ಎರಡು ಕಾಲುಗಳನ್ನು ಇರಿಸಿದ್ದರು. ಅಷ್ಟೇ ಅಲ್ಲ, ತಮ್ಮ ಈ ಸಾಹಸದ ವಿಡಿಯೋಕ್ಕೆ ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ' ಚಿತ್ರದ ಟೈಟಲ್ ಸಾಂಗ್‌ಅನ್ನೂ ಅಳವಡಿಸಿದ್ದರು. 'ಸಿಂಗಂ ಸಿಂಗಂ' ಅನ್ನೋ ಬಿಲ್ಡಪ್ ಹಾಡು ಪೊಲೀಸರಿಗೆ ಸಿಗುವುದು ಸಿನಿಮಾಗಳಲ್ಲಿ ಮಾತ್ರ ಎನ್ನುವುದನ್ನು ಅವರು ಮರೆತಿರಬೇಕು!

'ಸಿಂಗಂ'ನಿಂದ ಪ್ರಭಾವಿತ

'ಸಿಂಗಂ'ನಿಂದ ಪ್ರಭಾವಿತ

ಅಜಯ್ ದೇವಗನ್ 'ಪೂಲ್ ಔರ್ ಕಾಂಟೆ' ಚಿತ್ರದಲ್ಲಿ ಎರಡು ಬೈಕ್‌ಗಳ ಮೇಲೆ ನಿಂತು ಮಾಡಿದ್ದ ಸರ್ಕಸ್‌ಅನ್ನು 'ಗೋಲ್ ಮಾಲ್ ರಿಟರ್ನ್ಸ್' ಚಿತ್ರದಲ್ಲಿ ಎರಡು ಕಾರ್‌ಗಳ ಮೇಲೆ ನಿಲ್ಲುವ ಮೂಲಕ ಪುನರಾವರ್ತಿಸಿದ್ದರು. ಬಹುಶಃ ಮನೋಜ್ ಯಾದವ್ ಅವರು ಅಜಯ್ ದೇವಗನ್ ಅವರ 'ಸಿಂಗಂ' ಚಿತ್ರದಿಂದಲೂ ಪ್ರಭಾವಿತರಾಗಿದ್ದರು ಎನಿಸುತ್ತದೆ.

'ಸಿಂಗಂ'ಗೆ ದಂಡ

ಈ 'ಸಿಂಗಂ' ಬಿಲ್ಡಪ್‌ನಿಂದಾಗಿ ಮನೋಜ್ ಯಾದವ್ ಅವರಿಗೆ 5,000 ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಭವಿಷ್ಯದಲ್ಲಿ ಇಂತಹ ಹುಚ್ಚಾಟದ ಸಾಹಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಇದು ಕಿರಿಯರಿಗೆ ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ಮೇಲಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

More from Filmibeat

English summary
A cop from Madhya Pradesh fined Rs 5,000 after his video went viral of copying Ajay Devgan's Phool Aur Kaante stunt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X