ಸುಶಾಂತ್ ಗೆಳತಿ ರಿಯಾ ಜತೆ ತನಗಿರುವ ಸಂಬಂಧವೇನು?: ಮಹೇಶ್ ಭಟ್ ನೀಡಿದ ವಿವರಣೆ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ವಿವಾದಾತ್ಮಕ ನಿರ್ದೇಶಕ ಮಹೇಶ್ ಭಟ್, ಮುಂಬೈ ಪೊಲೀಸರ ಎದುರು ಸೋಮವಾರ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಾವಿಗೆ ಮಹೇಶ ಭಟ್ ಕಾರಣ ಎಂಬ ಆರೋಪವೂ ಇದೆ. ಅಲ್ಲದೆ, ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರಬೊರ್ತಿ ಮತ್ತು ಮಹೇಶ್ ಭಟ್ ನಡುವೆ ಸಂಬಂಧವಿತ್ತು ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.

Recommended Video

ಸುಧಾರಾಣಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಅಪೋಲೋ ಆಸ್ಪತ್ರೆ.

ಮಹೇಶ್ ಭಟ್ ಮತ್ತು ರಿಯಾ ಚಕ್ರಬೊರ್ತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್ ಆಗಿವೆ. ಸುಶಾಂತ್ ಜತೆಗೇ ನೆಲೆಸಿದ್ದ ರಿಯಾ, ಅವರು ಸಾಯುವ ಕೆಲವು ದಿನಗಳ ಮುಂಚೆಯಷ್ಟೇ ಜಗಳವಾಡಿಕೊಂಡು ಮನೆಬಿಟ್ಟಿದ್ದು, ಮಹೇಶ್ ಭಟ್ ಸಲಹೆಯಂತೆಯೇ ರಿಯಾ ನಡೆದುಕೊಳ್ಳುತ್ತಿದ್ದದ್ದು ಅನೇಕ ಅನುಮಾನಗಳಿಗೆ ಕಾರಣವಾಗಿವೆ. ಈ ಆರೋಪಗಳ ಕುರಿತು ಮಹೇಶ್ ಭಟ್, ಮುಂಬೈ ಪೊಲೀಸರ ಮುಂದೆ ವಿವರಣೆ ನೀಡಿದ್ದಾರೆ ಎಂದು ವರದಿಯಾಗಿದೆ. ಮುಂದೆ ಓದಿ...

ಎರಡು ಸಲ ಮಾತ್ರ ಭೇಟಿ

ಎರಡು ಸಲ ಮಾತ್ರ ಭೇಟಿ

ಸಾಂಟಾಕ್ರೂಜ್ ಪೊಲೀಸ್ ಸ್ಟೇಷನ್‌ನಲ್ಲಿ ಸೋಮವಾರ ಹೇಳಿಕೆ ದಾಖಲಿಸಿರುವ ಮಹೇಶ್ ಭಟ್ ತಿಳಿಸಿರುವ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಸುಶಾಂತ್ ಸಿಂಗ್ ರಜಪೂತ್ ಅವರನ್ನು 2018-2019ರ ಅವಧಿಯಲ್ಲಿ ಕೇವಲ ಎರಡು ಬಾರಿ ಭೇಟಿ ಮಾಡಿರುವುದಾಗಿ ಭಟ್ ಹೇಳಿದ್ದಾರೆ. ರಿಯಾ ಚಕ್ರಬೊರ್ತಿಯನ್ನು 'ಜಲೇಬಿ' ಚಿತ್ರಕ್ಕೆ ಹಾಕಿಕೊಂಡ ನಂತರ ಸುಶಾಂತ್‌ರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ.

ಗುರು ಎಂದೇ ಪರಿಗಣಿಸಿದ್ದರು

ಗುರು ಎಂದೇ ಪರಿಗಣಿಸಿದ್ದರು

'ಜಲೇಬಿ' ಚಿತ್ರದಲ್ಲಿ ಅವಕಾಶ ನೀಡಿದ್ದಾಗಿನಿಂದ ರಿಯಾ ತನ್ನನ್ನು ಮೆಂಟರ್ ಅಥವಾ ಗುರು ಎಂದೇ ಪರಿಗಣಿಸಿದ್ದರು. ಆ ಸಿನಿಮಾದ ಕಾರಣದಿಂದಾಗಿ ಮಾತ್ರವೇ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು ಎಂಬುದಾಗಿ ಮಹೇಶ್ ಭಟ್ ಹೇಳಿಕೆ ನೀಡಿದ್ದಾರೆ.

ಸುಶಾಂತ್ ಬಗ್ಗೆ ಚರ್ಚಿಸಿರಲಿಲ್ಲ

ಸುಶಾಂತ್ ಬಗ್ಗೆ ಚರ್ಚಿಸಿರಲಿಲ್ಲ

ತಮ್ಮ ಸಿನಿಮಾದಲ್ಲಿ ಯಾವ ಪಾತ್ರ ಸಿಕ್ಕರೂ ಅಡ್ಡಿಯಿಲ್ಲ, ಅದರಲ್ಲಿ ಮಾಡಲು ಸಿದ್ಧರಾಗಿರುವುದಾಗಿ ಸುಶಾಂತ್ ಸಿಂಗ್ ಬಯಕೆ ವ್ಯಕ್ತಪಡಿಸಿದ್ದರು. 1991ರಲ್ಲಿ ಬಿಡುಗಡೆಯಾದ 'ಸಡಕ್' ಚಿತ್ರದ ಸೀಕ್ವೆಲ್‌ನಲ್ಲಿ ಕೂಡ ಸಂಜಯ್ ದತ್ ಮುಖ್ಯ ಪಾತ್ರದಲ್ಲಿ ನಟಿಸಬೇಕಿತ್ತು. ರಿಯಾ ಅಥವಾ ಸುಶಾಂತ್‌ರನ್ನು 'ಸಡಕ್ 2'ನಲ್ಲಿ ಹಾಕಿಕೊಳ್ಳುವ ಬಗ್ಗೆ ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ರಿಯಾಗೆ ಹಾಗೆ ಸೂಚಿಸಿಲ್ಲ

ರಿಯಾಗೆ ಹಾಗೆ ಸೂಚಿಸಿಲ್ಲ

ನಮ್ಮ ನಿರ್ಮಾಣ ಸಂಸ್ಥೆ ಯಾವಾಗಲೂ ಹೊಸಬರಿಗೆ ಅವಕಾಶ ನೀಡುತ್ತದೆ ಎಂದು ಮಹೇಶ್ ಭಟ್ ಹೇಳಿಕೊಂಡಿದ್ದಾರೆ. ಹಾಗೆಯೇ ಸುಶಾಂತ್ ಸಿಂಗ್‌ರನ್ನು ಬಿಟ್ಟುಬರುವಂತೆ ರಿಯಾಗೆ ತಾನು ಸೂಚನೆ ನೀಡಿದ್ದಾಗಿ ಪ್ರಕಟವಾಗಿರುವ ವರದಿಗಳನ್ನು ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.

More from Filmibeat

English summary
Bollywood filmmaker Mahesh Bhatt recordes his statement to police on Sushant Singh Rajput's case said, he met the actor only twice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X