ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತಿ ಜೊತೆ ನಟಿಯ ರೊಮ್ಯಾನ್ಸ್; ಟ್ರೋಲ್ ಆಗಿದ್ದು ಚಹಾಲ್ ಪತ್ನಿ
ಹಿಂದಿ ಕಿರುತೆರೆ ನಟಿ ಸುರಭಿ ಚಂದನಾ ಹಾಗೂ ಹಾಗೂ ಕರಣ್ ಶರ್ಮಾ 2024, ಮಾರ್ಚ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಿಂದಿ ಕಿರುತೆರೆಯಲ್ಲಿ ಸುರಭಿ ಚಂದನಾ ಚಿರಪರಿಚಿತ ನಟಿ. ಇಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ವಿಡಿಯೋ ಹಾಗೂ ರೀಲ್ಸ್ ಮಾಡಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ವಿವಾಹವಾಗಿದ್ದ ನಟಿ ಸುರಭಿ ಚಂದನಾ, ತನ್ನ ಪತಿಯೊಂದಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿಬಿಟ್ಟಿದೆ. ನೆಟ್ಟಿಗರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸುರಭಿ ಚಂದನಾರನ್ನು ತಪ್ಪಾಗಿ ತಿಳಿದುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಕಿರುತೆರೆ ನಟಿ ಸುರಭಿ ಚಂದನಾ ಅವರ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ, ನೆಟ್ಟಿಗರು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಹಾಲ್ ಪತ್ನಿ ಅಂತ ಗೊಂದಲಕ್ಕೆ ಒಳಗಾಗಿದ್ದಾರೆ. ಹೀಗಾಗಿ ಚಹಾಲ್ ಹಾಗೂ ಪತ್ನಿ ಇಬ್ಬರನ್ನು ಈ ವಿಡಿಯೋಗೆ ಟ್ಯಾಗ್ ಮಾಡಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಹಿಂದಿ ಕಿರುತೆರೆ ನಟಿ ಸುರಭಿ ಚಂದನಾರನ್ನು ಕ್ರಿಕೆಟರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಎಂದು ಕನ್‌ಫ್ಲ್ಯೂಸ್ ಆಗಿದ್ದಾರೆ. ಈ ಕಾರಣಕ್ಕೆ ಸುರಭಿ ಸ್ವಿಮ್ಮಿಂಗ್ ಪೂಲ್ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಹಾಲ್ ಅನ್ನು ಎಳೆದು ತಂದು ಟ್ರೋಲ್ ಮಾಡುತ್ತಿದ್ದಾರೆ.
ನೆಟ್ಟಿಗರು ಸುರಭಿ ಚಂದನಾ ವಿಡಿಯೋಗೆ ಹೀಗೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. " ಯಜುವೇಂದ್ರ ಚಹಾಲ್ ನಿನ್ನನ್ನು ಟ್ಯಾಗ್ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ. ಒಬ್ಬ ಇನ್‌ಫ್ಲ್ಯೂಯೆನ್ಸರ್ ಅನ್ನು ಮದುವೆ ಆದರೆ ಹೀಗೆ ಆಗುತ್ತೆ. ಇದನ್ನು ಹೇಗೆ ಮಾಡುವುದಕ್ಕೆ ಸಾಧ್ಯ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ.
ಅದೇ ಮತ್ತೆ ಕೆಲವರು " ಇದು ಧನಶ್ರೀ ವರ್ಮಾ ಇರಬಹುದಾ?", "ಇದು ಧನಶ್ರೀ ಅತ್ತಿಗೆನಾ?" , "ಇದು ಧನಶ್ರೀ ವರ್ಮಾನಾ? ಇದು ಅವರ ಲೇಟೆಸ್ಟ್ ವಿಡಿಯೋನಾ? ನಂಬುವುದಕ್ಕೆ ಆಗುತ್ತಿಲ್ಲ. ಕ್ಷಮಿಸಿ, ಚಹಾಲ್ ನೀವು ತಪ್ಪು ಮಾಡಿಬಿಟ್ರಿ" ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. " ಇವರು ಸುರಭಿ ಚಂದನಾ. ಇವರಿಬ್ಬರು ಇತ್ತೀಚೆಗೆ ಮದುವೆ ಆಗಿದ್ದಾರೆ" ಎಂದೂ ಹೇಳುತ್ತಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ಧನಶ್ರೀ ವರ್ಮಾ ಇದಕ್ಕಿಂತ ಕೆಟ್ಟದಾಗಿ ಟ್ರೋಲ್ ಆಗಿದ್ದರು. ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾಯನ್ನು ಹಿಂಭಾಗದಿಂದ ಪ್ರತಿಕ್ ಉಟೆಕರ್ ಅಪ್ಪಿಕೊಂಡಿದ್ದರು. ಆ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಿದ್ದರು. ಆಗಲೂ ಯಜುವೇಂದ್ರ ಚಹಾಲ್‌ರನ್ನು ಎಳೆದು ತಂದಿದ್ದರು. ಇತ್ತೀಚೆಗೆ ಚಹಾಲ್ ಐಪಿಎಲ್‌ನಲ್ಲೀಗ 200 ವಿಕೆಟ್‌ಗಳನ್ನು ಕಬಳಿಸಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ.


Click it and Unblock the Notifications











