ಕಂಗನಾ ರಣಾವತ್ ಬೆಳೆದಿದ್ದೇ ನೆಪೋಟಿಸಂ ಪಿಲ್ಲರ್ ಮೇಲೆ: ನಟಿ ನಗ್ಮಾ ಟೀಕೆ

ಬಾಲಿವುಡ್‌ನ ಸ್ವಜನಪಕ್ಷಪಾತದ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿರುವ ನಟಿ ಕಂಗನಾ ರಣಾವತ್, ಅದಕ್ಕೆ ಪ್ರತಿರೋಧವನ್ನೂ ಎದುರಿಸುತ್ತಿದ್ದಾರೆ. ಕಂಗನಾ ಟೀಕೆಗಳಿಂದ ಆಕ್ರೋಶಗೊಂಡಿರುವ ತಾಪ್ಸಿ ಪನ್ನು, ಸ್ವರ ಭಾಸ್ಕರ್ ಮುಂತಾದವರು ನೇರಾ ನೇರ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ಆ ಸಾಲಿಗೆ ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿಯೂ ಮಿಂಚಿದ್ದ ನಟಿ ನಗ್ಮಾ ಕೂಡ ಸೇರಿದ್ದಾರೆ.

Recommended Video

Deepika Padukone a create record in Indian film industry | Filmibeat Kannada

ಬಾಲಿವುಡ್‌ನ ಲಾಬಿಯ ಕುರಿತು ಕಳೆದ ಒಂದು ತಿಂಗಳಿನಿಂದ ಕಂಗನಾ ಮಾತನಾಡುತ್ತಿದ್ದಾರೆ. ಅನೇಕ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರ ಇಬ್ಬಂದಿತನವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವೈಯಕ್ತಿಕ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ನೆಪೋಟಿಸಂನಿಂದಾಗಿಯೇ ಸುಶಾಂತ್ ಸೇರಿದಂತೆ ಅನೇಕರು ಬದುಕು ಕಳೆದುಕೊಂಡಿರುವುದಾಗಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿ ಟೀಕೆ ಮಾಡಿರುವ ನಟಿ ನಗ್ಮಾ, ಸ್ವತಃ ಕಂಗನಾ ರಣಾವತ್ ಅವರೇ ನೆಪೋಟಿಸಂನ ಉತ್ಪನ್ನವಾಗಿದ್ದಾರೆ ಎಂದಿದ್ದಾರೆ. ಮುಂದೆ ಓದಿ...

ಕಂಗನಾ ಬೆಳೆದಿರುವುದೇ ನೆಪೋಟಿಸಂನಲ್ಲಿ

ಕಂಗನಾ ಬೆಳೆದಿರುವುದೇ ನೆಪೋಟಿಸಂನಲ್ಲಿ

ಕಂಗನಾ ಕುರಿತಾದ ಮೀಮ್ ಒಂದನ್ನು ಹಂಚಿಕೊಂಡಿರುವ ನಗ್ಮಾ, ಕಂಗನಾ ಅಕ್ಕಳ ಇಡೀ ವೃತ್ತಿ ನೆಪೋಟಿಸಂನ ಸ್ತಂಭದ ಮೇಲೆಯೇ ನಿಂತಿದೆ. ಆದಿತ್ಯ ಪಾಂಚೋಲಿಯಿಂದ ಅವರು ಬಾಲಿವುಡ್‌ಗೆ ಪರಿಚಿತರಾದರು, ಮೊದಲ ಸಿನಿಮಾ 'ಗ್ಯಾಂಗ್ ಸ್ಟರ್' ನಿರ್ಮಿಸಿದ್ದು ಮಹೇಶ್ ಭಟ್, ಮೊದಲ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಇಮ್ರಾನ್ ಹಷ್ಮಿ ಜತೆಗೆ. ದೀದಿಯ ವೃತ್ತಿ ಬದುಕು ನೆಲಕಚ್ಚಿದಾಗ ಕೈಟ್ಸ್ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ರೀ ಲಾಂಚ್ ಆದರು, ಮತ್ತೆ ವೃತ್ತಿಯಲ್ಲಿ ಬಿದ್ದಾಗ ಹೃತಿಕ ಜತೆ 'ಕ್ರಿಶ್-3'ಯಲ್ಲಿ ಪುನಃ ರೀಲಾಂಚ್ ಆದರು. ತನ್ನ ಮ್ಯಾನೇಜರ್ ಆಗಿ ಅಕ್ಕನನ್ನೇ ನೇಮಿಸಿಕೊಂಡರು ಎಂದು ಆರೋಪಿಸಿದ್ದಾರೆ.

ಸುಶಾಂತ್‌ಗೆ ಸಹಾಯ ಮಾಡಿರಲಿಲ್ಲ

ಸುಶಾಂತ್‌ಗೆ ಸಹಾಯ ಮಾಡಿರಲಿಲ್ಲ

ಸುಶಾಂತ್ ಸಾಯುವ ಮುನ್ನ ಅವರೊಂದಿಗೆ ಮಾತನಾಡಿರಲಿಲ್ಲ ಅಥವಾ ಸಹಾಯ ಮಾಡಿರಲಿಲ್ಲ. ಆದರೆ ಸುಶಾಂತ್ ಸಾವಿನ ಬಳಿಕ ಇದ್ದಕ್ಕಿದ್ದಂತೆ ಆಕೆ ಸುಶಾಂತ್‌ಗಾಗಿ ಹೋರಾಡುತ್ತಿದ್ದಾರೆ ಅಥವಾ ತಮಗೆ ಸಮಸ್ಯೆ ಇರುವವರ ವಿರುದ್ಧ ಪ್ರಚಾರ ತಂತ್ರ ಮಾಡುತ್ತಿದ್ದಾರೆ. ದೀದಿ ಒಬ್ಬ ಕಪಟಿ ಎಂದು ನಗ್ಮಾ ಟ್ವೀಟ್ ಮಾಡಿದ್ದಾರೆ.

