"ನನ್ಮೇಲೆ ನನಗೆ ನಂಬಿಕೆ ಇಲ್ಲ, 50% ಆಸ್ತಿಯನ್ನು ಯಾರಿಗೂ ಕೊಡಲ್ಲ"- ಹಾರ್ದಿಕ್ ಪಾಂಡ್ಯ
ಭಾರತೀಯ ಕ್ರಿಕೆಟ್ ತಂಡ ಉಪ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೊವಿಕ್ ದಾಂಪತ್ಯದಲ್ಲಿ ಬಿರುಕು ಎನ್ನುವ ಸುದ್ದಿ ಹರಿದಾಡುತ್ತಿದೆ. ಮಾಡಲ್ ಕಮ್ ನಟಿಯಾಗಿ ಗುರುತಿಸಿಕೊಂಡಿದ್ದ ನತಾಶಾ ಸ್ಟಾಂಕೊವಿಕ್ ಅವರನ್ನು 2020ರಲ್ಲಿ ಹಾರ್ದಿಕ್ ಪಾಂಡ್ಯ ಮದುವೆ ಆಗಿದ್ದರು.
ಇದೇ ಜೋಡಿಯ ದಾಂಪತ್ಯದಲ್ಲಿ ಏರು ಪೇರಾಗಿದೆ ಎನ್ನುವ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದೆ. ಇತ್ತೀಚೆಗೆ ನತಾಶಾ ಸ್ಟಾಂಕೊವಿಕ್ ಕೂಡ ದಿಶಾ ಪಠಾನಿ ಬಾಯ್‌ಫ್ರೆಂಡ್ ಎನ್ನಲಾಗುತ್ತಿರುವ ಅಲೆಗ್ಸಾಂಡರ್ ಜೊತೆಗೆ ಕಾಣಿಸಿಕೊಂಡಿದ್ದರು. ಇದು ಇಬ್ಬರ ವಿಚ್ಚೇದನ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ.

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೊವಿಕ್ ವಿಚ್ಚೇದನದ ಸುದ್ದಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಇದೇ ವೇಳೆ ಹಾರ್ದಿಕ್ ಪತ್ನಿ ನತಾಶಾ ಸ್ಟಾಂಕೊವಿಕ್ ಶೇ.70ರಷ್ಟು ಆಸ್ತಿಯನ್ನು ಡಿಮ್ಯಾಂಡ್‌ಗೆ ಇಟ್ಟಿದ್ದಾರೆ ಅಂತನೂ ಹೇಳಲಾಗುತ್ತಿದೆ. ಈ ಮಧ್ಯದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯನ್ನು ಅಮ್ಮನ ಹೆಸರಲ್ಲಿ ರಿಜಿಸ್ಟರ್ ಮಾಡಿದ್ದರ ಬಗ್ಗೆ ಮಾತಾಡಿದ್ದ ಹಳೇ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಿಂದೊಂದು ಸಂದರ್ಶನದಲ್ಲಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅವರ ಅಮ್ಮ ತನ್ನಲ್ಲಿರುವ ಎಲ್ಲ ಅಕೌಂಟ್‌ಗಳಿಗೆ ಪಾರ್ಟ್ನರ್ ಆಗಿರುತ್ತೇನೆ ಅಂತ ಹೇಳಿದ್ದಾರೆಂದು ಆ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಮಾತಾಡಿದ್ದಾರೆ.
ಆ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಹೇಳಿಕೊಂಡಿರುವಂತೆ ಅವರ ಆಸ್ತಿಯಲ್ಲಿ ಶೇ. 50ರಷ್ಟು ಹಕ್ಕು ಅವರ ಅಮ್ಮನಿಗೆ ಸೇರುತ್ತೆ. ಹಾರ್ದಿಕ್ ಪಾಂಡ್ಯ ಏನೇ ಖರೀದಿ ಮಾಡಿದರೂ, ಅದು ಕಾರೇ ಇರಲಿ, ಮನೆಯೇ ಇರಲಿ ಎಲ್ಲದರಲ್ಲೂ ಸಮಾನವಾಗಿ ಅವರ ಪಾಲು ಇರುತ್ತೆ ಎಂದು ಹೇಳಿ ಕೊಂಡಿದ್ದಾರೆ. "ನನಗೆ ನನ್ನ ಮೇಲೆ ನಂಬಿಕೆ ಇಲ್ಲ. ಮುಂದೆ ಶೇ.50ರಷ್ಟು ಆಸ್ತಿಯನ್ನು ನಾನು ಯಾರಿಗೂ ಕೊಡುವುದಿಲ್ಲ. 50 ಪರ್ಸೆಂಟ್ ನನಗೆ ತುಂಬಾ ದೊಡ್ಡದು. ಅದಕ್ಕಿಂತ ಒಳ್ಳೆಯದೆಂದರೆ, ನಿಮ್ಮ ಹೆಸರಿನಲ್ಲಿ ಇರಲಿ. ಆಗ 50 ಪರ್ಸೆಂಟ್ ಆಸ್ತಿ ಯಾರಿಗೂ ಹೋಗುವುದಿಲ್ಲ" ಎಂದು ಹೇಳಿದ ವಿಡಿಯೋ ಹರಿದಾಡುತ್ತಿದೆ.

