ರಹಸ್ಯವಾಗಿ ಐಸಿಯುನಲ್ಲಿದ್ದ ಧರ್ಮೇಂದ್ರ ವಿಡಿಯೋ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಬಂಧನ; ಕುಟುಂಬದ ಮನವಿಯೇನು?

ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅನಾರೋಗ್ಯ ಅವರ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ. ಕೆಲವು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿ ಸೇರಿಕೊಂಡಿತ್ತು.

ಈಗ ಕುಟುಂಬಸ್ಥರ ಮನವಿ ಮೇರೆಗೆ ಧರ್ಮೇಂದ್ರ ಅವರನ್ನು ಮನೆಗೆ ಶಿಫ್ಟ್ ಮಾಡಲಾಗಿದೆ. ಮುಂಬೈನಲ್ಲಿರುವ ಅವರ ನಿವಾಸದಲ್ಲಿಯೇ ಧರ್ಮೇಂದ್ರ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಧರ್ಮೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಬಾಲಿವುಡ್‌fನ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು.

Mumbai Breach Candy hospital employee arrested for secretly filming Bollywood Legend Dharmendra in ICU

ಇಂತಹ ಕಷ್ಟದ ಸಮಯದಲ್ಲಿ ಧರ್ಮೇಂದ್ರ ನಿಧನರಾಗಿದ್ದಾರೆಂಬ ಸುದ್ದಿ ಹಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಹೇಮಾ ಮಾಲಿನಿ ಹಾಗೂ ಪುತ್ರಿ ಇಶಾ ಡಿಯೋಲ್ ಸೇರಿದಂತೆ ಇಡೀ ಕುಟುಂಬ ಮಾಧ್ಯಮಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಸಮಯದಲ್ಲಿಯೇ ಮತ್ತೊಂದು ಘಟನೆ ನಡೆದಿತ್ತು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಸಿಬ್ಬಂದಿ ಧರ್ಮೇಂದ್ರ ಐಸಿಯುನಲ್ಲಿರುವುದನ್ನು ರಹಸ್ಯವಾಗಿ ವಿಡಿಯೋ ಮಾಡಿದ್ದರು. ಆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಧರ್ಮೇಂದ್ರ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಆಸ್ಪತ್ರೆಯ ಒಳಗಿನಿಂದ ವಿಡಿಯೋ ಮಾಡಲಾಗಿತ್ತು. ಅದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಧರ್ಮೇಂದ್ರ ಅವರ ಕುಟುಂಬ ಆ ವಿಡಿಯೋ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದ್ದಂತೆ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರಹಸ್ಯವಾಗಿ ಧರ್ಮೇಂದ್ರ ಐಸಿಯುನಲ್ಲಿ ಮಲಗಿರುವ ವಿಡಿಯೋ ಮಾಡಿದ್ದರು. ಆ ಬಳಿಕ ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಧರ್ಮೇಂದ್ರ ಆಸ್ಪತ್ರೆಯ ಮೇಲೆ ಮಲಗಿದ್ದರೆ, ಅವರ ಸುತ್ತ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಸೇರಿದಂತೆ ಇಡೀ ಕುಟುಂಬವಿತ್ತು.

Mumbai Breach Candy hospital employee arrested for secretly filming Bollywood Legend Dharmendra in ICU

ಈ ವಿಡಿಯೋ ಮಾಡಿದ ಸಿಬ್ಬಂದಿಯನ್ನು ಮುಂಬೈ ಪೊಲೀಸರು ಬಂಧಿಸಿ, ವಿಚಾರಣೆಯನ್ನು ಕೈಗೊಂಡಿದ್ದಾರೆ. ಸದ್ಯ ಧರ್ಮೇಂದ್ರ ಅವರನ್ನು ಮನೆಗೆ ಶಿಫ್ಟ್ ಮಾಡಿದ್ದು, ಅಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆಸ್ಪತ್ರೆಯ ವೈದ್ಯರು ಮನೆಗೆ ಬಂದು ಧರ್ಮೇಂದ್ರ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬು ಬಗ್ಗೆ ಅಧಿಕೃತ ಮಾಡಿಲ್ಲದೇ ಹೋದರೂ, ಚೇತರಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಕುಟುಂಬದ ಮೂಲಗಳಿಂದ ಬಂದಿದೆ.

ಧರ್ಮೇಂದ್ರ ಅನಾರೋಗ್ಯ ಹಿನ್ನೆಲೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಬೇಗ ಚೇತರಿಸಿಕೊಳ್ಳಲಿ ಎಂದು ಬಯಸುತ್ತಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಧರ್ಮೇಂದ್ರ ಆಕ್ಟಿವ್ ಆಗಿದ್ದರು. ಆಗಾಗ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇತ್ತೀಚೆಗೆ ಧರ್ಮೇಂದ್ರ ನಟಿಸಿರುವ 'ಇಕ್ಕೀಸ್' ಎನ್ನುವ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾಗಾಗಿ ಜನರು ಎದುರು ನೋಡುತ್ತಿದ್ದಾರೆ.

More from Filmibeat

English summary
Mumbai Breach Candy hospital employee arrested for secretly filming Bollywood Legend Dharmendra in ICU.
Read more about: dharmendra actor health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X