ಒತ್ತಡ ಹೇರಿದ್ದರಿಂದ ನಟಿಸಿದ್ದು

ಒತ್ತಡ ಹೇರಿದ್ದರಿಂದ ನಟಿಸಿದ್ದು

ಬಸು ಅವರಿಗೂ ಪಾಂಚೋಲಿ ಪರಿಚಯ ಇರಲಿಲ್ಲ. ಇದನ್ನು ಸಾಕಷ್ಟು ಬಾರಿ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಗ್ಯಾಂಗ್‌ಸ್ಟರ್‌ಗೆ ಆಡಿಷನ್ ನೀಡಿದ್ದು-ಅದರಲ್ಲಿ ನೆಪೋಟಿಸಂ ಬರುವುದಿಲ್ಲ. ಕಂಗನಾಳ ವೃತ್ತಿ ಬದುಕನ್ನು ಹಾಳು ಮಾಡಲಾಯಿತು. 'ಕೈಟ್ಸ್'ನಲ್ಲಿ ಆಕೆಯನ್ನು ಹಿನ್ನೆಲೆ ನಟಿಯನ್ನಾಗಿ ಸೀಮಿತಗೊಳಿಸಲಾಯ್ತು. ಈ ಕಾರಣದಿಂದಲೇ 'ಕ್ರಿಶ್'ನಲ್ಲಿ ಆಕೆ ನಟಿಸಲು ಬಯಸಿರಲಿಲ್ಲ. ಆದರೆ ಆಕೆಯ ಮೇಲೆ ಒತ್ತಡ ಹೇರಲಾಗಿತ್ತು.

ರಂಗೋಲಿಗೆ ವ್ಯವಹಾರ ತಿಳಿದಿಲ್ಲ

ರಂಗೋಲಿಗೆ ವ್ಯವಹಾರ ತಿಳಿದಿಲ್ಲ

ಯಾವ ಏಜೆನ್ಸಿಯೂ ಕಂಗನಾಳ ವ್ಯವಹಾರ ನೋಡಿಕೊಳ್ಳಲು ಬಯಸುತ್ತಿರಲಿಲ್ಲ. ಏಕೆಂದರೆ ಜನರು ನಿಮ್ಮತ್ತ ಹಣ ಎಸೆಯುವಂತಹ ಮದುವೆಗಳಿಗೆ ಹೋಗಿ ಕುಣಿಯುತ್ತಿರಲಿಲ್ಲ ಮತ್ತು ಫೇರ್ನೆಸ್ ಕ್ರೀಮ್‌ಗಳ ಪ್ರಚಾರ ಮಾಡಲಿಲ್ಲ. ಹೀಗಾಗಿ ರಂಗೋಲಿ ಆಕೆಯ ಸಿನಿಮಾ ವ್ಯವಹಾರಗಳನ್ನು ನೋಡಿಕೊಳ್ಳಲಾರಂಭಿಸಿದ್ದರು. ಆಕೆಗೂ ಕೂಡ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ. ಬಾಲಿವುಡ್‌ನ ವ್ಯವಹಾರಗಳ ಬಗ್ಗೆ ಆಕೆಗೆ ಏನೂ ತಿಳಿದಿರಲಿಲ್ಲ. ಯಾವುದೇ ಸಹೋದರಿ ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಕಂಗನಾ ತಿರುಗೇಟು ನೀಡಿದ್ದಾರೆ.

ನಗ್ಮಾ ಇತಿಹಾಸ ಕೆದಕಿದ ನೆಟ್ಟಿಗರು

ನಗ್ಮಾ ಇತಿಹಾಸ ಕೆದಕಿದ ನೆಟ್ಟಿಗರು

ನಗ್ಮಾ ಈ ಆರೋಪ ಮಾಡುತ್ತಿದ್ದಂತೆಯೇ ಕಂಗನಾ ಅಭಿಮಾನಿಗಳು ನಗ್ಮಾ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ನಗ್ಮಾ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಇತಿಹಾಸ ಕೆದಕಿದ್ದಾರೆ. ನಗ್ಮಾಗೆ ದಾವೂದ್ ಇಬ್ರಾಹಿಂ ಸಹವರ್ತಿಯೊಂದಿಗೆ ನಂಟು ಇತ್ತು ಎಂಬ ವರದಿಗಳನ್ನು ಹೊರತೆಗೆದಿದ್ದಾರೆ. ಮೂವರು ನಟರು, ವಿವಾಹಿತ ಕ್ರಿಕೆಟರ್ (ಸೌರವ್ ಗಂಗೂಲಿ) ಜತೆ ಡೇಟಿಂಗ್ ನಡೆಸಿ, 43ನೇ ವಯಸ್ಸಿನಲ್ಲಿ ಸಿಂಗಲ್ ಆಗಿ ಉಳಿದಿದ್ದಾರೆ ಎಂದು ವೈಯಕ್ತಿಕ ವಿಚಾರಗಳ ಕುರಿತು ಸಹ ವಾಗ್ದಾಳಿ ನಡೆಸಿದ್ದಾರೆ.

More from Filmibeat

English summary
Bollywood actress Nagma criticizes Kangana Ranaut and said her whole cinema career is standing on a pillar of Nepotism. Kangana Hits back at Nagma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X