ಹಾರ್ದಿಕ್ ಪಾಂಡ್ಯ ಆಸ್ತಿ ಬಗ್ಗೆ ಆಡಿದ ಮಾತುಗಳು ಈ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ವರದಿ ಆಗಿರುವ ಪ್ರಕಾರ, ಪತ್ನಿ ನತಾಶಾ ಸ್ಟಾಂಕೊವಿಕ್ ಶೇ.70ರಷ್ಟು ಆಸ್ತಿಯನ್ನು ನೀಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ಅದರಲ್ಲಿ ನತಾಶಾಗೆ ಎಷ್ಟು ಹೋಗುತ್ತೆ?
ಹಾರ್ದಿಕ್ ಪಾಂಡ್ಯ ಬಳಿ ಇರುವ ಆಸ್ತಿ ಎಷ್ಟು?
ಎನ್‌ಡಿಟಿವಿ ವರದಿ ಪ್ರಕಾರ, 2024ರಲ್ಲಿ ಹಾರ್ದಿಕ್ ಪಾಂಡ್ಯ ಬಳಿಕ ಇರುವ ಒಟ್ಟು ಆಸ್ತಿ 91 ಕೋಟಿ ರೂಪಾಯಿ. ಇದರಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿ ಮುಂಬೈ ಇಂಡಿಯನ್ಸ್ ತಂಡದಿಂದಲೇ ಸಿಕ್ಕಿದೆ. ಹೀಗಾಗಿ ಒಟ್ಟು ಆಸ್ತಿಯಲ್ಲಿ ಶೇ. 70ರಷ್ಟು ಆಸ್ತಿ ಬೇಕೆಂದು ನತಾಶಾ ಸ್ಟಾಂಕೊವಿಕ್ ಒತ್ತಡ ಹಾಕಿದ್ದಾರೆಂದು ಹೇಳಲಾಗಿದೆ.
ನತಾಶಾ ಪಾಲೆಷ್ಟು?
ಹಾರ್ದಿಕ್ ಪಾಂಡ್ಯ ಬಳಿ ಇರುವ 91 ಕೋಟಿ ರೂಪಾಯಿ ಆಸ್ತಿಯಲ್ಲಿ ನತಾಶಾ ಸ್ಟಾಂಕೋವಿಕ್ 70 ಪರ್ಸೆಂಟ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಹಾರ್ದಿಕ್ ಪಾಂಡ್ಯ ತಾಯಿ ಶೇ.50ರಷ್ಟು ಪಾಲು ಹೊಂದಿರುವುದರಿಂದ 45.5 ಕೋಟಿ ರೂಪಾಯಿ ಅವರಿಗೆ ಹೋಗುತ್ತೆ. ಇನ್ನು ಉಳಿದ 45.5 ಕೋಟಿ ರೂಪಾಯಿಯಲ್ಲಿ ಶೇ. 31.85 ಕೋಟಿ ರೂಪಾಯಿ ನತಾಶಾ ಪಾಲಾಗಬಹುದು ಎನ್ನಲಾಗಿದೆ.


Click it and Unblock the Notifications











