ಬಾಲಿವುಡ್ ಸೆಲೆಬ್ರೆಟಿಗಳು ಮದುವೆ ಸೇಮ್ ಟು ಸೇಮ್: ವಸ್ತ್ರ ವಿನ್ಯಾಸ,ಸನ್ ಕಿಸ್, ಹಾರ ಎಲ್ಲಾ ಸೇಮ್!
ಬಾಲಿವುಡ್ ಸೆಲೆಬ್ರೆಟಿಗಳು ಒಬ್ಬೊಬ್ಬರಾಗಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ಟಾರ್‌ಗಳ ದುಬಾರಿ ಮದುವೆ ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದೂ ಇದೆ. ಅಭಿಮಾನಿಗಳಿಗೂ ತಾರೆಯರು ಹೇಗೆ ಮದುವೆ ಆಗುತ್ತಿದ್ದಾರೆ? ಅನ್ನೋದನ್ನು ನೋಡುವುದೇ ಒಂದು ಸಂಭ್ರಮ.
ಇತ್ತ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಒಬ್ಬರಿಗಿಂತ ಒಬ್ಬರು ಶ್ರೀಮಂತಿಕೆಯಿಂದ ಮದುವೆಯಾಗುತ್ತಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಆಲಿಯಾ-ರಣ್‌ಬೀರ್ ಕಪೂರ್,ವಿಕ್ಕಿ ಕೌಶಲ್-ಕತ್ರಿನಾ ಕೈಫ್, ಈಗ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇತ್ತೀಚೆಗೆ ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಎಲ್ಲಾ ಬಾಲಿವುಡ್ ಸೆಲೆಬ್ರೆಟಿಗಳ ಮದುವೆ ಒಂದೇ ರೀತಿಯಿದೆ. ಇವರು ಶೇರ್ ಮಾಡಿದ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

ಮದುವೆ ಮ್ಯಾಟರ್ ಯಾರು ಒಪ್ಪಿಲ್ಲ
ಅನುಷ್ಕಾ ವಿರಾಟ್, ಆಲಿಯಾ ರಣ್‌ಬೀರ್,ವಿಕ್ಕಿ ಕೌಶಲ್ ಕತ್ರಿನಾ ಕೈಫ್, ಕಿಯಾರಾ ಸಿದ್ಧಾರ್ಥ್ ಮದುವೆ ವಿಚಾರ ತಿಂಗಳುಗಳ ಮುಂಚೆನೇ ಮಾಧ್ಯಮಗಳು ರಿವೀಲ್ ಮಾಡಿದ್ದವು. ಮದುವೆ ದಿನಾಂಕ, ಗೆಸ್ಟ್ ಲಿಸ್ಟ್, ಫುಡ್ ಎಲ್ಲವನ್ನೂ ರಿವೀಲ್ ಮಾಡಲಾಗಿತ್ತು. ಮದುವೆ ಮ್ಯಾಟರ್ ರಿವೀಲ್ ಆಗಿದ್ದರೂ, ಈ ಸೆಲೆಬ್ರೆಟಿಗಳು ಮಾತ್ರ ಒಪ್ಪಿಕೊಂಡಿರಲೇ ಇಲ್ಲ.

ಕಾಸ್ಟ್ಯೂಮ್ ಸೇಮ್ ಟು ಸೇಮ್
ಬಾಲಿವುಡ್ ತಾರೆಯರು ಮದುವೆ ವೇಳೆ ಧರಿಸಿದ್ದ ಉಡುಗೆಗಳನ್ನೂ ಕಾಪಿ ಮಾಡಲಾಗಿದೆ. ಅನುಷ್ಕಾ ಶರ್ಮಾ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರು. ಇದೇ ಕಾಸ್ಟ್ಯೂಮ್ ಅನ್ನು ಆಲಿಯಾ ಭಟ್, ಅಥಿಯಾ ಶೆಟ್ಟಿ, ಕಿಯಾರಾ ಅಡ್ವಾಣಿ, ನೇಹಾ ದೂಪಿಯಾ, ನೇಹಾ ಕಕ್ಕರ್ ಧರಿಸಿದ್ದರು. ಹಾಗೇ ಸೋನಮ್ ಕಪೂರ್, ಪ್ರಿಯಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಟ್ರೆಡಿಷನಲ್ ರೆಡ್ ಡ್ರಾಪಸ್ ಧರಿಸಿದ್ದಾರೆ.

ಕ್ಯಾಮರಾಗೆ ಸೇಮ್ ಪೋಸ್
ಬಾಲಿವುಡ್ ತಾರೆಯರ ಕಾಸ್ಟ್ಯೂಮ್ ಅಷ್ಟೇ ಅಲ್ಲ ಕ್ಯಾಮರಾಗೆ ಪೋಸ್ ಕೊಡೋ ಸ್ಟೈಲ್ ಕೂಡ ಸೇಮ್. ರಣ್‌ಬೀರ್ ಆಲಿಯಾಗೆ, ವಿಕ್ಕಿ ಕತ್ರಿನಾ ಕೈಫ್‌ಗೆ, ಕಿಯಾರಾ ಸಿದ್ಧಾರ್ಥ್‌ಗೆ ಮದುವೆ ಬಳಿಕ ಕ್ಯಾಮರಾಗೆ ಕೊಟ್ಟ ಸನ್ ಕಿಸ್ ಕೂಡ ಸೇಮ್ ಟು ಸೇಮ್. ಪರ್ಫೆಕ್ಟ್ ಪಿಕ್ಚರ್ ನೀಡಿದರೂ ಕಾಪಿ ಮಾಡಿದ್ದಾರೆ ಅಂತ ಟ್ರೋಲ್ ಮಾಡಲಾಗಿದೆ.

ಕಿಯಾರಾ ಸಿದ್ ಮದುವೆ ಬಳಿಕ ಟ್ರೋಲ್
ಅಷ್ಟಕ್ಕೂ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಟಾರ್ ಸೆಲೆಬ್ರೆಟಿಗಳ ಮದುವೆ ಟ್ರೋಲ್ ಆಗುವುದಕ್ಕೆ ಕಾರಣ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ. ಈ ಜೋಡಿಯ ಮದುವೆ ಕೂಡ ಈ ಹಿಂದೆ ಮದುವೆಯಾದ ಬಾಲಿವುಡ್ ಸೆಲೆಬ್ರೆಟಿಗಳ ಶೈಲಿಯಂತೆಯೇ ಇದೆ. ಹೀಗಾಗಿ ಎಲ್ಲರ ಫೋಟೊಗಳನ್ನು ಇಟ್ಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











