ಪ್ರಿಯಾಂಕಾ ಚೋಪ್ರಾ ಕನ್ಯತ್ವದ ಬಗ್ಗೆ ಕೀಳು ಮಟ್ಟದ ಪೋಸ್ಟ್; ವಿಮರ್ಶಕನಿಗೆ ನೆಟ್ಟಿಗರಿಂದ ತರಾಟೆ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಸದ್ಯ ಬಾಲಿವುಡ್‌ನಿಂದ ದೂರವೇ ಉಳಿದಿರುವ ಈ ನಟಿ ಹಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಿಕ್ ಜೋನಾಸ್ ಮದುವೆಯಾದ ಬಳಿಕ ಭಾರತದಿಂದಲೇ ದೂರವಿದ್ದಾರೆ. ಸಿನಿಮಾ ಕೆಲಸ ಇದ್ದಾಗ ಭಾರತಕ್ಕೆ ಮರಳುವ ನಟಿ ಆಗಾಗ ಮಾಧ್ಯಮಗಳಿಗೆ ಮುಖ ತೋರಿಸುವುದು ಉಂಟು.

ಪ್ರಿಯಾಂಕಾ ಚೋಪ್ರಾ ಅಂದುಕೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅಲ್ಲಿನ ವೆಬ್‌ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ. ಈಗ ರಾಜಮೌಳಿ ನಿರ್ದೇಶಿಸುತ್ತಿರುವ ಗ್ಲೋಬಲ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ. ಇಷ್ಟೊಂದು ಬ್ಯುಸಿಯಾಗಿರುವ ನಟಿಯ ವಿರುದ್ಧ ವಿವಾದಾತ್ಮಕ ವಿಮರ್ಶಕ ಉಮೇರ್ ಸಂಧು ಕೀಳು ಪಟ್ಟದ ಪೋಸ್ಟ್ ಮಾಡಿಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

Netizens angry on critic Umair Sandhu controversial post about Priyanka Chopra Jonas

ಹೌದು, ಬಾಲಿವುಡ್‌ ನಟಿಯರ ವಿರುದ್ಧ ಆಗಾಗ ಕೆಟ್ಟ ಪೋಸ್ಟ್‌ಗಳನ್ನು ಮಾಡಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಈಗ ಈ ವಿಮರ್ಶಕ ಪ್ರಿಯಾಂಕಾ ಚೋಪ್ರಾ ಕನ್ಯತ್ವದ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಅದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ನೆಟ್ಟಿಗರು ಉಮೈರ್ ಸಂಧು ವಿರುದ್ಧ ತಿರುಗಿಬಿದ್ದಿದ್ದಾರೆ. ಹಾಗಿದ್ದರೆ, ಉಮೈರ್ ಸಂಧು ಪೋಸ್ಟ್‌ನಲ್ಲಿ ಏನಿದೆ? ನೆಟ್ಟಿಗರು ತಿರುಗೇಟು ಕೊಟ್ಟಿದ್ದು ಹೇಗೆ? ತಿಳಿಯಲು ಮುಂದೆ ಓದಿ.

ರಾಜಮೌಳಿ ಕುಟುಂಬದಲ್ಲಿ ಶೋಕ.. ಪ್ರಿಯಾಂಕಾ ಚೋಪ್ರಾ ಬ್ಯುಸಿ.. ಮಹೇಶ್ ಬಾಬು ಚಿತ್ರಕ್ಕೆ ಬ್ರೇಕ್?
ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಆರಂಭದಲ್ಲಿ ಹಲವು ಸೋಲುಗಳನ್ನು ಕಂಡಿದ್ದ ನಟಿ ಬಳಿಕ ಬಾಲಿವುಡ್‌ನ ಅಚ್ಚು ಮೆಚ್ಚಿನ ನಟಿಯಾಗಿದ್ದರು. ಆದರೆ, ಪ್ರಿಯಾಂಕಾ ಪೀಕ್‌ನಲ್ಲಿ ಇರುವಾಗಲೇ ಬಾಲಿವುಡ್‌ ಅನ್ನು ತೊರೆಯುವ ಮನಸ್ಸು ಮಾಡಿದ್ದರು. ಅದಕ್ಕೆ ಕಾರಣ ಇನ್ನೂ ನಿಗೂಢವಾಗಿದೆ. ಸಿನಿಮಾ ಮಂದಿ ಮಾತ್ರ ಒಂದೊಂದು ಕತೆ ಕಟ್ಟಿದ್ದಾರೆ. ಅಸಲಿಗೆ ಮ್ಯಾಟರ್ ಏನು ಅನ್ನೋದನ್ನು ಪ್ರಿಯಾಂಕಾನೂ ಹೇಳಿಕೊಂಡಿಲ್ಲ.

