"ಎರಡು ತಿಂಗಳು ವೇಶ್ಯಾಗೃಹದಲ್ಲಿದ್ದೆ.. ಆ ವೇಳೆ ನಾನು ಖಿನ್ನತೆಗೆ ಒಳಗಾಗಿದ್ದೆ": ನಟಿ ಮೃಣಾಲ್ ಠಾಕೂರ್
ಮೃಣಾಲ್ ಠಾಕೂರ್ ಬಾಲಿವುಡ್‌ನ ಪ್ರಬುದ್ಧ ನಟಿಯರಲ್ಲಿ ಒಬ್ಬರು. ಕಿರುತೆರೆಯಿಂದ ವೃತ್ತಿ ಬದುಕು ಆರಂಭಿಸಿದ್ದ ಮೃಣಾಲ್ ಠಾಕೂರ್ ಸದ್ಯಕ್ಕೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ನಟಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ.
ತೆಲುಗಿಗೆ ಎಂಟ್ರಿ ಕೊಡುವುದಕ್ಕಿಂತ ಮೊದಲು ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇವರಿಗೆ ಅದ್ಭುತ ಎನ್ನುವಂತಹ ಯಶಸ್ಸು ಸಿಕ್ಕಿರಲಿಲ್ಲ. ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಸಕ್ಸಸ್ ಕೂಡ ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಸದ್ಯ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಮೃಣಾಲ್ ಠಾಕೂರ್ ಕೂಡ ಒಬ್ಬರಾಗಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಇತ್ತೀಚೆಗೆ ನಟಿಸಿದ್ದ 'ಫ್ಯಾಮಿಲಿ ಮ್ಯಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದೆ. ಇದು ತೆಲುಗಿನ ಕಂಡ ಮೊದಲ ಕಹಿ ಅನುಭವ. ಅದೇನೆ ಇದ್ದರೂ ಮೃಣಾಲ್ ಠಾಕೂರ್ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಇತ್ತೀಚೆಗೆ ಈ ನಟಿ ಸಿನಿಮಾದ ಪಾತ್ರಕ್ಕಾಗಿ ವೇಶ್ಯಾಗೃಹಕ್ಕೆ ಎರಡು ತಿಂಗಳು ವಾಸ್ತವ್ಯ ಹೂಡಿದ್ದರು. ಈ ವೇಳೆ ಆಕೆಗಾದ ಅನುಭವವೇನು? ಅನ್ನೋದನ್ನು ಹೇಳಿಕೊಂಡಿದ್ದಾರೆ.
ನಟನೆ ಅಂದರೆ ಹಾಗೇನೆ. ಕೆಲವೊಮ್ಮೆ ಪಾತ್ರಕ್ಕಾಗಿ ಕೆಲವು ಅನುಭವಗಳು ಬೇಕಾಗುತ್ತವೆ. ಮತ್ತೆ ಕೆಲವು ಸಂದರ್ಭದಲ್ಲಿ ಕಣ್ಣಾರೆ ನೋಡಬೇಕಾಗುತ್ತೆ. ಇದಕ್ಕಾಗಿ ನಟಿಯರು ಕೆಲವೊಮ್ಮೆ ಹೈ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಾರೆ. ಮೃಣಾಲ್ ಠಾಕೂರ್ ಕೂಡ ಪಾತ್ರವೊಂದಕ್ಕೆ ಇಂತಹದ್ದೇ ರಿಸ್ಕ್ ತೆಗೆದುಕೊಂಡಿದ್ದರು. ಅದನ್ನು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
2018ರಲ್ಲಿ ಮೃಣಾಲ್ ಠಾಕೂರ್ 'ಲವ್ ಸೋನಿಯಾ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಯ ಪಾತ್ರ ತನ್ನ ತಂಗಿಯನ್ನು ಮಹಿಳಾ ಕಳ್ಳಸಾಗಣೆಯಿಂದ ರಕ್ಷಿಸುವುದಾಗಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ತಮ್ಮ ಪಾತ್ರದಲ್ಲಿ ನೈಜತೆ ಇರಬೇಕೆಂಬ ಉದ್ದೇಶದಿಂದ ಎರಡು ತಿಂಗಳುಗಳ ಕಾಲ ವೇಶ್ಯಾಗೃಹದಲ್ಲಿ ಇದ್ದಿದ್ದಾಗಿ ಹೇಳಿಕೊಂಡಿದ್ದರು. ಇದರಿಂದ ಮೃಣಾಲ್ ಠಾಕೂರ್ ಖಿನ್ನತೆಗೆ ಒಳಗಾಗಿದ್ದರಂತೆ.

ಖಿನ್ನತೆಯಿಂದ ಹೊರ ಬರುವುದಕ್ಕೆ ಮೃಣಾಲ್ ಠಾಕೂರ್ ಸಿಕ್ಕಾಪಟ್ಟೆ ಪ್ರಯತ್ನ ಪಟ್ಟಿದ್ದರಂತೆ. ಆ ವೇಳೆ 'ಲವ್ ಸೋನಿಯಾ' ಸಿನಿಮಾದ ನಿರ್ದೇಶಕ ತಬ್ರೇಜ್ ನೂರಾನಿ ಈ ನಟಿಯ ಬೆಂಬಲಕ್ಕೆ ನಿಂತಿದ್ದರು. ಅವರಿಂದಾಗಿಯೇ ಆ ಪಾತ್ರದಿಂದ ಹೊರಬಂದಿದ್ದರು. ಆ ನಿರ್ದೇಶಕ ಇಲ್ಲದೇ ಹೋಗಿದ್ದರೆ, ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಮೃಣಾಲ್ ಠಾಕೂರ್ ಹೇಳಿಕೊಂಡಿದ್ದಾರೆ.
ಮೃಣಾಲ್ ಠಾಕೂರ್ ಸದ್ಯ ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟಿಸಿದ 'ಫ್ಯಾಮಿಲಿ ಸ್ಟಾರ್' ಸಿನಿಮಾ ಸೋಲುಂಡಿದೆ. ಇದರ ಹೊರತಾಗಿಯೂ ಮೃಣಾಲ್ ಕೈಯಲ್ಲಿ ಸಿನಿಮಾವಿದೆ. ಬಾಲಿವುಡ್‌ನಲ್ಲಿ ಮೃಣಾಲ್ ಠಾಕೂರ್ 'ಪೂಜಾ ಮೇರಿ ಜಾನ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದು, ಅದು ಸದ್ಯಕ್ಕೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.


Click it and Unblock the Notifications











