'ಮದರ್ ಇಂಡಿಯಾ' ಖ್ಯಾತಿಯ ಹಿರಿಯ ನಟಿ ಕುಂಕುಮ್ ನಿಧನ

'ಮದರ್ ಇಂಡಿಯಾ', 'ಕೊಹಿನೂರ್', 'ಉಜಾಲಾ', 'ಏಕ್ ಸಪೇರಾ ಏಕ್ ಲೂಟೇರಾ', 'ನಯಾ ದೌರ್'ನಂತಹ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಕುಂಕುಮ್ (86) ಮಂಗಳವಾರ ನಿಧನರಾದರು. ನೂರಕ್ಕೂ ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.

Recommended Video

Madagaja ಚತ್ರೀಕರಣ ನಡೆದಿದ್ದು ಹೇಗೆ , ನಿರ್ದೇಶಕ Mahesh ಹೇಳ್ತಾರೆ ಕೇಳಿ | Filmibeat Kannada

ಬಿಹಾರದ ಹುಸೇನಾಬಾದ್‌ನಲ್ಲಿ 1934ರಂದು ಜನಿಸಿದ್ದ ಕುಂಕುಮ್, ಅವರ ನಿಧನದ ಸುದ್ದಿಯನ್ನು ನಟ ಜಾನಿ ವಾಕರ್ ಮಗ ನಾಸಿರ್ ಖಾನ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ.

ಕುಂಕುಮ್ ಅವರ ತಂದೆ ಹುಸೇನಾಬಾದ್‌ನ ನವಾಬರಾಗಿದ್ದು, ಉನ್ನತ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಗುರುದತ್ ಕಣ್ಣಿಗೆ ಬಿದ್ದ ಅವರನ್ನು 1954ರಲ್ಲಿ 'ಆರ್ ಪ್ಯಾರ್' ಚಿತ್ರದ ಬಹು ಜನಪ್ರಿಯ ಗೀತೆ 'ಕಬಿ ಆರ್ ಕಬಿ ಪಾರ್ ಲಾಗಾ ತೇರೆ ನಜರ್' ಗೀತೆಯಲ್ಲಿ ಬಳಸಿಕೊಂಡಿದ್ದರು. ಮುಂದೆ ಓದಿ..

ಗುರುದತ್ ಅವರಿಂದ ಪರಿಚಯ

ಗುರುದತ್ ಅವರಿಂದ ಪರಿಚಯ

ಈ ಹಾಡನ್ನು ಮೊದಲು ಜಾವೇದ್ ಜಾಫ್ರಿ ತಂದೆ ಜಗದೀಪ್ ಅವರ ಮೇಲೆ ಚಿತ್ರಿಸಲು ಯೋಚಿಸಲಾಗಿತ್ತು. ಆದರೆ ಗುರುದತ್ ಈ ಹಾಡಲ್ಲಿ ಮಹಿಳಾ ಪಾತ್ರಧಾರಿ ಇದ್ದರೆ ಚೆನ್ನಾಗಿರುತ್ತದೆ ಎಂದು ಬಯಸಿದರು. ಸಿನಿಮಾವೊಂದರಲ್ಲಿ ಕೇವಲ ಹಾಡಿಗಾಗಿ ಕಾಣಿಸಿಕೊಳ್ಳಲು ಯಾವುದೇ ಪ್ರಮುಖ ನಟಿಯರು ಸಿದ್ಧರಿರಲಿಲ್ಲ. ಆಗ ಕುಂಕುಮ್ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ವಿವಿಧ ಸಿನಿಮಾಗಳಲ್ಲಿ ನಟನೆ

