'ಬಿಂದಾಸ್' ಬೆಡಗಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಅಂತ್ಯ; 4 ವರ್ಷದಿಂದ ಬೇರೆ ಇದ್ದ ದಂಪತಿಗೆ ವಿಚ್ಚೇದನ

ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದ 'ಬಿಂದಾಸ್' ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಅಂತ್ಯಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಹನ್ಸಿಕಾ ಹಾಗೂ ಪತಿ ಸೊಹೈಲ್ ಕಥೂರಿಯಾ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು ವಿಚ್ಚೇದನಕ್ಕೆ ಮುಂದಾಗಿರುವ ವದಂತಿಗಳು ಹಬ್ಬಿದ್ದವು. ಆದ್ರೀಗ ಗಾಳಿ ಸುದ್ದಿಗಳೆಲ್ಲವು ನಿಜವಾಗಿವೆ.

ಉತ್ತರ ಭಾರತದವರಾಗಿದ್ದರೂ ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತದ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಹನ್ಸಿಕಾಗೆ ದಕ್ಷಿಣ ಭಾರತದಲ್ಲಿಯೇ ಹೆಜ್ಜೆ ಅಭಿಮಾನಿಗಳಿದ್ದಾರೆ. ತನ್ನ ವೃತ್ತಿ ಬದುಕಿನ ಉತ್ತುಂಗಕ್ಕೆ ಏರಿದ್ದರು. ಅದ್ಯಾವಾಗ ಅವಕಾಶಗಳು ಕಡಿಮೆ ಆಗುವುದಕ್ಕೆ ಶುರುವಾಗಿದ್ದವೋ ಆಗ ಕೌಟುಂಬಿಕ ಜೀವನದ ಕಡೆಗೆ ವಾಲಿದ್ದರು. ಉದ್ಯಮಿಯಾಗಿದ್ದ ಸೊಹೈಲ್ ಕಥೂರಿಯಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು.

Mumbai family court granted divorce to Bindaas actress Hansika Motwani and Sohael Khaturiya

ಉದ್ಯಮಿ ಸೊಹೈಲ್ ಕಥೂರಿಯಾ ಹಾಗೂ ನಟಿ ಹನ್ಸಿಕಾ ಮೋಟ್ವಾನಿ ಬಾಲ್ಯದ ಗೆಳೆಯರಾಗಿದ್ದರು. ಇಬ್ಬರೂ ಅಲ್ಪಾವಧಿ ಡೇಟಿಂಗ್ ಕಾಲ ಡೇಟಿಂಗ್ ಮಾಡಿದ್ದರು. ಬಳಿಕ 2022ರ ಡಿಸೆಂಬರ್ 4ರಂದು ರಾಜಸ್ಥಾನದ ಜೈಪುರದಲ್ಲಿ ಅದ್ದೂರಿಯಾಗಿ ವಿವಾಹವಾದರು. ರಾಜಮನೆತನದ ಶೈಲಿಯಲ್ಲಿ ಇಬ್ಬರೂ ಮದುವೆ ಆಗಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದು ಚರ್ಚೆಗಳಿಗೂ ಎಡೆ ಮಾಡಿಕೊಟ್ಟಿತ್ತು.

