ವೈವಾಹಿಕ ಬದುಕಿಗೆ ಅಂತ್ಯ ಹಾಡಿದ ನಟಿ ಮಿನಿಶಾ ಲಂಬಾ

ಬಾಲಿವುಡ್ ನಟಿ ಮಿನಿಶಾ ಲಂಬಾ ಮತ್ತು ರೆಸ್ಟೋರೆಂಟ್ ಉದ್ಯಮಿ ರಿಯಾನ್ ಥಾಮ್ ಅವರ ವೈವಾಹಿಕ ಬದುಕು ಅಂತ್ಯಗೊಂಡಿದೆ. ಇಬ್ಬರೂ ಪರಸ್ಪರ ಒಪ್ಪಂದದ ಮೇರೆಗೆ ದೂರವಾಗಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಬಂದಿದ್ದು, ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವದಂತಿಗಳು ಈ ಹಿಂದೆಯೂ ಹರಡಿತ್ತು. ತಮ್ಮ ಖಾಸಗಿ ಬದುಕಿನ ಸಂಗತಿಗಳನ್ನು ಆದಷ್ಟು ಗೋಪ್ಯವಾಗಿರಿಸಿಕೊಂಡಿದ್ದ ಮನಿಶಾ, ರಿಯಾನ್ ಥಾಮ್‌ರಿಂದ ಬೇರ್ಪಟ್ಟ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

Recommended Video

ಇನ್ಮುಂದೆ ಸೇನೆಯ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭ ಇಲ್ಲ | Filmibeat Kannada

ಮಿನಿಶಾ ಮತ್ತು ಥಾಮ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದಾರೆ ಎಂಬ ವರದಿಗಳು 2018ರ ಅಕ್ಟೋಬರ್‌ನಲ್ಲಿ ಪ್ರಕಟವಾಗಿದ್ದವು. ಇವುಗಳನ್ನು ಮಿನಿಶಾ ಖಚಿತಪಡಿಸಿರಲಿಲ್ಲ. ನಿರಾಕರಿಸಿಯೂ ಇರಲಿಲ್ಲ. ಸಾರ್ವಜನಿಕ ಸಂಪರ್ಕದಿಂದ ಆದಷ್ಟು ದೂರವೇ ಉಳಿದಿದ್ದ ಅವರು, ಕೊನೆಗೂ ಮಾಧ್ಯಮವೊಂದರ ಜತೆ ಮಾತನಾಡಿದ್ದಾರೆ. ಅದರಲ್ಲಿ ತಾವು ಬೇರ್ಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಬಿಕಿನಿ ದೃಶ್ಯಗಳಿಂದಲೇ ಹೆಚ್ಚು ಸುದ್ದಿಯಾಗಿದ್ದ ಮಿನಿಶಾ, ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ಫೋಟೊಗಳನ್ನು ಹಾಕಿ ತಮ್ಮ ವರ್ಚಸ್ಸು ಕಡಿಮೆಯಾಗಿಲ್ಲ ಎಂಬುದನ್ನು ಸಾರುತ್ತಿರುತ್ತಾರೆ. ಮುಂದೆ ಓದಿ...

ವಿಚ್ಚೇದನ ಪಡೆದುಕೊಂಡಿದ್ದೇವೆ

ವಿಚ್ಚೇದನ ಪಡೆದುಕೊಂಡಿದ್ದೇವೆ

'ರಿಯಾನ್ ಮತ್ತು ನಾನು ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗಿದ್ದೇವೆ. ಇಬ್ಬರೂ ಕಾನೂನು ಬದ್ಧವಾಗಿಯೂ ಬೇರ್ಪಡುವ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ' ಎಂದು ಕಾನೂನು ಪ್ರಕಾರವಾಗಿ ಕೂಡ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದೇವೆ ಎಂಬುದನ್ನು ತಿಳಿಸಿದ್ದಾರೆ.

ಮನಸ್ತಾಪದಿಂದ ದೂರ

ಮನಸ್ತಾಪದಿಂದ ದೂರ

ಮದುವೆಯಾಗಿ ಕೆಲವು ಸಮಯದಲ್ಲಿಯೇ ಇಬ್ಬರ ಮಧ್ಯೆ ಮನಸ್ತಾಪ ಶುರುವಾಗಿತ್ತು. ಅದನ್ನು ಸರಿಪಡಿಸುವ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. ಕೊನೆಗೆ ಈ ಸಂಬಂಧವನ್ನು ಸರಿ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಹದಗೆಟ್ಟಿತು. ಹೀಗಾಗಿ ಮದುವೆಯನ್ನು ಅಂತ್ಯಗೊಳಿಸಲು ತೀರ್ಮಾನಿಸಿದರು.

ಮದುವೆಯನ್ನೂ ಗುಟ್ಟಾಗಿರಿಸಿದ್ದರು

ಮದುವೆಯನ್ನೂ ಗುಟ್ಟಾಗಿರಿಸಿದ್ದರು

ಮುಂಬೈನ ಜುಹುದಲ್ಲಿ ರಿಯಾನ್ ಅವರ ಟ್ರಿಯೊಲಜಿ ನೈಟ್ ಕ್ಲಬ್‌ನಲ್ಲಿ 2013ರಲ್ಲಿ ಇಬ್ಬರೂ ಭೇಟಿಯಾಗಿದ್ದರು. ಸುಮಾರು ಎರಡು ವರ್ಷ ಡೇಟಿಂಗ್ ನಡೆಸಿದ್ದ ಇಬ್ಬರೂ, 2015ರ ಜುಲೈ 6ರಂದು ನಡೆದ ಸರಳ ಸಮಾರಂಭದಲ್ಲಿ ಮದುವೆಯಾಗಿದ್ದರು. ಈ ಸುದ್ದಿಯನ್ನು ಮಿನಿಶಾ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿರಲಿಲ್ಲ. ನಟಿ ಮತ್ತು ರಿಯಾನ್ ಅವರ ಸಂಬಂಧಿ ಪೂಜಾ ಬೇಡಿ ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದರಿಂದ ಬಹಿರಂಗವಾಗಿತ್ತು.

ಮಿನಿಶಾ ಸಿನಿಮಾಗಳು

ಮಿನಿಶಾ ಸಿನಿಮಾಗಳು

ಮಿನಿಶಾ ಲಂಬಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ನಿರಂತರ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಆದರೆ ರಿಯಾನ್ ಜತೆಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರಲಿಲ್ಲ. 2005ರಲ್ಲಿ ಯಹಾನ್ ಚಿತ್ರದ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ ಹನಿಮೂನ್ ಟ್ರಾವೆಲ್ಸ್, ದಸ್ ಕಹಾನಿಯಾನ್, ಬಚ್ನಾ ಏ ಹಸೀನೋ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಭೂಮಿ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. 2014ರಲ್ಲಿ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದರು.

More from Filmibeat

English summary
Bollywood actress Minissha Lamba has confirmed that her marriage relationship with restauranter Ryan Tham has ended in a divorce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X