21 ವರ್ಷದ ನಟಿಯ ತುಟಿಗೆ ಚುಂಬನ: ಟೀಕೆಗೊಳಗಾದ ನವಾಜುದ್ದೀನ್ ಸಿದ್ಧಿಕಿಯ ವಾದವೇನು?
ನವಾಜುದ್ದೀನ್ ಸಿದ್ಧಿಕಿ ಅಭಿನಯದ 'ಟಿಕು ವೆಡ್ಸ್ ಶೇರು' ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಇದರಲ್ಲಿ ನವಾಜುದ್ದೀನ್ ಸಿದ್ಧಿಕಿ ಸಿನಿಮಾದ ನಟಿ ಅವನೀತ್ ಕೌರ್ ತುಟಿಗೆ ಚುಂಬಿಸಿದ ದೃಶ್ಯವಿತ್ತು. ಇದು ಸೋಶಿಯಲ್ ಮೀಡಿಯಾ ವೈರಲ್ ಆಗುತ್ತಿದ್ದಂತೆ ಟೀಕೆಗೆ ಒಳಗಾಗಿತ್ತು.
ಕಿಸ್ಸಿಂಗ್ ಸೀನ್ ಟೀಕೆಗೆ ಒಳಗಾಗುವುದಕ್ಕೂ ಒಂದು ಕಾರಣವಿತ್ತು. ನವಾಜುದ್ದೀನ್ ಸಿದ್ಧಿಕಿ ವಯಸ್ಸು 49 ವರ್ಷ. 'ಟಿಕು ವೆಡ್ಸ್ ಶೇರು' ಸಿನಿಮಾದ ನಾಯಕಿ ಅವನೀತ್ ಕೌರ್ ವಯಸ್ಸು ಕೇವಲ 21 ವರ್ಷ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು.

ಬಾಲಿವುಡ್ ನಟ ನವಾಜುದ್ದೀನಿ ಸಿದ್ಧಿಕಿ ಟೀಕೆಗೆ ಒಳಗಾಗುತ್ತಿದ್ದಂತೆ ನಟಿಗೆ ಚುಂಬಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಶಾರುಖ್ ಖಾನ್ ಹೆಸರನ್ನು ತಂದು ಸಮರ್ಥನೆ ಮಾಡಲು ಮುಂದಾಗಿದ್ದಾರೆ.
ನವಾಜುದ್ದೀನ್ ಸಿದ್ಧಿಕಿ ಹೇಳಿದ್ದೇನು?
ನವಾಜುದ್ದೀನ್ ಸಿದ್ಧಿಕಿ ತನ್ನಗಿಂತ 28 ವರ್ಷ ಕಿರಿಯ ನಟಿಯ ಜೊತೆ ಲಿಪ್‌ಲಾಕ್ ಮಾಡಿದ್ದಕ್ಕೆ ಟೀಕೆಗೆ ಒಳಗಾಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದ್ರೀಗ ಕೊನೆಗೂ ಮೌನ ಮುರಿದಿದ್ದಾರೆ. ನಟಿಯೊಂದಿಗೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
" ಇಂದಿಗೂ ಶಾರುಖ್ ಖಾನ್ ರೊಮ್ಯಾಂಟಿಕ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇಂದಿನ ಜನರೇಷನ್ ಹೀರೊಗಳು ಯೂಸ್‌ಲೆಸ್. ಅವರಿಗೆ ರೊಮ್ಯಾನ್ಸ್ ಬಗ್ಗೆನೇ ಗೊತ್ತಿಲ್ಲ" ಎಂದು ಈ ವಿವಾದಕ್ಕೆ ಶಾರುಕ್ ಖಾನ್ ಅನ್ನು ಉದಾಹರಣೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

ರೊಮ್ಯಾನ್ಸ್ ಮಾಡೋ ವಯಸ್ಸು ಇಲ್ಲ
ನವಾಜುದ್ದೀನ್ ಸಿದ್ಧಿಕಿ ಇತ್ತೀಚೆಗೆ ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ ಇಂದಿನ ಕಾಲದ ಯುವಪೀಳಿಯ ರೊಮ್ಯಾನ್ಸ್ ಬಗ್ಗೆನೂ ಕಾಲೆಳೆದಿದ್ದಾರೆ. ಅಲ್ಲದೆ "ರೊಮ್ಯಾನ್ಸ್ ಮಾಡೋಕೆ ವಯಸ್ಸಿ ಅಂತರವಿಲ್ಲ" ಎಂದಿದ್ದಾರೆ.
ಇಂದಿನ ಜನರೇಷನ್‌ನಲ್ಲಿ ರೊಮ್ಯಾನ್ಸ್ ಅನ್ನೋದು ಉಳಿದಿಲ್ಲ ಎಂದು ಹೇಳಿದ್ದಾರೆ. " ಇಂದು ಎಲ್ಲವೂ ವಾಟ್ಸಾಪ್‌ನಲ್ಲಿ ನಡೆದು ಹೋಗುತ್ತೆ. ಅದು ಪ್ರೀತಿ ಆಗಿರಲಿ. ಇಲ್ಲ ಬ್ರೇಕಪ್ ಆಗಿರಲಿ. ಅದಕ್ಕೆ ಕಾರಣ ಇದೇನೆ. ರೊಮ್ಯಾನ್ಸ್ ಮಾಡುತ್ತಲೇ ಜೀವನ ನಡೆಸಿರುವವರು ರೊಮ್ಯಾನ್ಸ್ ಮಾಡಬಹುದು. ಮತ್ಯಾರು ಮಾಡುವುದಕ್ಕೆ ಸಾಧ್ಯ?" ಎಂದಿದ್ದಾರೆ.
ನಟಿಯ ಪೋಷಕರಿಗೆ ನೆಟ್ಟಿಗರ ಪ್ರಶ್ನೆ
'ಟಿಕು ವೆಡ್ಸ್ ಶೇರು' ಟ್ರೈಲರ್ ರಿಲೀಸ್ ಬಳಿಕ ಕೇವಲ ನವಾಜುದ್ದೀನ್ ಸಿದ್ಧಿಕಿಯನ್ನಷ್ಟೇ ತರಾಟೆಗೆ ತೆಗೆದುಕೊಂಡಿಲ್ಲ. ಈ ಸಿನಿಮಾದ ಮೇಕರ್ಸ್ ಹಾಗೂ ನಟಿ ಅವನೀತ್ ಕೌರ್ ಪೋಷಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅವನೀತ್ ಕೌರ್ ಅನ್ನು ಇಂತಹ ದೃಶ್ಯದಲ್ಲಿ ನಟಿಸಲು ಬಿಟ್ಟಿದ್ದಕ್ಕೆ ಪೋಷಕರನ್ನು ನೆಟ್ಟಿಗರು ಟೀಕಿಸಿದ್ದಾರೆ.
ನವಾಜುದ್ದೀನ್ ಸಿದ್ಧಿಕಿ ಮತ್ತು ಅವನೀತ್ ಕೌರ್ ಅಭಿನಯದ 'ಟಿಕು ವೆಡ್ಸ್ ಶೇರು' ಇದೇ ಜೂನ್ 23ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ, ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











