ಮಹಾಕುಂಭದ ವೈರಲ್ ಹುಡುಗಿ ಹೀಗೆಲ್ಲ ಬದಲಾದಳೇ? ಮೊನಾಲಿಸಾ ಲುಕ್‌ಗೆ ಲಾಕ್ ಆದ ನೆಟ್ಟಿಗರು
Mahakumbh Monalisa: ಮಹಾಕುಂಭ ಮೇಳ 2025 ಹಲವು ಕಾರಣಗಳಿಗೆ ಸದ್ದು ಮಾಡುತ್ತಿದೆ. ಒಂದ್ಕಡೆ ಲಕ್ಷಾಂತರ ಮಂದಿ ಮಹಾಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಅದೇ ಇನ್ನೊಂದು ಕಡೆ ಕಾಲ್ತುಳಿತಕ್ಕೆ ಸಿಕ್ಕು ದುರಂತ ಕೂಡ ಸಂಭವಿಸಿದೆ. ಹೀಗೆ ಒಳಿತು, ಕೆಟ್ಟದರ ನಡುವೆ ಕೆಲವರು ಫೇಮಸ್ ಆಗಿಬಿಟ್ಟಿದ್ದಾರೆ. ಮೊದಲು ಐಐಟಿಯ ಬಾಬಾ ಟ್ರೆಂಡಿಂಗ್‌ನಲ್ಲಿ ಇದ್ದರೆ, ಈಗ ಕಣ್ಣುಗಳಿಂದಲೇ ಮ್ಯಾಜಿಕ್ ಮಾಡಿದ ಮೊನಾಲಿಸಾ ವೈರಲ್ ಆಗಿದ್ದಾಳೆ.
ಮಹಾಕುಂಭ ಮೇಳದಲ್ಲಿ ಮಾಲೆಗಳನ್ನು ಮಾರುವುದಕ್ಕೆ ಬಂದಿದ್ದ ಮೊನಾಲಿಸಾ ಕಣ್ಣುಗಳು ಆಕೆಯನ್ನು ರಾತ್ರೋ ರಾತ್ರಿ ಫೇಮಸ್ ಮಾಡಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಈಕೆ ವೈರಲ್ ಆಗುತ್ತಿದ್ದಂತೆ ಜನರು ಮೊನಾಲಿಸಾ ನೋಡುವುದಕ್ಕೆ ಮುಗಿಬಿದ್ದಿದ್ದರು. ಸೆಲ್ಫಿ ಅಂತ ಕಾಟ ಕೊಟ್ಟಿದ್ದರು. ಈ ಕಾಟ ತಡೆಯಲಾರದೆ ಮೊನಾಲಿಸಾ ತನ್ನೂರಿಗೆ ವಾಪಾಸ್ ಹೋಗಬೇಕಾಗಿತ್ತು.

ಅದೆಷ್ಟು ಬೇಗ ಫೇಮಸ್ ಆದಳೋ ಅಷ್ಟೇ ಅವಕಾಶಗಳು ಕೂಡ ಆಕೆಯನ್ನು ಹುಡುಕಿಕೊಂಡು ಬರುತ್ತಿದೆ. ಆಕೆಯ ಇನ್‌ಸ್ಟಾಗ್ರಾಂನಲ್ಲಿ ಹಾಕುವ ಒಂದೊಂದು ವಿಡಿಯೋ ಲಕ್ಷ ಲೆಕ್ಕದಲ್ಲಿ ವೀವ್ಸ್ ಪಡೆದುಕೊಳ್ಳುತ್ತಿದೆ. ಹೀಗೆ ಇತ್ತೀಚೆಗೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಮಾಲೆ ಮಾರುತ್ತಿದ್ದಾಗ ಇದ್ದ ಮೊನಾಲಿಸಾ ಮಾರ್ಡನ್ ಮೊನಾಲಿಸಾ ಆಗಿ ಬದಲಾದ ವಿಡಿಯೋ. ಅದನ್ನು ನೋಡಿ ನೆಟ್ಟಿಗರೇ ಹೌ ಹಾರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊನಾಲಿಸಾ ಸಂಪೂರ್ಣವಾಗಿ ಬದಲಾಗಿದ್ದಾಳೆ. ಕುಂಭಮೇಳಕ್ಕೆ ಬಂದು ವೈರಲ್ ಆದ ಬಳಿಕ ಮೊನಾಲಿಸಾ ಅಕ್ಷರಶ: ಸ್ಟಾರ್ ಆಗಿದ್ದಾಳೆ. ಈ ವಿಡಿಯೋದಲ್ಲಿ ಮೊನಾಲಿಸಾ ಸಿಕ್ಕಾಪಟ್ಟೆ ಸುಂದರವಾಗಿ ಕಾಣಿಸುತ್ತಿದ್ದಾಳೆ. ವೈರಲ್ ವಿಡಿಯೋದಲ್ಲಿ ಆಕೆಯನ್ನು ನೋಡಿ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲದಂತ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಯನ್ನು ನೋಡಿ ಕಳೆದು ಹೋಗಿದ್ದಾಳೆ.

