ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌ನಲ್ಲಿ ಶಾರುಖ್; 'ಕಿಂಗ್' ವೇಷ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು!
ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಎರಡನೇ ಪ್ರೀ ವೆಡ್ಡಿಂಗ್ ಸಮಾರಂಭ ಇಟಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ, ಬ್ಯುಸಿನೆಸ್ ಹಾಗೂ ಕ್ರಿಕೆಟ್ ಕ್ಷೇತ್ರಕ್ಕೆ ಸಂಬಂಧಿಸಿದ 800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಅದರಲ್ಲೂ ಬಾಲಿವುಡ್ ಮಂದಿ ಈ ಶ್ರೀಮಂತರ ಪ್ರೀ ವೆಡ್ಡಿಂಗ್ ಭಾಗವಹಿಸಿ ಸಂಭ್ರಮಿಸಿದ್ದಾರೆ. ರಣ್‌ವೀರ್ ಸಿಂಗ್, ರಣ್‌ಬೀರ್ ಕಪೂರ್, ಶಾರುಖ್ ಖಾನ್ ಕುಟುಂಬ ಸೇರಿದಂತೆ ಚಿತ್ರರಂಗದ ದಿಗ್ಗಜರು ಈ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸಮಾರಂಭದ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದರಲ್ಲೊಂದು ವಿಡಿಯೋ ನೆಟ್ಟಿಗರನ್ನು ಕನ್ಫ್ಯೂಸ್ ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ ಶಾರುಖ್ ಖಾನ್ ನೋಡಿ ಹಾಲಿವುಡ್ ನಟ ಜಾನಿ ಡೆಪ್ ಅಂತ ಕನ್ಫ್ಯೂಸ್ ಆಗಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ಶಾರುಖ್ ಖಾನ್ ನೋಡಿ ಜಾನಿ ಡೆಪ್ ಅಂತ ಕನ್ಫ್ಯೂಸ್ ಆಗಿದ್ದಕ್ಕೆ ಏನು ಕಾರಣ? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರಣ್‌ಬೀರ್ ಕಪೂರ್ ಜೊತೆ ಹಾಲಿವುಡ್ ನಟ ಜಾನಿ ಡೆಪ್ ಅನ್ನು ಹೋಲುವ ವ್ಯಕ್ತಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಕೆಲವರು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸಮಾರಂಭಕ್ಕೆ ಹಾಲಿವುಡ್ ನಟ ಜಾನಿ ಡೆಪ್ ಬಂದಿದ್ರಾ ಅಂತ ಕನ್ಫ್ಯೂಸ್ ಆಗಿದ್ದರು.
ಅಸಲಿಗೆ ಅದು ಹಾಲಿವುಡ್ ನಟ ಜಾನಿ ಡೆಪ್ ಅಲ್ಲ ಶಾರುಖ್ ಖಾನ್ ಅನ್ನೋದು ಗೊತ್ತಾಗಿದೆ. ಅದೇ ವಿಡಿಯೋದಲ್ಲಿ ಶಾರುಖ್ ಖಾನ್ ಜೊತೆ ಪುತ್ರ ಅಬ್‌ರಾಮ್, ಗೌರಿ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಿದ್ದರೂ, ಜಾನಿ ಡೆಪ್ ಅಂತ ಕನ್ಫ್ಯೂಸ್ ಆಗುವುದಕ್ಕೆ ಕಾರಣ ಶಾರುಖ್ ಖಾನ್ ವೇಷ- ಭೂಷಣ. ಉದ್ದನೆಯ ಕೂದಲು ಬಿಟ್ಟು, ನೀಲಿ ಶರ್ಟ್ ತೊಟ್ಟು ಎಂಟ್ರಿ ಕೊಟ್ಟಿದ್ದರು. ಆ ಗೆಟಪ್‌ನಲ್ಲಿ ಶಾರುಖ್ ಖಾನ್ ಥೇಟ್ ಜಾನಿ ಡೆಪ್ ಅವರಂತೆಯೇ ಹೋಲುತ್ತಿದ್ದರು. ಹೀಗಾಗಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌ಗೆ ಜಾನಿ ಡೆಪ್ ಬಂದಿದ್ದರು ಅಂತ ಗೊಂದಲಕ್ಕೆ ಒಳಗಾಗಿದ್ದರು.
ಶಾರುಖ್ ಖಾನ್ 'ಡಂಕಿ' ಬಳಿಕ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ಹೋಮ್ ಪ್ರೊಡಕ್ಷನ್‌ನಲ್ಲಿ 'ಕಿಂಗ್' ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಗೆಟಪ್ ಅದೇ ಸಿನಿಮಾದ್ದು ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಪುತ್ರಿ ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಜಯ್ ಘೋಷ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಶಾರುಖ್ ಖಾನ್ ಈ ಲುಕ್ ನೋಡಿ, ನೆಟ್ಟಿಗರು ಒಂದೊಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಜಾನಿ ಡೆಪ್ ಅವರಂತೆಯೇ ಕಾಣಿಸುತ್ತಿದ್ದರಲ್ಲ" ಅಂತ ನೆಟ್ಟಿಗರೊಬ್ಬರು ಕನ್ಫ್ಯೂಸ್ ಆಗಿದ್ದರು. ಇನ್ನೊಬ್ಬರು "ಜಾನಿ ಡೆಪ್ ಇರಬಹುದೇ?" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಪಾಕಿಸ್ತಾನಿ ವರ್ಷನ್ ಆಫ್ ಜಾನಿ ಡೆಪ್" ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











