"ಶ್ರೀದೇವಿ ಮಗಳು ಬಂದ್ಲು ಅಂತ ನನ್ನನ್ನು ಕ್ಯಾರೆ ಅನ್ಲಿಲ್ಲ"; ಅವತ್ತು ಮೃಣಾಲ್ ಠಾಕೂರ್‌ಗೆ ಅವಮಾನ!
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ನೀಡಿದ ಸಂದರ್ಶನ ವೈರಲ್ ಆಗುತ್ತಿದೆ. ಚಿತ್ರರಂಗಕ್ಕೆ ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸ್ಟಾರ್ ಪಟ್ಟಕ್ಕೇರಿದ ನಟಿಯೀಕೆ. ತೆಲುಗಿನ 'ಸೀತಾರಾಮಂ' ಸಿನಿಮಾ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಮೃಣಾಲ್ ಇಂದು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ಬಹುಬೇಡಿಕೆಯ ನಟಿ.
ಮೃಣಾಲ್ ಠಾಕೂರ್ ತಮಗೆ ಅನಿಸಿದ್ದನ್ನು ನೇರವಾಗಿಯೇ ಹೇಳುತ್ತಾರೆ. ತಮಗೆ ತಪ್ಪು ಅನಿಸಿದ್ದನ್ನು ನಿರ್ಭಯವಾಗಿ ವಿರೋಧಿಸುತ್ತಾರೆ. ಈ ಕಾರಣಕ್ಕೆ ಸಾಕಷ್ಟು ಮಂದಿ ಅವರ ಅಭಿಮಾನಿ ಆಗಿದ್ದೂ ಇದೆ. ಚಿತ್ರರಂಗದಲ್ಲಿ ತುಂಬಾನೇ ಚರ್ಚೆಯಾಗುತ್ತಿರುವ ಸ್ವಜನಪಕ್ಷಪಾತದ (Nepotism) ಬಗ್ಗೆ ಇವೆಂಟ್‌ವೊಂದರಲ್ಲಿ ಓಪನ್ ಆಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

'ನೆಪೊಟಿಸಂ' ಬಗ್ಗೆ ಮಾತಾಡುವಾಗ ಬಾಲಿವುಡ್ ಸ್ಟಾರ್ ಕಿಡ್ ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ಮಾತಾಡಿದ್ದಾರೆ. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ಶ್ರೀದೇವಿ ಮಗಳ ಬಗ್ಗೆ, ಬಾಲಿವುಡ್ ಸ್ಟಾರ್ ಕಿಡ್‌ಗಳ ಬಗ್ಗೆ ಮೃಣಾಲ್ ಠಾಕೂರ್ ಹೇಳಿದ್ದೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ..
ಕೆಲವು ದಿನಗಳ ಹಿಂದೆ ಚಿತ್ರರಂಗದಲ್ಲಿರೋ ನೆಪೊಟಿಸಂ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅದರಲ್ಲೂ ಬಾಲಿವುಡ್ ಸ್ಟಾರ್ ಕಿಡ್‌ಗಳ ಬಗ್ಗೆ ಕೆಲವರು ತಿರುಗಿಬಿದ್ದಿದ್ದರು. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಅನನ್ಯಾ ಪಾಂಡೆ, ಆಲಿಯಾ ಭಟ್ ಸೇರಿದಂತೆ ಯುವ ನಟರನ್ನು ಟಾರ್ಗೆಟ್ ಮಾಡಿದ್ದರು. ಈಗ ಮೃಣಾಲ್ ಠಾಕೂರ್‌ಗೂ ನೆಪೊಟಿಸಂ ಬಗ್ಗೆ ಕೇಳಲಾದ ಪ್ರಶ್ನೆಗೆ ಜಾಹ್ನವಿ ಕಪೂರ್ ಹಾಗೂ ಅನನ್ಯಾ ಪಾಂಡೆ ಹೆಸರನ್ನು ಮುಂದಿಟ್ಟುಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

"ಸಿನಿಮಾರಂಗದಲ್ಲಿ ನೆಪೊಟಿಸಂ' ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ, ಪ್ರಮುಖವಾದ ಅಂಶ ಏನಂದ್ರೆ, ಸ್ಟಾರ್ ಕಿಡ್ ಆಗಿ ಹುಟ್ಟಿರುವುದು ಅವರ ತಪ್ಪಲ್ಲ. ಸ್ಟಾರ್ ಫ್ಯಾಮಿಲಿಯಲ್ಲಿ ಜಾಹ್ನವಿ ಕಪೂರ್ ಹಾಗೂ ಅನನ್ಯ ಪಾಂಡೆ ಜನಿಸಿದ್ದು ಅವರ ತಪ್ಪಲ್ಲ. ಆದರೆ, ಮಾಧ್ಯಮಗಳು ಮತ್ತು ಜನರು ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕು." ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಮೃಣಾಲ್ ಠಾಕೂರ್ ಪ್ರಶಸ್ತ್ರಿ ಪ್ರಧಾನ ಸಮಾರಂಭದಲ್ಲಿ ಮಾಧ್ಯಮಗಳ ವರ್ತಿಸಿದ ಬಗ್ಗೆ ಅಸಮಧಾನ ಹೊರ ಹಾಕಿದ್ದರು. ಶ್ರೀದೇವಿ ಪುತ್ರಿ ಪ್ರಶಸ್ತಿ ಸಮಾರಂಭಕ್ಕೆ ಬಂದಾಗ ಮಾಧ್ಯಮಗಳ ವರ್ತನೆಯನ್ನು ಪ್ರಶ್ನೆ ಮಾಡಿದ್ದಾರೆ.
"ಇತ್ತೀಚೆಗೆ ನಾನು ಸಿನಿಮಾ ಇವೆಂಟ್ ಒಂದಕ್ಕೆ ಹೋಗಿದ್ದೆ. ಆ ವೇಳೆ ಮಾಧ್ಯಮಗಳೊಂದಿಗೆ ಮಾತಾಡುತ್ತಿದ್ದೆ. ಆ ವೇಳೆ ಜಾಹ್ನವಿ ಕಪೂರ್ ಎಂಟ್ರಿ ಕೊಟ್ಟರು. ಅವರನ್ನು ನೋಡುತ್ತಿದ್ದಂತೆ ನನ್ನನ್ನು ಬಿಟ್ಟು ಇಡೀ ಮಾಧ್ಯಮಗಳು ಅವರ ಹಿಂದೆ ಓಡಿ ಹೋದವು. ಒಂದು ವೇಳೆ ಜಾಹ್ನವಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಆ ಇವೆಂಟ್‌ನಲ್ಲಿ ನನಗೆ ಮಾತಾಡುವುದಕ್ಕೂ ಬಿಡುತ್ತಿರಲಿಲ್ಲ. ಮಾಧ್ಯಮಗಳು ಹೀಗೆ ಕೆಲಸ ಮಾಡುವುದನ್ನು ಬಿಡಬೇಕು." ಎಂದು ತಮಗಾದ ಅವಮಾನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.


Click it and Unblock the Notifications











