ಲೈಂಗಿಕ ದೌರ್ಜನ್ಯ: ನವಾಜುದ್ದೀನ್ ಸಿದ್ದಿಕಿ ಸಹೋದರನ ವಿರುದ್ಧ ಸೋದರ ಸೊಸೆ ದೂರು

ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರನ ವಿರುದ್ಧ ಅದರ ಸೋದರ ಸೊಸೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಾವು ಮಗುವಾಗಿದ್ದಾಗ ಸೋದರ ಮಾವನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಇದರಿಂದ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಸಿದ್ದಿಕಿ ವಿಚ್ಚೇದನ ವಿವಾದದೊಂದಿಗೆ ಮತ್ತೊಂದು ವಿವಾದ ಸೇರಿಕೊಂಡಂತಾಗಿದೆ.

ಎರಡು ವರ್ಷದವಳಿದ್ದಾಗ ನನ್ನ ಪೋಷಕರು ವಿಚ್ಚೇದನ ಪಡೆದುಕೊಂಡಿದ್ದರು. ಆಗಿನಿಂದ ಮಲತಾಯಿಯೇ ನನ್ನನ್ನು ಸಾಕಿದ್ದು. ಮಗುವಾಗಿದ್ದಾಗ ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ಅದು ನನ್ನ ಸೋದರ ಮಾವ ಎಂಬ ಸಲುಗೆಯಿಂದಲೇ ಇದ್ದೆ. ಆದರೆ ನಾನು ಬೆಳೆದು ದೊಡ್ಡವಳಾದ ಬಳಿಕ ಸ್ಪರ್ಶದ ಬಗೆಗಳನ್ನು ಅರ್ಥ ಮಾಡಿಕೊಂಡೆ. ಆಗ ಹಿಂಸೆಯೂ ನಡೆಯುತ್ತಿತ್ತು ಎಂದು ಆಕೆ ಸಂದರ್ಶನವೊಂದರಲ್ಲಿ ಆರೋಪಿಸಿದ್ದಾರೆ.

ಸಹಾಯಕ್ಕೆ ಬಾರದ ನವಾಜುದ್ದೀನ್

ಸಹಾಯಕ್ಕೆ ಬಾರದ ನವಾಜುದ್ದೀನ್

ಆದರೆ ಸಹೋದರನ ವಿರುದ್ಧ ಮಾತನಾಡುವ ಮೂಲಕ ನವಾಜುದ್ದೀನ್ ಸಿದ್ದಿಕಿ ಕೂಡ ತಮ್ಮ ಸಹಾಯಕ್ಕೆ ಬಂದಿರಲಿಲ್ಲ. ಮಾವನ ವಿರುದ್ಧ ಹೀಗೆ ಆರೋಪಿಸಿದಾಗ, ಅವನು ನಿನ್ನ ಅಂಕಲ್. ಹೀಗೆಲ್ಲ ಮಾಡಲು ಸಾಧ್ಯವಿಲ್ಲ ಎಂದು ನವಾಜುದ್ದೀನ್ ಪ್ರತಿಕ್ರಿಯಿಸಿದ್ದರು ಎಂದಿದ್ದಾರೆ.

ಅತ್ತೆ ಮಾವನಿಗೂ ಕಿರುಕುಳ

ಅತ್ತೆ ಮಾವನಿಗೂ ಕಿರುಕುಳ

ತನ್ನ ತಂದೆ ಮತ್ತು ಸೋದರ ಮಾವ ಸೇರಿಕೊಂಡು ಅತ್ತೆ ಮಾವನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. 'ನನ್ನ ಮದುವೆಯ ಬಳಿಕವೂ ನನ್ನ ಅಪ್ಪ ಮತ್ತು ನವಾಜ್ ಕೂಡ ಇದರಲ್ಲಿ ಭಾಗಿಯಾಗಿದ್ದರು. ನನ್ನ ಅತ್ತೆ ಮಾವನಿಗೆ ಕಿರುಕುಳ ನೀಡಲು ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದರು' ಎಂದು ಹೇಳಿದ್ದಾರೆ.

ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೆ

ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೆ

'ಜೀವನದಲ್ಲಿ ಏನಾಗಬೇಕು ಎಂದುಕೊಂಡಿದ್ದೀಯಾ ಎಂದು ಒಮ್ಮೆ ನವಾಜುದ್ದೀನ್ ನನ್ನನ್ನು ಕೇಳಿದ್ದರು. ಆಗ ನನಗೆ ಏನೇನು ಆಗುತ್ತಿದೆಯೋ ಪ್ರತಿಯೊಂದನ್ನೂ ಹೇಳಿಕೊಂಡಿದ್ದೆ. ಮಾನಸಿಕವಾಗಿ ನೊಂದಿರುವುದಾಗಿ ತಿಳಿಸಿದ್ದೆ. ಆದರೆ ಅವರು ಹಾಗೆ ಏನೂ ಇಲ್ಲ ಎಂದಿದ್ದರು. ನವಾಜುದ್ದೀನ್ ವಿಭಿನ್ನ ಸಮಾಜದಲ್ಲಿದ್ದು, ಅವರ ಮನಸ್ಥಿತಿ ಬೇರೆ ರೀತಿಯದ್ದಾಗಿರುತ್ತದೆ. ಹೀಗಾಗಿ ಅವರಾದರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ನಿನ್ನ ಚಾಚಾ. ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು' ಎಂಬುದಾಗಿ ತಿಳಿಸಿದ್ದಾರೆ.

ಸತ್ಯವನ್ನು ಖರೀದಿಸಲು ಸಾಧ್ಯವೇ

ಸತ್ಯವನ್ನು ಖರೀದಿಸಲು ಸಾಧ್ಯವೇ

ಇದಕ್ಕೆ ಪ್ರತಿಕ್ರಿಯಿಸಿರುವ ನವಾಜುದ್ದೀನ್ ಪತ್ನಿ ಆಲಿಯಾ, 'ಇದು ಆರಂಭವಷ್ಟೇ. ಈಗಲೇ ಇಷ್ಟು ಬೆಂಬಲ ನೀಡುತ್ತಿರುವುದಕ್ಕೆ ದೇವರಿಗೆ ಧನ್ಯವಾದಗಳು. ಮೌನವಾಗಿ ಸಂಕಷ್ಟ ಅನುಭವಿಸಿದವಳಲ್ಲ ಎಂದು ಜಗತ್ತಿಗೆ ಆಘಾತ ನೀಡಲು ಇನ್ನೂ ಬಹಿರಂಗವಾಗುವುದು ಬಹಳಷ್ಟಿದೆ. ಸತ್ಯವನ್ನು ಎಷ್ಟು ಪ್ರಮಾಣದ ಹಣ ಕೊಂಡುಕೊಳ್ಳಬಹುದು ನೋಡೋಣ' ಎಂದಿದ್ದಾರೆ.

More from Filmibeat

English summary
Bollywood actor Nawazuddin Siddiqui's niece has filed a complaint against his brother for sexually harassing her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X