ರಣ್‌ಬೀರ್‌ಗೆ ಚುಂಬಿಸಿದ ರಶ್ಮಿಕಾ 'ಎನಿಮಲ್' ಪೋಸ್ಟರ್: "ವಿಮಾನ ದುರಂತ ಆಗುತ್ತೆ" ಎಂದು ನೆಟ್ಟಿಗರು
ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ. ಈ ಬಾರಿ ರಶ್ಮಿಕಾ ಬಗ್ಗೆ ತುಸು ಹೆಚ್ಚೇ ಚರ್ಚೆಯಾಗುತ್ತಿದ್ದಾರೆ. ಅದಕ್ಕೆ ಕಾರಣ ಅವರ ಬಾಲಿವುಡ್ ಸಿನಿಮಾ 'ಎನಿಮಲ್'. ರಣ್‌ಬೀರ್ ಕಪೂರ್ ಜೊತೆ ನಟಿಸುತ್ತಿರುವ ಈ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಆಗಿದೆ.
'ಎನಿಮಲ್' ಸಿನಿಮಾ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಅದ್ಯಾಕೆ ಅನ್ನೋದು ಪೋಸ್ಟರ್ ನೋಡಿದ ಮೇಲೆ ನಿಮಗೂ ಗೊತ್ತಾಗಿರುತ್ತೆ. ಪೋಸ್ಟರ್‌ನಲ್ಲಿ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಚುಂಬನದ ದೃಶ್ಯವಿದೆ. ಈ ಪೋಸ್ಟರ್ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.

'ಅರ್ಜುನ್ ರೆಡ್ಡಿ' ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳಿದ್ದು, ನಾನು ರಣ್‌ಬೀರ್ ಹಾಗೂ ರಶ್ಮಿಕಾ ಜೋಡಿಯ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ಪೋಸ್ಟರ್ ಒಂದನ್ನು ರಿಲೀಸ್ ಮಾಡಿತ್ತು. ಅದೇ ಈಗ ವೈರಲ್ ಆಗುತ್ತಿದೆ. ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
'ಎನಿಮಲ್' ಪೋಸ್ಟರ್ ವೈರಲ್
ರಣ್‌ಬೀರ್, ರಶ್ಮಿಕಾ ಸಿನಿಮಾ 'ಎನಿಮಲ್' ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ನಾಳೆ (ಅಕ್ಟೋಬರ್ 11) ರಿಲೀಸ್ ಆಗುತ್ತಿರುವ ರೊಮ್ಯಾಂಟಿಕ್ ಸಾಂಗ್ ಕೂಡ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರ ಪೋಸ್ಟರ್ ಅನ್ನು ಸ್ವತ: ರಶ್ಮಿಕಾ ಮಂದಣ್ಣ ಅವರೇ ಹಂಚಿಕೊಂಡಿದ್ದಾರೆ. ಹಿಂದಿಯ ಭಾಷೆಯ "ಹುವಾ ಮೇ" ಅನ್ನೋ ಹಾಡು ಕನ್ನಡದಲ್ಲೂ "ಓ ಬಾಲೆ.." ಅನ್ನೋ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ.
ರಶ್ಮಿಕಾ-ರಣ್‌ಬೀರ್ ಚುಂಬನದ ದೃಶ್ಯ ವೈರಲ್
ರಶ್ಮಿಕಾ ಮಂದಣ್ಣ ಹಾಗೂ ರಣ್‌ಬೀರ್ ಕಪೂರ್ ಚುಂಬನದ ಪೋಸ್ಟರ್ ವೈರಲ್ ಆಗುತ್ತಿದೆ. 'ಎನಿಮಲ್' ಪೋಸ್ಟರ್ ನೋಡಿ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಚುಂಬನದ ದೃಶ್ಯಗಳ ಬಗ್ಗೆ ಒಂದು ಕಡೆ ಚರ್ಚೆಯಾಗುತ್ತಿದ್ದರೆ, ಇನ್ನೊಂದು ಕಡೆ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಹೆಸರು ಮಿಸ್ ಆಗಿದ್ದು ಯಾಕೆ? ಅಂತಾನೂ ಚರ್ಚೆ ಮಾಡಲಾಗುತ್ತಿದೆ.
ಏನಂತಿದ್ದಾರೆ ನೆಟ್ಟಿಗರು?
ರಶ್ಮಿಕಾ ಹಾಗೂ ರಣ್‌ಬೀರ್ ಚುಂಬನದ ದೃಶ್ಯಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ 'ಎನಿಮಲ್' ಸಿನಿಮಾದ ಈ ಪೋಸ್ಟರ್ ಅನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಅದೇ ಮತ್ತೆ ಕೆಲವರಿಗೆ ಈ ಪೋಸ್ಟರ್ ಹಿಡಿಸಿಲ್ಲ. ಒಬ್ಬರು " ಅರೇ.. ವಿಮಾನ ದುರಂತ ಆಗುತ್ತೆ ಹುಷಾರ್" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ನೀವ್ಯಾಕೆ ಕಿಸ್ ಮಾಡಿದ್ರಿ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು " ನೀವು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಚಂದ" ಎಂದು ಹೇಳಿದ್ದಾರೆ.
ವಿಜಯ್ ಬಳಿಕ ರಣ್‌ಬೀರ್‌ಗೆ ಕಿಸ್
ರಶ್ಮಿಕಾ ಮಂದಣ್ಣ ಈ ಹಿಂದೆ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. 'ಗೀತಾ ಗೋವಿಂದರಂ' ಹಾಗೂ 'ಡಿಯರ್ ಕಾಮ್ರೇಡ್' ಎರಡೂ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡಗೆ ಕಿಸ್ ಮಾಡಿದ್ದರು. ಈಗ 'ಎನಿಮಲ್' ಸಿನಿಮಾದಲ್ಲಿ ರಣ್‌ಬೀರ್ ಕಪೂರ್‌ಗೆ ಚುಂಬಿಸಿ ಮತ್ತೆ ಸುದ್ದಿಯಾಗಿದ್ದಾರೆ.


Click it and Unblock the Notifications











