ಸುಶಾಂತ್ ಸಿಂಗ್ ಸಾವು: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಪೊಲೀಸರಿಂದ ಸಮನ್ಸ್

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೇಳಿಕೆ ದಾಖಲಿಸಲು ಮುಂಬೈ ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ 'ಪದ್ಮಾವತ್' ನಿರ್ದೇಶಕ ಬನ್ಸಾಲಿ ಅವರಿಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

Recommended Video

ದಾರವಾಹಿಯಿಂದ ಸಿನಿಮಾ ವರೆಗೆ ಶತಮರ್ಷನ್ ಅವಿನಾಶ್ ಪಯಣ ಹೇಗಿತ್ತು | Shatamarshan Avinash | Filmibeat Kannada

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯವರು, ಆಪ್ತ ಸ್ನೇಹಿತರು, ಚಿತ್ರರಂಗದ ಅನೇಕ ಗಣ್ಯರನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಈ ಹಿಂದೆ ಸಿನಿಮಾಗಳನ್ನು ಮಾಡಿರುವ ನಿರ್ದೇಶಕರು, ಕಲಾವಿದರಲ್ಲಿ ಕೆಲವರನ್ನು ಕರೆಯಿಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಸುಶಾಂತ್ ಅವರಿಗೆ ಸಿನಿಮಾ ಆಫರ್ ನೀಡಿ ಬಳಿಕ ಕೈಬಿಟ್ಟಿದ್ದ ನಿರ್ಮಾಪಕರು ಮತ್ತು ನಿರ್ದೇಶಕರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮುಂದೆ ಓದಿ...

ಕೊನೆಯ ಹಂತದಲ್ಲಿ ಸುಶಾಂತ್‌ಗೆ ಕೊಕ್

ಕೊನೆಯ ಹಂತದಲ್ಲಿ ಸುಶಾಂತ್‌ಗೆ ಕೊಕ್

ಸುಶಾಂತ್ ಸಿಂಗ್ ರಜಪೂತ್ ಅವರನ್ನು 'ರಾಮ್ ಲೀಲಾ' ಚಿತ್ರಕ್ಕೆ ಮೊದಲು ಆಯ್ಕೆ ಮಾಡಲಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರಕ್ಕೆ ಬಳಿಕ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲ, ಇವರದೇ ನಿರ್ದೇಶನದ 'ಬಾಜಿರಾವ್ ಮಸ್ತಾನಿ' ಚಿತ್ರಕ್ಕೂ ಸುಶಾಂತ್ ಅವರನ್ನೇ ಆಯ್ಕೆ ಮಾಡಲಾಗಿತ್ತು. ಕೊನೆಯ ಹಂತದಲ್ಲಿ ಮತ್ತೆ ಅವರನ್ನು ಕೈಬಿಟ್ಟು ರಣವೀರ್‌ಗೆ ಅವಕಾಶ ನೀಡಲಾಗಿತ್ತು. ಈ ಕಾರಣಕ್ಕಾಗಿ ಬನ್ಸಾಲಿ ಅವರನ್ನು ಮುಂಬೈ ಪೊಲೀಸರು ಪ್ರಶ್ನಿಸಲಿದ್ದಾರೆ.

ಸುಶಾಂತ್ ಕೈತಪ್ಪಿದ್ದ ನಾಲ್ಕು ಚಿತ್ರಗಳು

ಸುಶಾಂತ್ ಕೈತಪ್ಪಿದ್ದ ನಾಲ್ಕು ಚಿತ್ರಗಳು

ಸಂಜಯ್ ಲೀಲಾ ಬನ್ಸಾಲಿ ಅವರ ನಾಲ್ಕು ಚಿತ್ರಗಳ ಆಫರ್ ಸುಶಾಂತ್‌ಗೆ ಹೋಗಿದ್ದವು. ಆದರೆ ನಾಲ್ಕೂ ಚಿತ್ರಗಳು ಸುಶಾಂತ್ ಕೈತಪ್ಪಿದ್ದವು. ಇದಕ್ಕೆ ಡೇಟ್ಸ್ ಹೊಂದಾಣಿಕೆಯಾಗದಿರುವುದು ಕಾರಣ ಎಂದು ವರದಿಯಾಗಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಸುಶಾಂತ್ ಅವರಿಗೆ ಆಫರ್ ನೀಡಿದಂತೆ ಮಾಡಿ ವಂಚಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕಂಗನಾ, ಶೇಖರ್ ಕಪೂರ್ ಹೇಳಿಕೆ

ಕಂಗನಾ, ಶೇಖರ್ ಕಪೂರ್ ಹೇಳಿಕೆ

ಬಾಲಿವುಡ್‌ನಲ್ಲಿ ಸುಶಾಂತ್ ಸಾಕಷ್ಟು ಸಂಕಷ್ಟ, ತೊಂದರೆಗಳನ್ನು ಎದುರಿಸಿದ್ದರು ಎಂದು ನಟಿ ಕಂಗನಾ ರಣಾವತ್ ಮತ್ತು ನಿರ್ದೇಶಕ ಶೇಖರ್ ಕಪೂರ್ ನಿರಂತರ ಹೇಳಿಕೆಗಳನ್ನು ನೀಡಿದ್ದಾರೆ. ತನನಿಖೆಗೆ ಸಂಬಂಧಿಸಿದಂತೆ ಅವರು ನೇರ ಭಾಗಿಯಾಗದೆ ಇದ್ದರೂ, ಸುಶಾಂತ್ ಕುರಿತು ತಿಳಿದಿರಬಹುದಾದ ಕಾರಣಕ್ಕೆ ಅವರಿಂದಲೂ ಪೊಲೀಸರು ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

More from Filmibeat

English summary
Mumbai police to send summon for Sanjay Leela Bhansali to record statement on Sushant Singh Rajput's death case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X