ನಾಲ್ಕು ವರ್ಷ ಡೇಟಿಂಗ್ ಬಳಿಕ ಮಲೈಕಾ ಅರೋರಾ-ಅರ್ಜುನ್ ಕರ್ಪೂರ್ ಬ್ರೇಕಪ್: ಅಸಲಿ ಸತ್ಯವೇನು?

ಪ್ರೀತಿಗೆ ವಯಸ್ಸು ಮುಖ್ಯ ಅಲ್ಲ ಅಂತ ಸಾರಿ ಹೇಳಿದ ಜೋಡಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್. ಇವರನ್ನು ಬಿಟ್ಟರೆ ಬಾಲಿವುಡ್‌ನಲ್ಲಿ ನೆನಪಾಗುವುದು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್. ಮದುವೆ, ಪ್ರೀತಿ ಅಂತ ಬಂದಾಗ ಎಲ್ಲಿರಗೂ ಈ ಎರಡು ಜೋಡಿನೇ ಕಣ್ಮುಂದೆ ಬರುತ್ತೆ. ಟ್ರೋಲ್‌ಗೆ ಸಿಕ್ಕಿಬೀಳುವವರು ಇವರೇನೆ. ಗಾಳಿಸುದ್ದಿಯಲ್ಲಿ ಸದ್ದು ಮಾಡುವವರು ಇವರೇ. ಈಗ ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ನಾಲ್ಕು ವರ್ಷದ ಪ್ರೀತಿಯಲ್ಲಿ ಬಿದ್ದಿದ್ದ ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಸಲ್ಮಾನ್ ಖಾನ್ ಕುಟುಂಬವನ್ನೇ ಎದುರು ಹಾಕಿಕೊಂಡಿದ್ದರು. ಬಾಲಿವುಡ್‌ನಲ್ಲಿ ಮಲೈಕಾ-ಅರ್ಜುನ್ ಲವ್ ಸ್ಟೋರಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಮೊದ ಮೊದಲು ಕ್ಯಾಮರಾ ತಪ್ಪಿಸಿಕೊಂಡು ಓಡಾಡುತ್ತಿದ್ದ ಜೋಡಿ ಇತ್ತೀಚೆಗೆ ಆರಾಮಾಗಿ ಸುತ್ತಾಡಿಕೊಂಡಿದೆ. ಮೊನ್ನೆ ಮೊನ್ನೆಯಷ್ಟೇ ರೊಮ್ಯಾಂಟಿಕ್ ಟೂರ್ ಮಾಡಿ ಬಂದ ಜೋಡಿಗ ಈಗ ಬ್ರೇಕಪ್ ಅಂದರೆ ಹೇಗೆ? ಅಸಲಿ ಕಾಡ್ಗಿಚ್ಚಿನಂತೆ ಹಬ್ಬಿರುವ ಈ ಜೋಡಿಯ ಬ್ರೇಕಪ್ ಕಹಾನಿಯ ಹಿಂದಿರುವ ಅಸಲಿ ಸತ್ಯವೇನು? ಅಂತ ತಿಳಿಯಲು ಮುಂದೆ ಓದಿ...

ಮಲೈಕಾ-ಅರ್ಜುನ್ ಬ್ರೇಕಪ್ ಸುದ್ದಿ

ಮಲೈಕಾ-ಅರ್ಜುನ್ ಬ್ರೇಕಪ್ ಸುದ್ದಿ

ಮಲೈಕಾ ಅರೋರಾ ಯಾವಾಗಲೂ ಜಿಮ್ಮು, ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿರುವ ನಟಿ. ಇತ್ತ ಅರ್ಜುನ್ ಕಪೂರ್ ಸಿನಿಮಾಗಳು ಹಿಟ್ ಆಗುತ್ತಿಲ್ಲ ಅಂದರೂ, ಕೈಯಲ್ಲಿ ಸಿನಿಮಾಗಳಲ್ಲ ಅಂತಲ್ಲ. ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರೂ, ಈ ಜೋಡಿ ಭೇಟಿ, ಪಾರ್ಟಿ ಮಾಡುವುದನ್ನು ನಿಲ್ಲಿಸಿರಲಿಲ್ಲ. ಆದರೆ, ಕಳೆದ ಆರು ದಿನಗಳಿಂದ ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಆಗಿಲ್ಲ. ಒದು ವಾರದಿಂದ ಅರ್ಜುನ್ ಕಪೂರ್ ಮುಖವನ್ನು ಮಲೈಕಾ ಅರೋರಾ ನೋಡಿಲ್ಲ ಅನ್ನುವುದು ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾತು. ಮಲೈಕಾ ಮನೆಗೆ ಅರ್ಜುನ್ ಕಪೂರ್ ಬಂದಿಲ್ಲ ಅನ್ನುವುದು ಒಂದು ಕಾರಣ. ಇದರ ಜೊತೆ ಇನ್ನೊಂದು ಪುಕಾರು ಕೂಡ ಹಬ್ಬಿದೆ.

