ಇವಳೇನಾ ವೈರಲ್ ಹುಡುಗಿ ಮೊನಾಲಿಸಾ? ಆಗಲೇ ಸಿನಿಮಾನೂ ಶುರು ಆಯ್ತಾ?

Mahakumbh 2025 Monalisa: ಮಹಾಕುಂಭ ಮೇಳ 2025 ವಿಶ್ವದಾದ್ಯಂತ ಗಮನ ಸೆಳೆದಿದೆ. ಅದೇ ಇನ್ನು ಕೆಲವರು ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಅವರಲ್ಲಿ ಮಹಾಕುಂಭ ಮೇಳಕ್ಕೆ ಮಾಲೆಗಳನ್ನು ಮಾರಲು ಬಂದ ಮೊನಾಲಿಸಾ ಕೂಡ ಒಬ್ಬಳು. ಒಂದೇ ಒಂದು ವಿಡಿಯೋ ಈಕೆಯ ಜೀವನವನ್ನೇ ಬದಲಿಸಿದೆ. ರಾತ್ರೋ ರಾತ್ರಿ ಭಾರತದ ಸೆನ್ಸೆಷನ್ ಆಗಿಬಿಟ್ಟಿದ್ದಾಳೆ.

ಮೊನಾಲಿಸಾ ಕಣ್ಣುಗಳಿಗೆ ಭಾರತದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಕೆ ಹೋದಲ್ಲೆಲ್ಲಾ ಸೆಲ್ಫಿ, ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ರಾತ್ರೋ ರಾತ್ರಿ ಫೇಮಸ್ ಆಗಿದ್ದು ಆಕೆಯ ವ್ಯಾಪಾರಕ್ಕೆ ತೊಂದರೆ ಆಗಿದ್ದರೂ, ಜನಪ್ರಿಯತೆ ಉತ್ತುಂಗಕ್ಕೇರಿದೆ. ಕೆಲವೇ ದಿನಗಳಲ್ಲಿ ಮೊನಾಲಿಸಾ ಲಕ್ಷದಲ್ಲಿ ದುಡಿಯುತ್ತಿದ್ದಾರೆ ಅಂತ ಸುದ್ದಿಯಾಗಿತ್ತು.

Mahakumbh 2025 viral girl Monalisa movie video wearing blue saree fact check

ಹೌದು ಮೊನಾಲಿಸಾ ಈಗ ಸೋಶಿಯಲ್ ಮೀಡಿಯಾ ಸೆನ್ಸೇಷನ್. ಈಕೆಯನ್ನು ಹುಡುಕಿಕೊಂಡು ಸಿನಿಮಾ ಮಂದಿನೇ ಆಕೆಯ ಮನೆಯವರೆಗೂ ಹೋಗಿದ್ದಾರೆ. ಮೂಲಗಳ ಪ್ರಕಾರ, ಮೊನಾಲಿಸಾ ಒಂದು ಸಿನಿಮಾಗೂ ಸಹಿ ಹಾಕಿದ್ದೂ ಸುದ್ದಿ ಆಗಿದೆ. ಈ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅಸಲಿಗೆ ಈ ವಿಡಿಯೋ ಹಿನ್ನೆಲೆಯೇನು? ಯಾವ ಸಿನಿಮಾ? ಅನ್ನೋದನ್ನು ನೋಡೋಣ.

ಮಹಾಕುಂಭದ ವೈರಲ್ ಹುಡುಗಿ ಮೊನಾಲಿಸಾ ಇತ್ತೀಚೆಗಷ್ಟೇ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾಳೆ. ಸನೋಜ್ ಮಿಶ್ರಾ ಎಂಬ ನಿರ್ದೇಶಕ ಈಕೆ ತನ್ನ ಸಿನಿಮಾದಲ್ಲಿ ನಟಿಸುವುದಕ್ಕೆ ಆಫರ್ ಕೊಟ್ಟಿದ್ದ. ಆ ಸಿನಿಮಾದ ಹೆಸರು 'ದಿ ಡೈರಿ ಆಫ್ ಮಣಿಪುರ'. ಈ ಸುದ್ದಿ ಹೊರಬಿದ್ದ ಕೆಲವೇ ದಿನಗಳಲ್ಲಿ ಮೊನಾಲಿಸಾ ಸಿನಿಮಾದ ಹಾಡಿನಲ್ಲಿ ನಟಿಸುತ್ತಿರುವ ಮೇಕಿಂಗ್ ವಿಡಿಯೋ ಎಂದು ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮೊನಾಲಿಸಾ ನೀಲಿ ಸೀರೆಯುಟ್ಟು ಕಂಗೊಳಿಸಿದ್ದಾಳೆ. ಯಾವುದೋ ಬೀಚ್‌ನಲ್ಲಿ ಹಾಡೊಂದರಲ್ಲಿ ನಟಿಸುತ್ತಿದ್ದಾಳೆ. ಆ ವಿಡಿಯೋದಲ್ಲಿ ಆಕೆಯ ಕಣ್ಣುಗಳೇ ಸಂಚಲನ ಸೃಷ್ಟಿಸಿವೆ. ಈ ವಿಡಿಯೋ ನೋಡಿದ ಮೇಲೆ ನಾಯಕಿಯಾಗುವ ಎಲ್ಲಾ ಅರ್ಹತೆ ಆಕೆಗಿದೆ ಅಂತ ಅನಿಸುತ್ತೆ. ಮೊನಾಲಿಸಾ ಮೋಡಿಯನ್ನು ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದು ಒಂದೆರಡಲ್ಲ. ಕೆಲವರಂತೂ ಈಕೆಯ ವಿಡಿಯೋಗೆ ಕಳೆದೇ ಹೋಗಿದ್ದಾರೆ.