ಬಾಲಿವುಡ್ ನಟಿಯೊಬ್ಬರು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವಾಗಲೇ ದುಬೈ ಮೂಲದ ವಿಮರ್ಶಕ ಉಮರ್ ಸಂಧು ಕೀಳು ಮಟ್ಟದ ಪೋಸ್ಟ್‌ ಮಾಡಿದ್ದಾನೆ. ಅಸಲಿಗೆ ಪ್ರಿಯಾಂಕಾ ಚೋಪ್ರಾ ಹಿಂದೊಮ್ಮೆ ಮಹಿಳೆಯ ಕನ್ಯತ್ವದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. "ಹೆಂಡತಿಯಾಗಿ ಸ್ವೀಕರಿಸುವಾಗ ಅವರ ಕನ್ಯತ್ವದ ಬಗ್ಗೆ ಯೋಚನೆ ಮಾಡಬೇಡಿ. ಒಳ್ಳೆಯ ನಡತೆ ಇರುವ ಮಹಿಳೆಯನ್ನು ಆಯ್ಕೆ ಮಾಡಿಕೊಳ್ಳಿ. ಕನ್ಯತ್ವ ಒಂದು ರಾತ್ತಿಯಲ್ಲಿ ಕಳೆದು ಹೋಗುತ್ತೆ. ಆದರೆ, ಉತ್ತಮ ನಡತೆ ಕೊನೆಯವರೆಗೂ ಇರುತ್ತೆ" ಎಂದಿದ್ದರು.

Netizens angry on critic Umair Sandhu controversial post about Priyanka Chopra Jonas

ಪ್ರಿಯಾಂಕಾ ಚೋಪ್ರಾ ಅವರ ಈ ಹೇಳಿಕೆಯನ್ನು ಇಟ್ಟುಕೊಂಡು ಉಮೈರ್ ಸಂಧು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾನೆ. ಮದುವೆಗೂ ಮುನ್ನ ಅಕ್ಷಯ್ ಕುಮಾರ್, ಶಾರುಖ್ ಖಾನ್ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಅದನ್ನು ಅದನ್ನೇ ಇಟ್ಟುಕೊಂಡು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಹಾಗೇ ಪತಿ ನಿಕ್ ಜೋನಾಸ್ ಜೊತೆಗಿನ ಫೋಟೊವನ್ನು ಶೇರ್ ಮಾಡಿ ಕಾಮೆಂಟ್ ಮಾಡಲಾಗಿದೆ. ಈ ಪೋಸ್ಟ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.

ನೆಟ್ಟಿಗರು ಉಮೈರ್ ಸಂಧುನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಪ್ರಿಯಾಂಕಾ ಚೋಪ್ರಾ ಹೇಳಿದ್ದರಲ್ಲಿ ಏನು ತಪ್ಪಿದೆ?" ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕೆಲವರು "ಇಂತಹ ಪೋಸ್ಟ್‌ಗಳನ್ನು ಶೇರ್ ಮಾಡುವುದೇ ದೊಡ್ಡ ತಪ್ಪು" ಎಂದಿದ್ದಾರೆ. ಈ ಹಿಂದೆ ಕೂಡ ಸೆಲಿನಾ ಜೇಟ್ಲಿ, ಸೋನಾಕ್ಷಿ ಸಿನ್ಹಾ, ರಶ್ಮಿಕಾ ಮಂದಣ್ಣ ವಿರುದ್ಧವೂ ಕೆಟ್ಟದಾಗಿ ಪೋಸ್ಟ್‌ಗಳನ್ನು ಮಾಡಲಾಗಿತ್ತು. ಆಗಲೂ ನೆಟ್ಟಿಗರೂ ಹಿಗ್ಗಾ ಮುಗ್ಗಾ ಬೈದಿದ್ದರು.

More from Filmibeat

English summary
Netizens angry on critic Umair Sandhu post controversial about Priyanka Chopra Jonas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X