Adipurush Ban: "ಸೀತೆ' ಡೈಲಾಗ್ ತೆಗೆಯದಿದ್ರೆ ಹಿಂದಿ ಸಿನಿಮಾ ರಿಲೀಸ್ ಆಗಲ್ಲ".. ನೇಪಾಳದ ಮೇಯರ್ ಎಚ್ಚರಿಕೆ!

ಪ್ರಭಾಸ್ ಅಭಿನಯದ ಸಿನಿಮಾ 'ಆದಿಪುರುಷ್' ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಚಿತ್ರಮಂದಿಗಳು ತುಂಬಿದ ಪ್ರದರ್ಶನ ಕಾಣುತ್ತಿವೆ. ಇದೇ ಖುಷಿಯಲ್ಲಿರುವಾಗಲೇ ನಿರ್ಮಾಪಕರಿಗೆ ಬ್ಯಾನ್ ಬಿಸಿ ತಟ್ಟಿದೆ.

ನೇಪಾಳದಲ್ಲಿ 'ಆದಿಪುರುಷ್' ಸಿನಿಮಾ ಬ್ಯಾನ್ ಮಾಡುವುದಾಗಿ ಕಠ್ಮಂಡು ಮಹಾನಗರದ ಮೇಯರ್ ಬಲೆಂದ್ರ ಶಾ 'ಆದಿಪುರುಷ್' ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಸೀತೆಯ ಬಗ್ಗೆ ಇರುವ ಒಂದು ಡೈಲಾಗ್ ಅನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದಾರೆ.

Nepal Makers Mayor warned to ban Adipurush: Asks to remove controversial Sita dialogue

ಮೇಯರ್ ಬಲೆಂದ್ರ ಶಾ 'ಆದಿಪುರುಷ್', ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಮೂರು ದಿನಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ ಡೈಲಾಗ್ ಅನ್ನು ತೆಗೆದು ಹಾಕುವಂತೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ. ಅಷ್ಟಕ್ಕೂ ಆ ಡೈಲಾಗ್ ಯಾವುದು? ವಿವಾದ ಆಗುವಂತಹ ಡೈಲಾಗ್ ಏನಿದೆ? ತಿಳಿಯಲು ಮುಂದೆ ಓದಿ.

'ಆದಿಪುರುಷ್' ವಿವಾದ ಯಾಕೆ?

ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾಗೆ ಕಠ್ಮಂಡು ಮೇಯರ್ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ವಿವಾದ ಆಗುವತಹ ಡೈಲಾಗ್ ಏನಿದೆ? ಅನ್ನೋ ಪ್ರಶ್ನೆ ಮೂಡುವುದು ಸಹಜ. 'ಆದಿಪುರುಷ್' ಸಿನಿಮಾದ ಒಂದು ಡೈಲಾಗ್ ನೇಪಾಳದ ಕಠ್ಮಂಡುವಿನ ಮೇಯರ್ ನಿದ್ದೆ ಕೆಡಿಸಿದೆ.

Nepal Makers Mayor warned to ban Adipurush: Asks to remove controversial Sita dialogue

'ಆದಿಪುರುಷ್' ಸಿನಿಮಾದಲ್ಲಿ "ಸೀತೆ ಭಾರತದ ಮಗಳು" ಎಂದು ಹೇಳುವ ಡೈಲಾಗ್ ಇದೆ. ಈ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಗಡುವು ನೀಡಿದ್ದು. ಸಿನಿಮಾದಲ್ಲಿ ಡೈಲಾಗ್ ಅನ್ನು ತೆಗೆದು ಹಾಕುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

ವಿವಾದ ಆಗುವಂತಹದ್ದೇನಿದೆ?

