₹100 ಕೋಟಿ ಮಾನನಷ್ಟ ಮೊಕದ್ಧಮೆ: "ನವಾಜ್‌ಗೆ 3 ಮದುವೆ, 11 ಕ್ರಿಮಿನಲ್ ಕೇಸ್ ಇವೆ" ಎಂದು ಬಾಂಬ್ ಸಿಡಿಸಿದ ಸಹೋದರ!
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದಿರೋ ನಟ. ವಿಲನ್ ಪಾತ್ರಗಳಿಗೂ ಸೈ, ಕಾಮಿಡಿಗೂ ಜೈ ಎನ್ನುವ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ.
ನವಾಜುದ್ದೀನ್ ಸಿದ್ಧಿಕಿ ವೃತ್ತಿ ಬದುಕು ಅದ್ಭುತವಾಗಿದೆ. ಬಾಲಿವುಡ್ ಅಷ್ಟೇ ಅಲ್ಲ, ಭಾರತದ ಎಲ್ಲಾ ಭಾಷೆಯ ಚಿತ್ರರಂಗಕ್ಕೂ ನವಾಜುದ್ದೀನ್ ಸಿದ್ದಿಕಿ ಬೇಕು. ಆದರೆ, ಇವರ ವೈಯಕ್ತಿಕ ಬದುಕು ಹಳ್ಳ ಹಿಡಿದಿದೆ. ಮಾಜಿ ಪತ್ನಿ ಆಲಿಯಾ ಜೊತೆಗಿನ ವೈಮನಸ್ಸು ಹಾಗೂ ಕಿತ್ತಾಟದಿಂದ ಸದಾ ಹೆಡ್‌ಲೈನ್‌ನಲ್ಲಿ ಇರುವಂತೆ ಆಗಿದೆ.

ಪತ್ನಿ ಆಲಿಯಾ ಹಾಗೂ ಸಹೋದರ ಶಮಾಸ್ ನವಾಬ್ ಸಿದ್ಧಿಕಿ ವಿರುದ್ಧ ಬಾಲಿವುಡ್ ನಟ ಹಲವು ಆರೋಪಗಳನ್ನು ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಮಾಜಿ ಪತ್ನಿ ಹಾಗೂ ಸಹೋದರನ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಈ ಬೆಳವಣಿಗೆಯ ಬಳಿಕ ಸಹೋದರ ಶಮಾಸ್ ಬಾಲಿವುಡ್ ನಟ ವಿರುದ್ಧ ನವಾಜುದ್ದೀನ್ ಸಿದ್ದೀಕಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನವಾಜುದ್ದೀನ್‌ಗೆ ಮೂವರು ಪತ್ನಿಯರು
ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ. ಈ ಕೇಸ್ ದಾಖಲಾಗುತ್ತಿದ್ದಂತೆ ಶಮಾಸ್ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಟ್ವಿಟರ್‌ನಲ್ಲಿ ಮಾಡಿರೋ ಗಂಭೀರ ಆರೋಪಗಳಲ್ಲಿ ಮೂರು ಬಾರಿ ಮದುವೆ ಆಗಿದ್ದಾರೆ ಅನ್ನೋ ಆರೋಪ ಕೂಡ ಒಂದು.
ನವಾಜುದ್ದೀನ್ ಸಿದ್ದಿಕಿ ವಿರುದ್ಧ ಶಮಾಸ್ ಆರೋಪಗಳ ಪಟ್ಟಿಯನ್ನೇ ಮಾಡಿದ್ದಾರೆ. ಸಿದ್ದಿಕಿ ಈಗಾಗಲೇ ಮೂರು ಬಾರಿ ಮದುವೆ ಆಗಿದ್ದಾರೆ. ಅಲ್ಲದೆ ಲೈಂಗಿಕ ಕಿರುಕುಳದ ಆರೋಪದಲ್ಲೂ ಭಾಗಿಯಾಗಿದ್ದಾರೆ. ಅಲ್ಲದೆ 11 ವರ್ಷಗಳ ಕಾಲ ತಮ್ಮ ಬದುಕಿನಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಜವಾನ್ ವಿರುದ್ದ 11 ಕ್ರಿಮಿನಲ್ ಕೇಸ್?
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ದ ಸುಮಾರು 11 ಕ್ರಿಮಿನಲ್ ಕೇಸ್‌ಗಳಿವೆ ಎಂದು ಶಮಾಜ್ ಆರೋಪ ಮಾಡಿದ್ದಾರೆ. ಇದರಲ್ಲಿ ಮೂರು ಬಾರಿ ಮದುವೆ ಆಗಿದ್ದು, ಗರ್ಭಿಣಿಯಾಗಿದ್ದ ತನ್ನ ಅತ್ತಿಗೆಯನ್ನು ಒದ್ದಿದ್ದಾರೆಂದು ಸಹೋದರ ಶಮಾಸ್ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಶಮಾಸ್ ಮೀಟು ಪ್ರಕರಣದ ಬಗ್ಗೆನೂ ಹೇಳಿಕೆ ಕೊಟ್ಟಿದ್ದಾರೆ. ನವಾಜುದ್ದೀನ್ ಮೀಟು ಪ್ರಕರಣದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಸುಮಾರು 9 ಸಿನಿಮಾಗಳು ಇವರಿಂದ ನಿಂತು ಹೋಗಿವೆ ಎಂದು ದೂರಿದ್ದಾರೆ. " ನಟನಾಗು ಇದ್ದುಕೊಂಡೂ ಈಗ ನಿನ್ನ ಬೆಲೆ ಸೊನ್ನೆ" ಎಂದು ಬರೆದು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಾರ್ಚ್ 30 ರಂದು ವಿಚಾರಣೆ
ನವಾಜುದ್ದೀನ್ ಸಿದ್ದಿಕಿ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಬಾಂಬೆ ಹೈ ಕೋರ್ಟ್ ಮಾರ್ಚ್ 30ರಂದು ನಡೆಸಲಿದೆ. ಆದರೆ, ಮುನ್ನ ಸಿದ್ದಿಕಿ ದೂರಿನ ಬಗ್ಗೆ ಶಮಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಶಮಾಸ್ ತನ್ನ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಹಣ ದುರುಪಯೋಗ ಆರೋಪದ ಮೇರೆಗೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇಲ್ಲಿಂದ ಪತ್ನಿಯನ್ನು ತನ್ನ ವಿರುದ್ಧ ಎತ್ತಿ ಕಟ್ಟಿದ್ದಾನೆ ಎಂದು ನವಾಜುದ್ದೀನ್ ಸಿದ್ದಿಕಿ ರೋಪಿಸಲಾಗಿದೆ.
2020ರಲ್ಲಿ ಶಮಾಸ್‌ರನ್ನು ಕೆಲಸದಿಂದ ತೆಗೆದ ಬಳಿಕ ಆದಾಯ ತೆರಿಗೆ ಇಲಾಖೆಗೆ ಸುಮಾರು 37 ಕೋಟಿ ರೂ. ತೆರಿಗೆ ಹಣ ಪಾವತಿಸಿಲ್ಲ. ಇದಕ್ಕಾಗಿ ದಂಡ ಕಟ್ಟಿದ್ದೇನೆ' ಎಂದು ಮಾನನಷ್ಟ ಮೊಕದ್ದಮೆಯಲ್ಲಿ ದೂರಲಾಗಿದೆ.


Click it and Unblock the Notifications