ವಿವಿಧ ಸಿನಿಮಾಗಳಲ್ಲಿ ನಟನೆ

1957ರಲ್ಲಿ 'ಪ್ಯಾಸಾ', 1956ರಲ್ಲಿ 'ಮೇಮ್ ಸಾಹೇಬ್', 1959ರಲ್ಲಿ 'ಚಾರ್ ದಿಲ್ ಚಾರ್ ರಾಹೀನ್' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಮೊದಲ ಹಾಡು ಹಿಟ್ ಆದ ಬಳಿಕ 1956ರಲ್ಲಿ 'ಸಿಐಡಿ' ಚಿತ್ರದ ಮತ್ತೊಂದು ಯಶಸ್ವಿ ಗೀತೆ 'ಯೇ ಹೈ ಬಾಂಬೆ ಮೇರಿ ಜಾನ್' ಹಾಡಿನಲ್ಲಿ ಕೂಡ ಕಾಣಿಸಿಕೊಂಡರು. ಸುಮಾರು 115 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಮೊದಲ ಭೋಜಪುರಿ ಚಿತ್ರದ ನಾಯಕಿ

ಮೊದಲ ಭೋಜಪುರಿ ಚಿತ್ರದ ನಾಯಕಿ

ಭೋಜಪುರಿ ಚಿತ್ರರಂಗದ ಮೊದಲ ಸಿನಿಮಾ 'ಗಂಗಾ ಮೈಯಾ ತೋಹೆ ಪಿಯಾರಿ ಚಾಧೈಬೊ'ದಲ್ಲಿ ನಾಯಕಿಯಾಗಿದ್ದ ಖ್ಯಾತಿ ಅವರದು. ಮಿ. ಎಕ್ಸ್ ಬಾಂಬೆ, ಸನ್ ಆಫ್ ಇಂಡಿಯಾ, ಶ್ರೀಮನ್ ಫಂಟೂಶ್, ಗಂಗಾ ಕಿ ಲಾಹರೆನ್, ರಾಜಾ ಔರ್ ರುಂಕ್, ಆಂಖೇನ್, ಲಾಲ್ಕಾರ್, ಗೀತ್ ಮುಂತಾದವು ಅವರು ನಟಿಸಿದ ಪ್ರಮುಖ ಚಿತ್ರಗಳು. ಬಳಿಕ ಅವರು ಭೋಜಪುರಿ ಚಿತ್ರಗಳಲ್ಲಿ ಹೆಚ್ಚು ನಟಿಸಿದರು.

ನಾಸಿರ್ ಖಾನ್ ಸಂತಾಪ

ನಾಸಿರ್ ಖಾನ್ ಸಂತಾಪ

'ಹಿರಿಯ ತಲೆಮಾರಿನ ನಟಿ ಕುಂಕುಮ್ ಆಂಟಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮೇಲೆ ಹಾಡುಗಳು ಮತ್ತು ನೃತ್ಯಗಳು ಚಿತ್ರಿಸಲಾಗಿವೆ. ನನ್ನ ತಂದೆ ಜಾನಿ ವಾಕರ್ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ' ಎಂದು ನಟ ನಾಸಿರ್ ಖಾನ್ ತಿಳಿಸಿದ್ದಾರೆ.

ಅಮೂಲ್ಯ ರತ್ನ

ಅಮೂಲ್ಯ ರತ್ನ

ಮತ್ತೊಂದು ಅಮೂಲ್ಯ ರತ್ನವನ್ನು ನಾವು ಕಳೆದುಕೊಂಡಿದ್ದೇವೆ. ನಾನು ಚಿಕ್ಕವನಿಂದಾಗಿನಿಂದಲೂ ಅವರನ್ನು ನೋಡಿದ್ದೇನೆ. ಅವರು ನಮ್ಮ ಕುಟುಂಬದವರಾಗಿದ್ದರು. ಅದ್ಭುತ ಕಲಾವಿದೆ ಮತ್ತು ಮಹಾನ್ ಮಾನವೀಯ ವ್ಯಕ್ತಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಜಾವೇದ್ ಜಾಫ್ರಿ ಟ್ವೀಟ್ ಮಾಡಿದ್ದಾರೆ.

More from Filmibeat

English summary
Veteran bollywood actress Kumkum (86), best known for Mother India, Kohinoor, Ujala passed away on Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X