ರಾಮಾಯಣದ ಪ್ರಕಾರ, ಸೀತೆಯ ನೇಪಾಳದ ಜಾನಕ್‌ಪುರದಲ್ಲಿ ಜನಿಸಿದ್ದಾರೆ. ಶ್ರೀರಾಮ ಇಲ್ಲಿಗೆ ಬಂದು ಸೀತೆಯನ್ನು ಮದುವೆ ಆಗಿದ್ದ ಎಂಬ ಉಲ್ಲೇಖವಿದೆ. ಆದರೆ, 'ಆದಿಪುರುಷ್' ಸಿನಿಮಾದಲ್ಲಿ "ಸೀತೆ ಭಾರತದ ಮಗಳು" ಎಂದು ಡೈಲಾಗ್ ಇದೆ. ಇದರ ವಿರುದ್ಧವೇ ಕಠ್ಮಂಡು ಮೇಯರ್ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಡೈಲಾಗ್ ತೆಗೆಯದೇ ಹೋದಲ್ಲಿ ಹಿಂದಿ ಸಿನಿಮಾ ರಿಲೀಸ್‌ಗೆ ಬಿಡುವುದಿಲ್ಲ ಎಂದಿದ್ದಾರೆ.

ನೇಪಾಳ ಸೆನ್ಸಾರ್ ಬೋರ್ಡ್ ಕೂಡ ಹೊಚ್ಚ ಪರ್ಮಿಷನ್ ಅನ್ನು ಹೋಲ್ಡ್ ಮಾಡಿದೆ. ಕಠ್ಮಂಡು ಮೇಯರ್ ಬರೀ ನೇಪಾಳದಲ್ಲಿ ಅಷ್ಟೇ ಅಲ್ಲ. ಭಾರತದಲ್ಲೂ ಈ ಡೈಲಾಗ್ ಅನ್ನು ತೆಗೆಯುವಂತೆ ಹೇಳಿದ್ದಾರೆ. ಈ ವಿವಾದದ ಬಳಿಕ 'ಆದಿಪುರುಷ್' ತಂಡ ಡೈಲಾಗ್ ತೆಗೆದು ಹಾಕುತ್ತಾ? ಅನ್ನೋದನ್ನು ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

'ಆದಿಪುರುಷ್' ವಿವಾದಗಳ ಸುತ್ತ

'ಆದಿಪುರುಷ್' ಸಿನಿಮಾ ಟೀಸರ್ ರಿಲೀಸ್ ಆದಲ್ಲಿಂದ ವಿವಾದಗಳೇ ಸುತ್ತಿಕೊಂಡಿವೆ. ಒಂದಲ್ಲ ಒಂದು ಕಾರಣಕ್ಕೆ ವಿವಾದ ಆವರಿಸಿಕೊಳ್ಳುತ್ತಿದೆ. ರಾವಣ, ಶ್ರೀರಾಮ ಹಾಗೂ ಹನುಮಂತನ ಗೆಟಪ್‌ ಬಗ್ಗೆ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ವಿಎಫ್‌ಎಕ್ಸ್ ಬಗ್ಗೆನೂ ಟ್ರೋಲ್ ಮಾಡಿದ್ದರು. ಹೀಗಾಗಿ ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದೂಡಬೇಕಾಗಿ ಬಂದಿತ್ತು.

ವಿವಾದಗಳ ಮಧ್ಯೆನೇ 'ಆದಿಪುರುಷ್' ರಿಲೀಸ್ ಆಗಿದೆ. ನೇಪಾಳದಲ್ಲಿ ಹಿಂದಿ ಸಿನಿಮಾ ಬ್ಯಾನ್ ವಿಚಾರ ಚರ್ಚೆಯಲ್ಲಿದೆ. ಮೂರು ದಿನಗಳ ಅಂತರದೊಳಗೆ ಸೀತೆ ಡೈಲಾಗ್ ಅನ್ನು ಚಿತ್ರತಂಡ ತೆಗೆದು ಹಾಕುತ್ತಾ? ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ.

More from Filmibeat

English summary
Nepal Makers Mayor warned to ban Adipurush: Asks to remove controversial 'Sita' dialogue, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X