ವೈರಲ್ ಆಗುತ್ತಿರುವ ಮೊನಾಲಿಸಾಳ ಈ ವಿಡಿಯೋ ಕಾಮೆಂಟ್‌ಗಳು ಕೂಡ ಅಷ್ಟೇ ಮಜವಾಗಿವೆ. "ಅಯ್ಯೋ ಮೊನಾಲಿಸಾಳನ್ನು ಗುರುತು ಹಿಡಿಯುವುದಕ್ಕೆ ಆಗುತ್ತಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಮೊನಾಲಿಸಾ ಸುಂದರಿ ಎಂದು ನಾವು ಒಪ್ಪಿಕೊಳ್ಳಲೇಬೇಕು." ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಅರೇ.. ಯಾಕೆ ಇನ್ನೊಬ್ಬರ ಹೃದಯವನ್ನು ಹಾಳು ಮಾಡುತ್ತಿದ್ದೀರ" ಎಂದಿದ್ದಾರೆ. ಹಾಗೇ "ನಮಗೂ ಮೊನಾಲಿಸಾ ಹಾಗೇ ಫೇಮಸ್ ಆಗಬೇಕಿದೆ" ಎಂದು ಕಾಮೆಂಟ್ ಮಾಡಿದ್ದಾರೆ. " ಅಬ್ಬ ಸೀರೆಯಲ್ಲಂತೂ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾಳೆ" ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ, ಇದು ನಕಲಿ ವಿಡಿಯೋ ಅಂತ ನೆಟ್ಟಿಗರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ.

ni8.out9 ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಮೊನಾಲಿಸಾ ವಿಡಿಯೋ ಅಸಲಿಯಲ್ಲ ಎಂದು ಬರೆದುಕೊಳ್ಳಲಾಗಿದೆ. ಫೇಸ್ ಸ್ವ್ಯಾಪ್ ಅನ್ನೋ ತಂತ್ರಜ್ಞಾನವನ್ನು ಬಳಸಿಕೊಂಡು ಈ ವಿಡಿಯೋವನ್ನು ಸೃಷ್ಟಿಸಲಾಗಿದೆ. ಇದು ಕೇವಲ ಮನರಂಜನೆಯ ವಿಷಯವಾಗಿ ಮಾತ್ರ ಮಾಡಲಾಗಿದೆ ಎಂದು ಈ ಖಾತೆಯ ಹ್ಯಾಂಡಲ್ ಮಾಡುತ್ತಿರುವವರೇ ಸೂಚನೆ ನೀಡಿದ್ದಾರೆ. ಹಾಗಾಗಿ ಮೊನಾಲಿಸಾ ಇನ್ನೂ ಶೂಟಿಂಗ್ ಶುರು ಮಾಡಿಲ್ಲ. ಆದರೆ, ಎಐ ತಂತ್ರಜ್ಞಾನ ಆಕೆ ಚಿತ್ರೀಕರಣಕ್ಕೆ ಕಾಲಿಡುವುದಕ್ಕೂ ಮುನ್ನವೇ ಜನರಿಗೆ ಹೇಗೆ ಕಾಣಿಸಬಹುದು ಅನ್ನೋ ಅಂದಾಜು ಲೆಕ್ಕ ಕೊಟ್ಟಂತಿದೆ.

More from Filmibeat

English summary
Fack Check: Mahakumbh 2025 viral girl Monalisa movie video wearing blue saree
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X