ಅಮ್ಮನಿಗಾಗಿ ಹುಟ್ಟೂರಿಗೆ ಧಾವಿಸಿದ ಬಾಲಿವುಡ್ ನಟ: 14 ದಿನ ಕ್ವಾರೆಂಟೈನ್

ಮುಂಬೈನಲ್ಲಿ ನೆಲೆಸಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದವರು ಮುಜಫ್ಫರ್‌ಪುರದ ಬುಧಾನಾದಲ್ಲಿರುವ ತಮ್ಮ ಹುಟ್ಟೂರಿಗೆ ಮರಳಿದ್ದು, ಅವರೆಲ್ಲರನ್ನೂ 14 ದಿನಗಳ ಕಾಲ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ.

Recommended Video

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopal Varma

'ನನ್ನ ಕಿರಿಯ ತಂಗಿಯನ್ನು ಇತ್ತೀಚೆಗೆ ಕಳೆದುಕೊಂಡಿದ್ದೇನೆ. ಇದರಿಂದಾಗಿ ನನ್ನ 71 ವರ್ಷದ ಅಮ್ಮ ಎರಡು ಭಾರಿ ಆತಂಕದಿಂದ ಆಘಾತಕ್ಕೆ ಒಳಗಾಗಿದ್ದಳು. ರಾಜ್ಯ ಸರ್ಕಾರ ನೀಡಿರುವ ಎಲ್ಲ ಮಾರ್ಗದರ್ಶಿಗಳನ್ನೂ ನಾವು ಪಾಲಿಸುತ್ತಿದ್ದೇವೆ' ಎಂದು ನವಾಜುದ್ದೀನ್ ಸಿದ್ದಿಕಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

'ನಮ್ಮ ಹುಟ್ಟೂರು ಬುಧಾನಾದಲ್ಲಿ ಹೋಮ್ ಕ್ವಾರೆಂಟೈನ್ ಆಗಿದ್ದೇವೆ. ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ' ಎಂದು ಅವರು ಹೇಳಿದ್ದಾರೆ. ಮುಂದೆ ಓದಿ...

ಕಡ್ಡಾಯ ಹೋಮ್ ಕ್ವಾರೆಂಟೈನ್

ಕಡ್ಡಾಯ ಹೋಮ್ ಕ್ವಾರೆಂಟೈನ್

ಮಹಾರಾಷ್ಟ್ರ ಸರ್ಕಾರದಿಂದ ಅಗತ್ಯ ಪ್ರಯಾಣ ಅನುಮತಿ ಪಡೆದುಕೊಂಡಿದ್ದ ನವಾಜುದ್ದೀನ್ ಮತ್ತು ಅವರ ಕುಟುಂಬದವರು ಶನಿವಾರ ತಮ್ಮ ತವರೂರಿಗೆ ತೆರಳಿದ್ದರು. ನವಾಜುದ್ದೀನ್ ಸೇರಿದಂತೆ ಅವರ ಕುಟುಂಬದ ಎಲ್ಲರನ್ನೂ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಆದರೂ 14 ದಿನಗಳ ಕಡ್ಡಾಯ ಹೋಮ್ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಹಬ್ಬ ಇಲ್ಲ

ಮನೆಯಲ್ಲಿ ಹಬ್ಬ ಇಲ್ಲ

ಈದ್ ಹಬ್ಬಕ್ಕಾಗಿ ನವಾಜುದ್ದೀನ್ ಮನೆಗೆ ಮರಳಿದ್ದಾರೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕುಟುಂಬದ ಹೊರಗಿನವರನ್ನು ಅವರು ಭೇಟಿಯಾಗುವುದಿಲ್ಲ. ನಾವು ಈ ಬಾರಿ ಹಬ್ಬ ಆಚರಿಸುವುದಿಲ್ಲ. ಆದರೆ ನವಾಜುದ್ದೀನ್ ಹಾಜರಾತಿ ನಮಗೆ ಬಹಳ ಮುಖ್ಯವಾಗಿತ್ತು ಎಂದು ಅವರ ಸಹೋದರ ಅಯಾಜುದ್ದೀನ್ ಹೇಳಿದ್ದಾರೆ.

ತಂಗಿ ಸಾಯುವಾಗ ಅಮೆರಿಕದಲ್ಲಿ...

ತಂಗಿ ಸಾಯುವಾಗ ಅಮೆರಿಕದಲ್ಲಿ...

ನವಾಜುದ್ದೀನ್ ಅವರ ಕಿರಿಯ ತಂಗಿ ಸೈಯಾಮಾ ತಮ್ಷಿ ಸಿದ್ದಿಕಿ (26) ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು. ಎಂಟು ವರ್ಷಗಳ ಕಾಲ ಅವರು ಕ್ಯಾನ್ಸರ್ ಜತೆ ಹೋರಾಡಿದ್ದರು. ಆ ಸಮಯದಲ್ಲಿ ನವಾಜುದ್ದೀನ್ ಅಮೆರಿಕದಲ್ಲಿ ಇದ್ದಿದ್ದರಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಬ್ರೆಸ್ಟ್ ಕ್ಯಾನ್ಸರ್

ಬ್ರೆಸ್ಟ್ ಕ್ಯಾನ್ಸರ್

ಸಹೋದರಿಯ 25 ನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ನವಾಜುದ್ದೀನ್ ಆಕೆಯ ಕುರಿತು ಬಹಿರಂಗಪಡಿಸಿದ್ದರು. '18ನೇ ವಯಸ್ಸಿನಲ್ಲಿ ನನ್ನ ತಂಗಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆಕೆಯಲ್ಲಿನ ಮನೋಸ್ಥೈರ್ಯ ಮತ್ತು ಶಕ್ತಿಯಿಂದ ಅದರ ವಿರುದ್ಧ ನಿಂತು ಇಂದು 25ನೇ ವಯಸ್ಸಿಗೆ ಕಾಲಿರಿಸಿದ್ದಾಳೆ. ಈಗಲೂ ಹೋರಾಟ ಮುಂದುವರಿಸಿದ್ದಾಳೆ' ಎಂದು ತಿಳಿಸಿದ್ದರು.

More from Filmibeat

English summary
Bollywood actor Nawazuddin Siddiqui has travelled to his hometown Budhana for his mother and him quarantine for 14 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X