ಪ್ರೇಮಿ ಮನೆಗೆ ಹೋಗಿಲ್ಲ ಅರ್ಜುನ್

ಪ್ರೇಮಿ ಮನೆಗೆ ಹೋಗಿಲ್ಲ ಅರ್ಜುನ್

ಅರ್ಜುನ್ ಕಪೂರ್ ಸಹೋದರಿ ರಿಯಾ ಕಪೂರ್ ನೆಲೆಸಿರುವ ಮನೆ ಸಮೀಪದಲ್ಲಿಯೇ ಮಲೈಕಾ ಅರೋರಾ ಮನೆಯಿದೆ. ಹೀಗಾಗಿ ಅರ್ಜುನ್ ಕಪೂರ್ ಅಲ್ಲಿ ಇಲ್ಲಿ ಓಡಾಡಿಕೊಂಡು ಇರುತ್ತಾರೆ. ಆದರೆ, ಅರ್ಜುನ್ ಕಪೂರ್ ಸಹೋದರಿ ರಿಯಾ ಮನೆಗೆ ಊಟಕ್ಕೆ ಬಂದು ಹೋಗಿದ್ದು, ಮಲೈಕಾ ಮನೆಗೆ ಭೇಟಿ ಕೂಡ ಕೊಟ್ಟಿಲ್ಲ ಎನ್ನುತ್ತಿವೆ. ಮಲೈಕಾನಾದರೂ ರಿಯಾ ಮನೆಗೆ ಬರಬಹುದಿತ್ತು. ಇಲ್ಲಾ ಅರ್ಜುನ್ ಕಪೂರ್ ಆದರೂ ಮಲೈಕಾ ಮನೆಗೆ ಹೋಗಬಹುದಿತ್ತು. ಅದು ನಡೆದಿಲ್ಲ ಅನ್ನುವುದು ಗಾಳಿಸುದ್ದಿಗೆ ಕಾರಣ. ಆದರೆ, ಇವರಿಬ್ಬರ ಬ್ರೇಕಪ್ ಸುದ್ದಿಗೆ ಇನ್ನೊಂದು ಮೂಲ ಬೇರೆನೇ ಹೇಳುತ್ತಿದೆ.

ಈ ಜೋಡಿ ಬಗ್ಗೆ ಏನಂತಿದೆ ಬಾಲಿವುಡ್

ಈ ಜೋಡಿ ಬಗ್ಗೆ ಏನಂತಿದೆ ಬಾಲಿವುಡ್

ಮಲೈಕಾ ಅರೋರಾ ಮನೆಯಿಂದ ಹೊರಬಾರದೆ ಇರಲು ಕಾರಣ ಕೊರೊನಾ ಭಯ. ಹೀಗಾಗಿ ಮನೆಯಿಂದ ತನ್ನ ಪ್ರೀತಿಯ ಸಾಕು ನಾಯಿಯನ್ನು ವಾಕಿಂಗ್ ಕರೆದುಕೊಂಡು ಬಂದಿಲ್ಲ. ಮುಂಬೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಹೊರಗೆ ಹೋಗದಿರಲು ನಿರ್ಧರಿಸಿದ್ದಾರೆ. ಅರ್ಜುನ್ ಹಾಗೂ ಮಲೈಕಾ ಅರೋರಾ ಸಂಬಂಧದಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ. ಇನ್ನೊಂದು ಕಡೆ ಅರ್ಜುನ್ ಕಪೂರ್ ಎರಡನೇ ಬಾರಿ ಕೊರೊನಾ ಸೋಂಕು ಧೃಡಪಟ್ಟಿದೆ. ಹೀಗಾಗಿ ಬಾಲಿವುಡ್ ನಟ ಕ್ವಾರಂಟೈನ್ ಆಗಿದ್ದಾರೆ ಎಂದು ಬಾಲಿವುಡ್ ಹೇಳುತ್ತಿದೆ. ಅರ್ಜುನ್ ಕಪೂರ್‌ಗೆ ಕೊರೊನಾ ಸೋಂಕು ತಗುಲಿದ್ದು, ಡಿಸೆಂಬರ್ 29ಕ್ಕೆ ಗೊತ್ತಾಗಿತ್ತು.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಿದ್ದ ಜೋಡಿ

ಈ ಗಾಳಿ ಸುದ್ದಿ ಹಬ್ಬುವ 5 ವಾರಗಳ ಹಿಂದಷ್ಟೇ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದಾರೆ. ಸ್ವತ: ಅರ್ಜುನ್ ಕಪೂರ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, "ಗರ್ಲ್‌ಫ್ರೆಂಡ್ ಟೈನರ್‌ಗಿಂತ ಕಠಿಣವಾಗಿದ್ದಾರೆ. ಹೇ ಡ್ರೀವ್ ನೀಲ್ ನಾನು ರಜೆಯಲ್ಲೂ ವರ್ಕ್‌ಔಟ್ ಮಾಡುತ್ತಿದ್ದೇನೆ." ಎಂದು ತನ್ನ ಟ್ರೈನರ್‌ಗೆ ಟ್ಯಾಗ್ ಮಾಡಿದ್ದರು. ಹೀಗಾಗಿ ಬ್ರೇಕಪ್ ಎಲ್ಲವೂ ಸುಳ್ಳು ಎಂದು ಇಬ್ಬರ ಆಪ್ತ ವಲಯ ಮಾಧ್ಯಮಗಳಿಗೆ ಮಾಹಿತಿ ರವಾನಿಸಿವೆ.

More from Filmibeat

English summary
After romantic vacation Malaika Arora and Arjun Kapoor breakup speculations is the talk of the town. But the truth is Malaika Arora didn't come out of the house because covid scare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X