"ನನ್ನ ವೃತ್ತಿ ಬದುಕಿಗೆ ಕೊಳ್ಳಿ ಇಟ್ಟಿದ್ದು ರಜನಿ ಸಿನಿಮಾ": 20 ವರ್ಷದ ಬಳಿಕ ಬಾಯ್ಬಿಟ್ಟ ಮನೀಶಾ ಕೊಯಿರಾಲಾ!

ಮನೀಶಾ ಕೊಯಿರಾಲಾ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಒಂದು ಸಿನಿಮಾದಲ್ಲೂ ಬಾಲಿವುಡ್ ನಟಿ ಮನೀಶಾ ಕೊಯಿರಾಲಾ ನಟಿಸಿದ್ದಾರೆ. ಬಾಲಿವುಡ್‌ಗಿಂತಲೂ ದಕ್ಷಿಣ ಭಾರತದ ಸಿನಿಮಾ ಸಿನಿಮಾದಲ್ಲಿ ಹೆಚ್ಚು ಸಕ್ಸಸ್ ಸಿಕ್ಕಿದೆ.

1995ರಲ್ಲಿ ತೆರೆಕಂಡ 'ಬಾಂಬೆ',1996ರಲ್ಲಿ ತೆರೆಕಂಡ 'ಇಂಡಿಯನ್',1999ರಲ್ಲಿ ತೆರೆಕಂಡ 'ಮುದಲ್ವನ್' ಅಂತ ಬ್ಲಾಕ್‌ ಬಸ್ಟರ್ ಸಿನಿಮಾಗಳಲ್ಲಿ ಮನೀಶಾ ಕೊಯಿರಾಲಾ ನಟಿಸಿದ್ದಾರೆ. ಈ ಮಟ್ಟಿಗೆ ಯಶಸ್ಸು ಕಂಡಿರೋ ಮನೀಶಾಗೆ ದಕ್ಷಿಣ ಭಾರತದಲ್ಲಿ ಆಫರ್‌ಗಳು ದಿಢೀರನೇ ಕಡಿಮೆಯಾದವು. ಅದು ಯಾಕೆ ಅನ್ನೋದನ್ನು ಈಗ ರಿವೀಲ್ ಮಾಡಿದ್ದಾರೆ.

Manisha Koirala says Rajinikanth Baba movie Finished Her Career In South

ಸೌತ್ ಸಿನಿಮಾಗಳಲ್ಲಿ ಅತೀ ದೊಡ್ಡ ಸಕ್ಸಸ್ ಕಂಡಿದ್ದ ನಟಿ ಮನೀಶಾ ಕೊಯಿರಾಲಾ. ಆದ್ರೀಗ ರಜನಿಕಾಂತ್ ಸಿನಿಮಾದಿಂದ್ಲೇ ದಕ್ಷಿಣ ಭಾರತದಲ್ಲಿ ವೃತ್ತಿ ಜೀವನ ಮುಳುಗಿ ಹೋಯ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ರಜನಿಯ ಯಾವ ಸಿನಿಮಾದಲ್ಲಿ ಮನೀಶಾ ನಟಿಸಿದ್ದರು? ಆ ಸಿನಿಮಾ ಇವರ ವೃತ್ತಿ ಬದುಕನ್ನು ಹೇಗೆ ಮುಳುಗಿಸಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದೆ.

"ರಜನಿಕಾಂತ್ ಸಿನಿಮಾದಿಂದ್ಲೇ ಆಫರ್ ಕಡಿಮೆ ಆಯ್ತು"

ಇತ್ತೀಚೆಗೆ ಮನೀಶಾ ಕೊಯಿರಾಲಾ ನೀಡಿದ ಸಂದರ್ಶನವೊಂದರಲ್ಲಿ ರಜನಿಕಾಂತ್ ಸಿನಿಮಾದಲ್ಲಿ ನಟಿಸಿದ ಬಳಿಕ ಏನಾಯ್ತು ಅನ್ನೋದನ್ನು ಬಿಡಿಸಿ ಹೇಳಿದ್ದಾರೆ. ಮನೀಶಾಗೆ ತಮಿಳು ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಇತ್ತು. ಆದರೆ, 2002ರಲ್ಲಿ ರಜನಿ ಜೊತೆ 'ಬಾಬಾ' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇಲ್ಲಿಂದ ಸೌತ್‌ನಲ್ಲಿ ತನ್ನ ವೃತ್ತಿ ಬದುಕು ಮುಳುಗಿ ಹೋಯ್ತು ಎಂದು ಹೇಳಿದ್ದಾರೆ.

"ಬಾಬಾ ತಮಿಳಿನಲ್ಲಿ ನನ್ನ ಕೊನೆಯ ಬಿಗ್ ಬಜೆಟ್ ಸಿನಿಮಾ. ಆ ದಿನಗಳಲ್ಲಿ ಈ ಸಿನಿಮಾ ಹೀನಾಯವಾಗಿ ಸೋತಿತ್ತು. ಬಹಳ ನಿರೀಕ್ಷೆಯಿಂದ ರಿಲೀಸ್ ಆಗಿದ್ದ ಸಿನಿಮಾ ಸೋತು ಸುಣ್ಣವಾಗಿತ್ತು. ಆಗಲೇ ನನ್ನ ವೃತ್ತಿ ಬದುಕು ಮುಗಿದು ಹೋಯ್ತು ಅಂತ ಅಂದುಕೊಂಡೆ. ಅದು ಹಾಗೇ ಆಯ್ತು." ಎಂದು ನಟಿ ಮನೀಶಾ ಕೊಯಿರಾಲಾ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

