ಧನುಷ್ ಆಯ್ತು..ಈಗ ಶ್ರೇಯಸ್ ಐಯ್ಯರ್; ಮೃಣಾಲ್ ಠಾಕೂರ್ ಡೇಟ್ ಮಾಡ್ತಿರೋದ್ಯಾರನ್ನ? ಇನ್‌ಸ್ಟಾ ಸ್ಟೋರಿ ಏನಂತಿದೆ?
ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ಮೃಣಾಲ್ ಠಾಕೂರ್. ತೆಲುಗು 'ಸೀತಾ ರಾಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಮೃಣಾಲ್ ಠಾಕೂರ್ ಚಿರಪರಿಚಿತ. ಇತ್ತೀಚೆಗೆ ಇವರ ಸಿನಿಮಾಗಳು ಮಾತಾಡುವುದಕ್ಕಿಂತ ಹೆಚ್ಚಾಗಿ ಡೇಟಿಂಗ್ ಮ್ಯಾಟರ್ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ ಇವರ ಹೆಸರು ಇಬ್ಬರು ನಟರೊಂದಿಗೆ ತಳುಕು ಹಾಕಿಕೊಂಡಿದೆ.
ಕೆಲವು ದಿನಗಳ ಹಿಂದಷ್ಟೇ ಮೃಣಾಲ್ ಠಾಕೂರ್ ಹೆಸರು ತಮಿಳಿನ ಸ್ಟಾರ್ ನಟ ಧನುಷ್ ಜೊತೆ ತಳುಕು ಹಾಕಿಕೊಂಡಿತ್ತು. ರಜನಿಕಾಂತ್ ಪುತ್ರಿಗೆ ವಿಚ್ಛೇದನ ನೀಡಿದ ಬಳಿಕ ಧನುಷ್ ಮತ್ತೆ ಚಿಗುರಿದೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಮೃಣಾಲ್ ಠಾಕೂರ್ ಜೊತೆ ಧನುಷ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುವುದಕ್ಕೆ ಶುರುವಾಗಿತ್ತು. ಈ ಜೊತೆಗೆ ಒಂದಿಷ್ಟು ಫೋಟೊಗಳು ಕೂಡ ಇಂಟರ್‌ನೆಟ್‌ನಲ್ಲಿ ಓಡಾಡಿತ್ತು.

ಧನುಷ್ ಜೊತೆಗಿನ ಡೇಟಿಂಗ್ ರೂಮರ್ ತಣ್ಣಗಾಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಶ್ರೇಯಸ್ ಐಯ್ಯರ್ ಜೊತೆ ಮೃಣಾಲ್ ಠಾಕೂರ್ ಹೆಸರು ತಳುಕು ಹಾಕಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಡೇಟಿಂಗ್ ಮ್ಯಾಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದಕ್ಕೆ ಮೃಣಾಲ್ ಠಾಕೂರ್ ಇನ್‌ಸ್ಟಾ ಸ್ಟೋರಿ ಮೂಲಕ ಪರೋಕ್ಷ ಪ್ರತಿಕ್ರಿಯೆ ನೀಡಿದ್ದಾರೆ.
ತಮಿಳು ನಟ ಧನುಷ್ ಹಾಗೂ ಮೃಣಾಲ್ ಠಾಕೂರ್ ಇಬ್ಬರೂ ತಮ್ಮ ಪೋಸ್ಟ್‌ಗಳಿಗೆ ಕಮೆಂಟ್ ಮಾಡಿದ ಸ್ಕೀನ್‌ಶಾಟ್ ವೈರಲ್ ಆಗಿತ್ತು. ಇಲ್ಲಿಂದ ಧನುಷ್ ಹಾಗೂ ಮೃಣಾಲ್ ಠಾಕೂರ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆ ಸಮಯದಲ್ಲಿ ಮೃಣಾಲ್ ಠಾಕೂರ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಹಾಗೇ ಧನುಷ್ ಕೂಡ ಡೇಟಿಂಗ್ ರೂಮರ್ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಇದರ ಹಿಂದೆ ಕ್ರಿಕೆಟರ್ ಶ್ರೇಯರ್ ಸುದ್ದಿ ಸದ್ದು ಮಾಡುತ್ತಿದೆ.

