ಕಂಗನಾ ಜೊತೆ ನಟಿಸಿದ್ದ ಮಲ್ಲಿಕಾ ರಜಪೂತ್ ಅನುಮಾನಾಸ್ಪದ ಸಾವು; ಯಾರೀ ನಟಿ? ಏನಿದು ಘಟನೆ?
ಬಾಲಿವುಡ್‌ನಲ್ಲಿಸ ಮತ್ತೊಂದು ದುರಂತ ನಡೆದಿದೆ. ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ನಟಿಸಿದ್ದ ಮಲ್ಲಿಕಾ ರಜಪೂತ್ ಅನುಮಾನಾಸ್ಪದವಾಗಿ ಅವರ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಈಕೆಯ ಸಾವಿನ ಸುದ್ದಿ ಹಿಂದಿ ಸಿನಿಮಾಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಈ ನಟಿಯ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿದ್ದರಿಂದ ಬಿಹಾರದ ಪೊಲೀಸರು ತನಿಖೆ ಶುರುಮಾಡಿದ್ದಾರೆ.
2014ರಲ್ಲಿ ತೆರೆಕಂಡಿದ್ದ ಕಂಗನಾ ರಣಾವತ್ ನಟನೆಯ ಕ್ರೈಂ ಕಾಮಿಡಿ ಸಿನಿಮಾ 'ರಿವಾಲ್ವರ್ ರಾಣಿ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಮಲ್ಲಿಕಾ ರಜಪೂತ್ ಬಾಲಿವುಡ್‌ನಲ್ಲಿ ನಟಿಯಷ್ಟೇ ಅಲ್ಲ. ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಅವರು ದೇಹ ಅವರ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ವೈದ್ಯರ ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಮಲ್ಲಿಕಾ ರಜಪೂತ್ ತಂಗಿದ್ದ ಕೋಣೆಯ ಬಾಗಿಲು ತೆರೆಯಲಿಲ್ಲ. ಹೀಗಾಗಿ ಅನುಮಾನ ಬಂದು ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದ್ದರು. ಅದಾಗಲೇ ಮಲ್ಲಿಕಾ ರಜಪೂತ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದು ಕಂಡು ಬಂದಿತ್ತು. ಸದ್ಯಕ್ಕೀಗ ಮಲ್ಲಿಕಾ ರಜಪೂತ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಈ ವರದಿ ಬಂದ ಕೂಡಲೇ ಆಕೆಯ ಸಾವಿಗೆ ಅಸಲಿ ಕಾರಣವೇನು ಅನ್ನೋದನ್ನು ಪೊಲೀಸರು ತಿಳಿಸಲಿದ್ದಾರೆ.
ಮಲ್ಲಿಕಾ ರಜಪೂತ್ ಸಾವಿನ ಸುದ್ದಿಯಿಂದ ಆಕೆಯ ತಾಯಿ ಮತ್ತು ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಮಲ್ಲಿಕಾ ರಜಪೂತ್ ತಾಯಿ ಸುಮಿತ್ರಾ ಸಿಂಗ್ ಪ್ರತಿಕ್ರಿಯೆ ನೀಡಿದ್ದು, "ಈ ಘಟನೆ ಯಾವಾಗ ಆಯ್ತು ಅನ್ನೋದು ಗೊತ್ತಿಲ್ಲ. ಅವಳ ಕೋಣೆಯ ಬಾಗಿಲು ಮುಚ್ಚಿತ್ತು. ಲೈಟ್ ಆನ್ ಆಗಿತ್ತು. ಮೂರರಿಂದ ನಾಲ್ಕು ಬಾರಿ ಬಾಗಿಲು ತಟ್ಟಿದೆ. ಆದರೆ, ಏನೂ ಸದ್ದು ಕೇಳಲಿಲ್ಲ. ಕಿಟಕಿಯಿಂದ ನೋಡಿದಾಗ ಅವಳ ದೇಹ ಫ್ಯಾನ್‌ಗೆ ನೇತಾಡುತ್ತಿರುವುದು ಕಾಣಿಸಿತು. ಕೂಡಲೇ ನನ್ನ ಪತಿಗೆ ಕರೆ ಹಾಗೂ ಉಳಿದ ಸದಸ್ಯರನ್ನು ಕರೆದೆ. ಆದರೆ, ಅವಳು ಬದುಕಲಿಲ್ಲ" ಎಂದು ಹೇಳಿದ್ದಾರೆ.
ಮಲ್ಲಿಕಾ ರಜಪೂತ್‌ಗೆ 35 ವರ್ಷ ವಯಸ್ಸಾಗಿತ್ತು. ಸಿನಿಮಾದಲ್ಲಿ ನಟಿಯಾಗಿ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಇಷ್ಟೇ ಅಲ್ಲದೆ, 2016ರಲ್ಲಿ ಪಾಲಿಟಿಕ್ಸ್‌ಗೆ ಕಾಲಿಟ್ಟಿದ್ದರು. ಭಾರತೀಯ ಜನತಾ ಪಾರ್ಟಿಗೆ ಸೇರಿಕೊಂಡಿದ್ದರು. ಆದರೆ, ಎರಡು ವರ್ಷಗಳ ಬಳಿಕ ಬಿಜೆಪಿ ತೊರೆದಿದ್ದರು. ಇತ್ತೀಚೆಗೆ ಸಿನಿಮಾ ಹಾಗೂ ರಾಜಕೀಯದಿಂದ ದೂರವಿದ್ದ ನಟಿ ಆಧ್ಯಾತ್ಮಕದ ಕಡೆಗೆ ವಾಲಿದ್ದರು ಎಂದು ವರದಿಯಾಗಿತ್ತು.
ಮಲ್ಲಿಕಾ ರಜಪೂತ್ ಕಥಕ್ ಡ್ಯಾನ್ಸ್ ಕೂಡ ಆಗಿದ್ದರು. ಇತ್ತೀಚೆಗೆ ಇವರು ತಾವೇ ಗಝಲ್‌ಗಳನ್ನು ಬರೆದು, ಅವುಗಳಿಗೆ ಪ್ರದರ್ಶನ ನೀಡುತ್ತಿದ್ದರು. ಆದರೆ, ಇದ್ದಕ್ಕಿದ್ದ ಹಾಗೇ ಅವರು ಸಾವಿಗೆ ಶರಣಾಗಿದ್ದಾರೆ. ಈ ಸುದ್ದು ಬಾಲಿವುಡ್ ಮಂದಿಗೆ ದೊಡ್ಡ ಶಾಕ್ ಕೊಟ್ಟಿದೆ.
ಈ ಸುದ್ದಿ ಪ್ರಚೋದಿಸಬಹುದು. ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಸಹಾಯ ಬೇಕಾದರೆ, ಈ ಸಹಾಯವಾಣಿಗಳಿಗೆ ಕರೆ ಮಾಡಿ: ಆಸ್ರಾ (ಮುಂಬೈ) 022-27546669, ಸ್ನೇಹಾ (ಚೆನ್ನೈ) 044-24640050, ಸುಮೈತ್ರಿ (ದೆಹಲಿ) 011-23389090, ಕೂಜ್ (ಗೋವಾ) 528325 ) 065-76453841, ಪ್ರತೀಕ್ಷಾ (ಕೊಚ್ಚಿ) 048-42448830, ಮೈತ್ರಿ (ಕೊಚ್ಚಿ) 0484-2540530, ರೋಶ್ನಿ (ಹೈದರಾಬಾದ್) 040-66202000, ಲೈಫ್‌ಲೈನ್ 033-646K4326.


Click it and Unblock the Notifications











