ಮಂದಿರಾ ಬೇಡಿಗೆ ಲಿಪ್ ಸರ್ಜರಿ ; ಶಾಂತ ಚಿತ್ತದಿಂದ ಶಾಂತಿ ನಾಯಕಿ ಹೇಳಿದ್ದೇನು..?

ಸೆಲೆಬ್ರೆಟಿಗಳಿಗೆ ತಮ್ಮ ಬ್ಯೂಟಿ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಮಂದಿರಾ ಬೇಡಿ ಹೊಸದಾಗಿ ಸೇರ್ಪಡೆಯಾಗಿದ್ದಾರಾ. ಗೊತ್ತ್ ಇಲ್ಲ.. ಆದರೆ ಇಂಥಹದ್ದೊಂದು ಅನುಮಾನ ಸದ್ಯಕ್ಕೆ ಅನೇಕರನ್ನ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಮಂದಿರಾ ಬೇಡಿ ಅವರನ್ನ ಟ್ರೋಲ್ ಕೂಡ ಮಾಡಲಾಗುತ್ತಿದೆ.

ಹೌದು, 1994ರ ಆಸು ಪಾಸಿನಲ್ಲಿ ಶಾಂತಿ ಧಾರಾವಾಹಿಯ ಮೂಲಕ ತಮ್ಮ ಛಾಪನ್ನ ಮೂಡಿಸಿದವರು ಮಂದಿರಾ ಬೇಡಿ. ಆ ನಂತರ.. ಇವರು ಹೆಚ್ಚು ಕಂಡಿದ್ದು ಕ್ರಿಕೆಟ್ ಮೈದಾನದಲ್ಲಿ. ಭಾರತದ ಮೊದಲ ಮಹಿಳಾ ಕ್ರೀಡಾ ನಿರೂಪಕಿಯಾಗಿ, ಮನೆ ಹಾಗೂ ಮನಗಳನ್ನ ತಲುಪಿದ ಮಂದಿರಾ ಸದ್ಯಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಫಿಟ್ನೆಸ್ ವಿಚಾರದಲ್ಲಿ ಆಗಾಗ ಟಿಪ್ಸ್ ಕೊಡ್ತಿರ್ತಾರೆ. ಫಿಟ್ ಆಂಡ್ ಫೈನ್ ಆಗಿರಲು ಏನೆಲ್ಲ ಮಾಡಬೇಕು ಎಂಬ ಪಾಠವನ್ನ ಮಂದಿರಾ ಮಾಡುತ್ತಿರುತ್ತಾರೆ.

Mandira Bedi Reply To Lip Surgery Speculations

ಮೊನ್ನೆಯೂ ಇದೇ ಫಿಟ್ನೆಸ್ ಪಾಠವನ್ನ ಮಂದಿರಾ ಮಾಡುವ ಸಮಯದಲ್ಲಿ, ಅನೇಕರು ಇವರನ್ನ ಟ್ರೋಲ್ ಮಾಡಿದ್ದಾರೆ. ಲಿಪ್ ಸರ್ಜರಿಗೆ ಮಂದಿರಾ ಬೇಡಿ ಒಳಗಾಗಿದ್ದಾರೆ ಅನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಸುಂದರವಾದ ತುಟಿಯನ್ನ ಹಾಳು ಮಾಡಿಕೊಳ್ಳುವುದರ ಜೊತೆ, ಮುಖವನ್ನೂ ಹಾಳು ಮಾಡಿಕೊಳ್ತೀರಾ ಎಂದು ಮಂದಿರಾ ಮೇಲೆ ಅನೇಕರು ಮುಗಿ ಬಿದ್ದಿದ್ದಾರೆ. ಇವರೆಲ್ಲರಿಗೆ ಈಗ ಮಂದಿರಾ ಬೇಡಿ ಉತ್ತರವನ್ನ ಕೊಟ್ಟಿದ್ದಾರೆ.

Mandira Bedi Reply To Lip Surgery Speculations

ತನ್ನ ಮುಖಚಹರೆಯನ್ನ ನಾಲ್ಕು ದಿಕ್ಕಿನಲ್ಲಿ ತೋರಿಸಿರುವ ಮಂದಿರಾ ಬೇಡಿ, ಇನ್ನೂ ಯಾರಲ್ಲಾದರೂ ಅನುಮಾನ ಇದೆಯಾ ಅಂದಿದ್ದಾರೆ. ಅಮರ್ ಪ್ರೇಮ್ ಚಿತ್ರಕ್ಕೆ ಕಿಶೋರ್ ಕುಮಾರ್ ಹಾಡಿದ್ದ 'ಕುಚ್ ತೋ ಲೋಗ್ ಕಹೆಂಗೆ' ಹಾಡಿನ ಮೂಲಕ ಮಾತನಾಡುವವರು ಹೇಗಿದ್ದರೂ ಮಾತಾಡ್ತಾನೇ ಇರ್ತಾರೆ ಎಂದು ಸಂದೇಶವನ್ನ ರವಾನಿಸಿದ್ದಾರೆ. ಸದ್ಯಕ್ಕೆ ಮಂದಿರಾ ಬೇಡಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಮಂದಿರಾ ಬೇಡಿ ವೃತ್ತಿ ಹಾಗೂ ಜೀವನ..!

ಶಾಂತಿ ಧಾರಾವಾಹಿ ಮೂಲಕ ಕಿರುತೆರೆಯನ್ನ ಪ್ರವೇಶಿಸಿದ ಮಂದಿರಾ ಬೇಡಿ ಆ ನಂತರ ಔರತ್, ಆಹತ್, ಘರ್ ಜಮಾತ್, ಸಿಐಡಿ, ಸಾರಾಭಾಯ್ ವರ್ಸಸ್ ಸಾರಾಭಾಯ್, ಕ್ಯೂಂಕಿ ಸಾಸ್ ಭಿ ಕಭಿ ಬಹು ಥೀ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ಅಭಿಮಾನಿಗಳನ್ನೂ ಸಂಪಾದಿಸಿದರು. ಆ ನಂತರ 2003 ಹಾಗೂ 2007 ಕ್ರಿಕೆಟ್ ವಿಶ್ವಕಪ್ ಹಾಗೂ 2004 ಮತ್ತು 2006ರ ಚಾಂಪಿಯನ್ಸ್ ಟ್ರೋಫಿಯ ನಿರೂಪಣೆಯನ್ನ ಮಂದಿರಾ ಬೇಡಿ ಮಾಡಿ ಸೈ ಅನಿಸಿಕೊಂಡರು. ಅನೇಕರಿಗೆ ಈ ಮೂಲಕ ಸ್ಫೂರ್ತಿಯೂ ಆದರು. ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ, ದಿ ತಾಷ್ಕೆಂಟ್ ಫೈಲ್ಸ್, ವೋಡ್ಕಾ ಡೈರೀಸ್, ಇತ್ತೇಫಾಕ್, ಓ ತೇರಿ, ಶಾದಿ ಕಾ ಲಡ್ಡೂ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ ಮಂದಿರಾ ಬೇಡಿ 1999ರಲ್ಲಿ ರಾಕ್ ಕೌಶಲ್ ಅವರನ್ನ ಮದುವೆಯಾದರು. ಜೂನ್ 30 2021ರಂದು ರಾಜ್ ಕೌಶಲ್ ಹೃದಯ ಸ್ತಂಭನದಿಂದ ನಿಧನರಾದರು.

More from Filmibeat

English summary
Bollywood Actress Mandira Bedi Gives a Befitting Reply To The Lip Surgery Speculations In Her New Post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X