ರೆಡಿಟ್‌ನಲ್ಲಿ ಮೃಣಾಲ್ ಹಾಗೂ ಶ್ರೇಯಸ್ ಅಯ್ಯರ್ ಡೇಟಿಂಗ್ ಬಗ್ಗೆ ಚರ್ಚೆಯಾಗುತ್ತಿತ್ತು. ಇಬ್ಬರೂ ಕೆಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ, ಈ ವಿಷಯವನ್ನು ಇಬ್ಬರೂ ಯಾರಿಗೂ ಗೊತ್ತಾಗದ ಹಾಗೇ ಈ ವಿಷಯವನ್ನು ಮುಚ್ಚಿಟ್ಟಿದ್ದಾರೆಂದು ಆ ಫೋಸ್ಟ್‌ನಲ್ಲಿ ಹೇಳಲಾಗಿತ್ತು. ಕೂಡಲೇ ಈ ಪೋಸ್ಟ್ ವೈರಲ್ ಆಗುವುದಕ್ಕೆ ಶುರುವಾಗಿತ್ತು. ಇದು ಮೃಣಾಲ್ ಗಮನಕ್ಕೆ ಬರುತ್ತಿದ್ದಂತೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾನುವಾರ ರಾತ್ರಿ ಮೃಣಾಲ್ ಠಾಕೂರ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಸ್ಟೋರಿಯನ್ನು ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ಮೃಣಾಲ್ ಠಾಕೂರ್ ಅವರ ತಾಯಿಯೊಂದಿಗೆ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದರು. ಈ ವಿಡಿಯೋದಲ್ಲಿ ಮೃಣಾಲ್ ವ್ಯಂಗ್ಯವಾಗಿ ನಕ್ಕಿದ್ದು, ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. " ಅವರು ಮಾತಾಡುತ್ತಾರೆ.. ನಾವು ನಗುತ್ತೇವೆ. ಹಾಗೇ ಗಾಳಿಸುದ್ದಿಗಳು ಪುಕ್ಕಟೆ ಪ್ರಚಾರ ನೀಡುತ್ತವೆ. ನನಗೆ ಫ್ರೀಯಾಗಿ ಸಿಗುವ ವಸ್ತು ಅಂದರೆ, ಬಲು ಇಷ್ಟ" ಎಂದು ಮೃಣಾಲ್ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ಮೃಣಾಲ್ ಠಾಕೂರ್ ಆಗಲಿ, ಶ್ರೇಯಸ್ ಅಯ್ಯರ್ ಆಗಲಿ ಈ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಈ ಇನ್‌ಸ್ಟಗ್ರಾಂ ಸ್ಟೋರಿ ವೈರಲ್ ಆಗಿದ್ದು, ಮೃಣಾಲ್-ಶ್ರೇಯಸ್ ನಡುವಿನ ಗಾಳಿ ಸುದ್ದಿಗೆ ತೆರೆ ಎಳೆದಿದಂತಾಗಿದೆ. ಈ ಪೋಸ್ಟ್ ಕೂಡ ಈಗ ವೈರಲ್ ಆಗುತ್ತಿದೆ. ಸದ್ಯ ಮೃಣಾಲ್ ಠಾಕೂರ್ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಿದ್ದಾರೆ. 'ದೊ ದಿವಾವಳೆ ಶಹರ್ ಮೇ' ಶೂಟಿಂಗ್ ನಡೆಯುತ್ತಿದೆ. 'ಡಕಾಯಿತಿ; ಎ ಲವ್ ಸ್ಟೋರಿ', 'ಹೇ ಜವಾನಿ ತೋ ಇಷ್ಕ್ ಹೋನಾ ಹೇ', 'ಪೂಜಾ ಮೇರಿ ಜಾನ್', ಅಲ್ಲು ಅರ್ಜುನ್ ಸಿನಿಮಾ 'AA22xA6' ಸಿನಿಮಾ ಕೈಯಲ್ಲಿದೆ.


Click it and Unblock the Notifications











