ಸೆಲ್ಫಿ ತೆಗೆದುಕೊಳ್ಳಲು ಬಂದ ಫ್ಯಾನ್‌ಗೆ ಹೊಡೆದ ನಾನಾ ಪಾಟೇಕರ್: ವೈರಲ್ ವಿಡಿಯೋ ಅಸಲಿಯತ್ತೇನು?

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನೇರ ನುಡಿಯ ನಟ. ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರು. ಭಾರತದಲ್ಲಿ ಮೀಟೂ ಪ್ರಕರಣದ ಆರಂಭ ಆಗಿದ್ದಾಗ, ನಾನಾ ಪಾಟೇಕರ್ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಅಲ್ಲಿಂದ ನಾನಾ ಪಾಟೇಕರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಇತ್ತೀಚೆಗೆ 'ದಿ ಕಾಶ್ಮೀರ್ ಫೈಲ್ಸ್' ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ 'ದಿ ವ್ಯಾಕ್ಸಿನ್ ವಾರ್' ಮೂಲಕ ಮತ್ತೆ ಬಾಲಿವುಡ್ ಎಂಟ್ರಿ ಕೊಟ್ಟಿದ್ದರು. ಮತ್ತೊಂದು ಇನ್ನಿಂಗ್ಸ್ ಆರಂಭ ಮಾಡಿರುವ ನಾನಾ ಪಾಟೇಕರ್ ಈಗ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Nana Patekar hits a fan who asked for selfie video viral whats the truth

ಅನಿಲ್ ಶರ್ಮಾ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಾನಾ ಪಾಟೇಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ವಾರಾಣಾಸಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ಶೂಟಿಂಗ್ ವೇಳೆ ನಾನಾ ಪಾಟೇಕರ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನಿಮಾ ಶೂಟಿಂಗ್ ವೇಳೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಓಡಿ ಬಂದು ನಾನಾ ಪಾಟೇಕರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆಗ ಸಿಟ್ಟಿಗೆದ್ದ ನಾನಾ ಪಾಟೇಕರ್ ಅಭಿಮಾನಿಯ ತಲೆಗೆ ಹೊಡೆಯುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋಗೆ ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ. ಕೆಲವರು ನಾನಾ ಪಾಟೇಕರ್ ನಡೆಯನ್ನು ಖಂಡಿಸಿದ್ದಾರೆ. ಅಭಿಮಾನಿ ದೇವರುಗಳನ್ನು ಈ ರೀತಿ ಟ್ರೀಟ್ ಮಾಡೋದು ಸರಿಯಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಅಭಿಮಾನಿಗೆ ಬಾರಿಸಿದ್ದು ಒಳ್ಳೆಯದೇ ಆಯ್ತು. ಪ್ರತಿಯೊಬ್ಬರಿಗೆ ಅವರದ್ದೇ ಆದ ಸ್ಪೇಸ್ ಕೊಡಬೇಕು ಎಂದೂ ಹೇಳುತ್ತಿದ್ದಾರೆ.

ನೆಟ್ಟಿಗರೊಬ್ಬರು "ಭಾರತದಲ್ಲಿ ನಟರನ್ನು ದೇವರಂತೆ ಕಾಣುತ್ತಾರೆ. ಅವರನ್ನು ಮನುಷ್ಯರಂತೆ ಕಾಣುವ ಸಮಯ ಬಂದಿದೆ. ಅವರಿಗೆ ಗೌರವ ನೀಡುವುದನ್ನು ನಿಲ್ಲಿಸಬೇಕು" ಎಂದು ಹೇಳಿದ್ದಾರೆ. ಇನ್ನೊಬ್ಬರು "ಸರಿಯಾಗೇ ಆಗಿದೆ.. ನಾವು ಭಾರತೀಯರಿಗೆ ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ಕಾಳಜಿ ಇಲ್ಲ" ಎಂದು ಹೇಳಿದ್ದಾರೆ. ಆದರೆ, ಈ ವಿಡಿಯೋದ ಹಿಂದೆ ಬೇರೆಯದ್ದೇ ಕಥೆ ಇದೆ.

ನಾನಾ ಪಾಟೇಕರ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಕ್ಯೂನಲ್ಲಿ ನಿಂತಿದ್ದರು. ಹೀಗಾಗಿ ನಾನಾ ಪಾಟೇಕರ್ ಒಬ್ಬರೊಬ್ಬರಿಗೆ ಸೆಲ್ಫಿಯನ್ನು ನೀಡುತ್ತಿದ್ದರು. ಈ ವೇಳೆ ಗ್ಯಾಪ್‌ನಲ್ಲಿ ಅಭಿಮಾನಿ ಜಿಗಿದು ಬಂದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಅದರಿಂದ ಸಿಟ್ಟಿಗೆದ್ದ ಹಿರಿಯರ ನಟ ಒಂದು ಏಟು ಕೊಟ್ಟು ಕ್ಯೂನಲ್ಲಿ ಬರುವಂತೆ ಹೇಳಿ ಕಳುಸಿದ್ದರು. ಇದು ವಿಡಿಯೋ ಹಿಂದಿರುವ ಅಸಲಿ ಕಥೆ ಎಂದು ಮತ್ತೊಂದು ಕಡೆ ವರದಿಯಾಗಿದೆ.

More from Filmibeat

English summary
Whats the truth behind Nana Patekar hitting a fan video?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X