Manisha Koirala says Rajinikanth Baba movie Finished Her Career In South

"ಬಾಬಾಗೂ ಮುನ್ನ ಆಫರ್ ಬರುತ್ತಿತ್ತು"

ರಜನಿಕಾಂತ್ ಜೊತೆ ಸಿನಿಮಾ ಮಾಡಬೇಕು ಅನ್ನೋ ಆಸೆ ಅದೆಷ್ಟೋ ನಟಿಯರಿಗೆ ಇದ್ದೇ ಇರುತ್ತೆ. ಅವರಲ್ಲಿ ಕೆಲವರಿಗೆ ಮಾತ್ರ ಆ ಅವಕಾಶ ಸಿಗುತ್ತೆ. ಅನೀಶಾ ಕೊಯಿರಾಲಾಗೂ ಇಂತಹದ್ದೊಂದು ಅವಕಾಶ ಸಿಕ್ಕಿತ್ತು. ಆದರೆ, ಆ ಸಿನಿಮಾ ದಕ್ಷಿಣದಲ್ಲಿ ಅವರ ವೃತ್ತಿ ಬದುಕಿಗೆ ಕೊಳ್ಳಿ ಇಟ್ಟಿತ್ತು. ಈ ಮಾತನ್ನು ಸ್ವತ: ಬಾಲಿವುಡ್ ನಟಿಯೇ ಹೇಳಿಕೊಂಡಿದ್ದು, ಬಾಬಾಗೂ ಮುನ್ನ ಹಲವು ಆಫರ್‌ಗಳು ಬರುತ್ತಿತ್ತು ಎಂದಿದ್ದಾರೆ.

"ಬಾಬಾ ಸಿನಿಮಾಗಿಂತಲೂ ಮುನ್ನ ದಕ್ಷಿಣ ಭಾರತದಲ್ಲಿ ನನಗೆ ಹಲವು ಆಫರ್‌ಗಳು ಬಂದಿದ್ದವು. ಬಾಬಾ ಸೋಲಿನ ಬಳಿಕ ಆಫರ್‌ ಬರೋದು ನಿಂತು ಹೋಯ್ತು." ಎಂದು ರಜನಿ ಸಿನಿಮಾದಿಂದಲೇ ದಕ್ಷಿಣದಲ್ಲಿ ನನ್ನ ವೃತ್ತಿ ಬದುಕು ಮುಗಿದು ಹೋಯ್ತು ಎಂದು ಮನೀಶಾ ಆರೋಪಿಸಿದ್ದಾರೆ.

ವಿತರಕರಿಗೆ ಹಣ ಹಿಂತಿರುಗಿಸಿದ್ದ ರಜನಿಕಾಂತ್

'ಬಾಬಾ' ಸಿನಿಮಾಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರೇ ಕಥೆ ಹಾಗೂ ಚಿತ್ರಕಥೆ ಬರೆದು, ನಿರ್ಮಾಣ ಕೂಡ ಮಾಡಿದ್ದರು. ಆಗಿನ ಕಾಲದಲ್ಲಿ ಸಕ್ಸಸ್‌ಪುಲ್ ಸಿನಿಮಾಗಳನ್ನು ಕೊಟ್ಟಿದ್ದ ಸುರೇಶ್ ಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೂ, ಬಾಕ್ಸಾಫೀಸ್‌ನಲ್ಲಿ 'ಬಾಬಾ' ಸೋತಿತ್ತು. ಬಳಿಕ ವಿತರಕರಿಗೆ ರಜನಿ ಹಣವನ್ನು ಹಿಂತಿರುಗಿಸಿದ್ದರು.

'ಬಾಬಾ' ತೆರೆಕಂಡು 20 ವರ್ಷಗಳ ಬಳಿಕ ಒಂದಿಷ್ಟು ಬದಲಾವಣೆಗಳೊಂದಿಗೆ ಮತ್ತೆ ರಿಲೀಸ್ ಆಗಿತ್ತು. ರಜನಿ ಹುಟ್ಟುಹಬ್ಬದಂದೇ ಬಿಡುಗಡೆಯಾಗಿದ್ದ ಸಿನಿಮಾಗೆ ಡಿಸೆಂಟ್ ಆಗಿ ಕಲೆಕ್ಷನ್ ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ 'ಬಾಬಾ' ಹಿಟ್ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಘೋಷಣೆ ಮಾಡಿದ್ದಾರೆ.

"ರಜನಿ ಸರ್ ಪ್ಲಾಪ್ ಸಿನಿಮಾಗಳನ್ನೇ ನೀಡಿರಲಿಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿ. ಅವ್ರೊಂದಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತ್ತು." ಎಂದು ಮನೀಶಾ ಕೊಯಿರಾಲಾ ಕೊನೆಯಲ್ಲಿ ಹೇಳಿದ್ದಾರೆ. ಇತ್ತೀಚೆಗೆ ಮನೀಶಾ ಬಾಲಿವುಡ್‌ ಸಿನಿಮಾ 'ಶೆಹಜಾದ'ದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಸಂಜಯ್ ಲೀಲಾ ಬನ್ಸಾಲಿಯ ವೆಬ್‌ ಸೀರಿಸ್ 'ಹೀರಾಮಂಡಿ'ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Manisha Koirala says Rajinikanth Baba movie Finished Her Career In South. After Baba movie flop in the boxoffice she stopped getting offers, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X