ಈಗ ಪತಿ, ಉದ್ಯಮಿ ಸೊಹೈಲ್ ಕಥೂರಿಯಾ ಅವರಿಂದ ಹನ್ಸಿಕಾ ಮೋಟ್ವಾನಿ ವಿಚ್ಛೇದನ ಪಡೆದಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯ ಇಬ್ಬರ ವಿಚ್ಛೇದನವನ್ನು ಅಧಿಕೃತಪಡಿಸಿದೆ ಎಂದು ವರದಿಯಾಗಿದೆ. ಸೊಹೈಲ್‌ಗೆ ಇದು ಎರಡನೇ ಮದುವೆಯಾಗಿತ್ತು. ಅವರ ಮೊದಲ ಪತ್ನಿ ರಿಂಕಿ ಬಜಾಜ್ ನಟಿ ಹನ್ಸಿಕಾ ಮೊಟ್ವಾನಿಯ ಸ್ನೇಹಿತೆಯಾಗಿದ್ದರು. ಇದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಸೊಹೈಲ್‌ ಕಥೂರಿಯಾ ಮೊದಲ ಪತ್ನಿ ಹನ್ಸಿಕಾ ಸ್ನೇಹಿತೆಯಾಗಿದ್ದರು ಎಂಬುದು ಸಾಕಷ್ಟು ಟೀಕೆಗೆ ಗುರಿ ಮಾಡಿತ್ತು. ಆಗ ಹನ್ಸಿಕಾ ಪ್ರತಿಕ್ರಿಯೆ ಹೀಗೆ ಪ್ರತಿಕ್ರಿಯೆ ನೀಡಿದ್ದರು "ಸೊಹೈಲ್ ಹಿನ್ನೆಲೆ ನನಗೆ ಗೊತ್ತಿತ್ತು. ಆದರೆ, ಅವರ ವಿಚ್ಛೇದನಕ್ಕೆ ನಾನು ಕಾರಣಳು ಅಲ್ಲ" ಎಂದು ಹನ್ಸಿಕಾ ಮೋಟ್ವಾನಿ ಅಂದೇ ಸ್ಪಷ್ಟಪಡಿಸಿದ್ದರು. ವಿವಾಹದ ಬಳಿಕ ಈ ಜೋಡಿ ಖುಷಿಯಿಂದಲೇ ಸಂಸಾರ ಸಾಗಿಸಿದ್ದರು. ಕೆಲವು ತಿಂಗಳಿಂದ ಇಬ್ಬರ ವಿಚ್ಛೇದನದ ಬಗ್ಗೆನೇ ಸುದ್ದಿ ಹಬ್ಬಿದ್ದವು.

Mumbai family court granted divorce to Bindaas actress Hansika Motwani and Sohael Khaturiya

ಪತಿಯೊಂದಿಗಿನ ವೈಮನಸ್ಸಿನಿಂದ ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ತಾಯಿಯೊಂದಿಗೆ ವಾಸವಿದ್ದಾರೆಂಬ ಸುದ್ದಿ ಹಬ್ಬಿದೆ. ಸೋಶಿಯಲ್ ಮೀಡಿಯಾದಲ್ಲಿ ಪತಿಯೊಂದಿಗೆ ಇರುವ ಫೋಟೊಗಳನ್ನು ತೆಗೆದು ಹಾಕಿದ್ದರು. ಅಲ್ಲಿಂದ ಇಬ್ಬರ ವಿಚ್ಚೇದನದ ಬಗ್ಗೆ ವದಂತಿಗಳು ಹಬ್ಬಿದ್ದವು. ಇಬ್ಬರ ವಿಚ್ಛೇದನಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣವೆಂದು ಚರ್ಚೆಯಾಗುತ್ತಿದೆ. ನಾಲ್ಕು ವರ್ಷಗಳ ಕಾಲ ದಾಂಪತ್ಯ ನಡೆಸಿದ ಬಳಿಕ ಈ ಜೋಡಿ ಈಗ ದೂರವಾಗಿದೆ.

ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ಹನ್ಸಿಕಾ ಮೋಟ್ವಾನಿ ವಿವಾಹದ ಬಳಿಕ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದ್ರೀಗ ಅವರ ವೈಯಕ್ತಿಕ ಜೀವನ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯಾಗುತ್ತಿದೆ. ಬಾಲ್ಯದಲ್ಲಿಯೇ ಚಿತ್ರರಂಗ ಪ್ರವೇಶಿಸಿದ ಹನ್ಸಿಕಾ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ನಟಿಸಿದ 'ಬಿಂದಾಸ್' ಸಿನಿಮಾದಲ್ಲಿ ನಾಯಕಿ ನಟಿಸಿದ್ದಾರೆ.

More from Filmibeat

English summary
Mumbai family court granted divorce to Bindaas actress Hansika Motwani and Sohael Khaturiya.
Read more about: hansika motwani actress divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X