ಅಂದ್ಹಾಗೆ ಮೊನಾಲಿಸಾ ಕೆಂಪು ಬಣ್ಣದ ಬಾಡಿಕಾನ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾಳೆ. ಹೀಗೆ ಮಾಡರ್ನ್ ಲುಕ್‌ನಲ್ಲಿ ಮೊನಾಲಿಸಾ ಲುಕ್ ಕೊಟ್ಟಿದ್ದು ನೋಡಿ ನೆಟ್ಟಿಗರು ಮನಸಿಗೆ ಬಂದಂತೆ ಹೊಗಳಿ ಅಟ್ಟಕ್ಕೇರಿಸಿದ್ದರು. ಕೆಲವರಂತೂ "ಏನಿದು ಮೊನಾಲಿಸಾ ತುಂಬಾನೇ ಬದಲಾಗಿದ್ದಾಳೆ" ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಯಾವ ಸಿನಿಮಾ ನಾಯಕಿಗೂ ಕಮ್ಮಿಯಿಲ್ಲ ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು.
ಅಸಲಿಗೆ ನೆಟ್ಟಿಗರು ಹೊಗಳಿದ್ದೆಲ್ಲ ಒಂದೇ ಕ್ಷಣದಲ್ಲಿ ವೇಸ್ಟ್ ಆಗಿ ಹೋಯ್ತು. ಯಾಕಂದ್ರೆ ಅದು ಒರಿಜಿನಲ್ ವಿಡಿಯೋ ಆಗಿರಲಿಲ್ಲ. ಮೊನಾಲಿಸಾ ವಿಡಿಯೋವನ್ನು ಕಿಡಿಗೇಡಿಗಳು AI ತಂತ್ರಜ್ಞಾನವನ್ನು ದುರಪಯೋಗಪಡಿಸಿಕೊಂಡು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಅದೇ ನಿಜ ಎಂದುಕೊಂಡು ಜನರು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡಿದ್ದೇ ಮಾಡಿದ್ದು. ಸದ್ಯ ಈ ವಿಡಿಯೋ ಇನ್‌ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಲಾಗಿದೆ.
ಹಾಗಂತ ಮೊನಾಲಿಸಾಗೇನು ಕ್ರೇಜ್ ಕಮ್ಮಿಯಾಗಿಲ್ಲ. ಸಿನಿಮಾ ಮಂದಿ ಮೊನಾಲಿಸಾ ಹಿಂದೆ ಬಿದ್ದಿದ್ದಾರೆ. ಇನ್ನೂ 16 ವರ್ಷದ ಈ ಹುಡುಗಿಯನ್ನು ಸಿನಿಮಾ ಮಂದಿ ಹುಡುಕಿಕೊಂಡು ಬರುತ್ತಿದ್ದಾರೆ. ಈಗಾಗಲೇ ಒಂದು ಸಿನಿಮಾಗೆ ಆಫರ್ ಕೂಡ ಸಿಕ್ಕಿದೆಯಂತೆ. 'ದಿ ಡೈರಿ ಆಫ್ ಮನಿಪುರ'ಗೆ ಆಫರ್ ಮಾಡಲಾಗಿದೆ ಅನ್ನೋದು ಸುದ್ದಿ. ಈ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರಾ ಈಗಾಗಲೇ ಮೊನಾಲಿಸಾ ಮನೆಗೆ ತೆರಳಿ ಆಕೆಯನ್ನು ಭೇಟಿಯಾಗಿ ಆಫರ್ ಕೊಟ್ಟಿದ್ದಾರೆ.


Click it and Unblock the Notifications











