ಬೀಚ್‌ನಲ್ಲಿ ರೊಮ್ಯಾನ್ಸ್, ಚುಂಬನ, ಮಸ್ತ್ ಡ್ಯಾನ್ಸ್: 'ಫೈಟರ್' ಟೀಸರ್ ನೋಡಿ ನೆಟ್ಟಿಗರು ಥ್ರಿಲ್
ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಹೊಸ ಸಿನಿಮಾ 'ಫೈಟರ್' ಟೀಸರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದು, ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
'ಫೈಟರ್' 2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಹೊಸ ವರ್ಷದ ಆರಂಭದಲ್ಲಿಯೇ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಒಂದೂವರೆ ತಿಂಗಳು ಇದೆ ಅನ್ನುವಾಗಲೇ ಪ್ರಚಾರ ಆರಂಭ ಆಗಿದೆ. ಅದರ ಮೊದಲ ಹೆಜ್ಜೆಯೇ ಈ ಟೀಸರ್. 'ಪಠಾಣ್', 'ವಾರ್' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಸಿದ್ಧಾರ್ಥ್ ಆನಂದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಫೈಟರ್' ಟೀಸರ್ ನೋಡಿದ ಮೇಲೆ ನೆಟ್ಟಿಗರು ಹೃತಿಕ್ ಹಾಗೂ ದೀಪಿಕಾ ಕೆಮಿಸ್ಟ್ರಿ ಬಗ್ಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಫೈಟರ್ ಜೆಟ್‌ಗಳಿಗಿಂತಲೂ ಬೇರೆ ಇನ್ನೂ ಏನೇನೋ ಇದೆ ಅಂತ ಚರ್ಚೆ ಮಾಡುತ್ತಿದ್ದಾರೆ. ಹೃತಿಕ್-ದೀಪಿಕಾ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರ ಕಣ್ಣು ಕುಕ್ಕಿದೆ.
"ಯೆಸ್ ಬೇಬಿ ನಾವು ನೋಡುತ್ತಿದ್ದೇವೆ"
ಯೆಸ್ ಬೇಬಿ ನಾವು ನೋಡುತ್ತಿದ್ದೇವೆ. ಇದನ್ನು ಬಿಗ್ ಸ್ಟ್ರೀನ್‌ನಲ್ಲಿ ನೋಡುವುದಕ್ಕೆ ಕಾಯುತ್ತಿದ್ದೇವೆ. ಕೆಮಿಸ್ಟ್ರಿ ಇಸ್ ಕೆಮಿಸ್ಟ್ರಿಯಿಂಗ್" ಎಂದು ನೆಟ್ಟಿಗರೊಬ್ಬರು ಎಕ್ಸ್ (ಟ್ವೀಟ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ಇಬ್ಬರನ್ನು ನೋಡಲು ಕಾಯುತ್ತಿದ್ದೇವೆ"
"ಕೊನೆಗೂ ನಾವು ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಎಲ್ಲರೂ ಮಾತಾಡುವುದನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ." ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
"ಹೆಲಿಕಾಪ್ಟರ್‌ನಿಂದ ಇಳಿಯೋದಷ್ಟೇ ಸಾಕು"
ಹೃತಿಕ್ ಹಾಗೂ ದೀಪಿಕಾ ಪಡುಕೋಣೆಯ ಹಸಿ ಬಿಸಿ ದೃಶ್ಯಗಳನ್ನು ನೋಡಿದ ನೆಟ್ಟಿಗರೊಬ್ಬರು ನಮಗೆ ಹೃತಿಕ್ ಹೆಲಿಕಾಪ್ಟರ್‌ನಿಂದ ಇಳಿಯುವುದಷ್ಟೇ ಸಾಕು ಎಂದಿದ್ದಾರೆ. "ಹೃತಿಕ್ ರೋಷನ್ ಹೆಲಿಕಾಪ್ಟರ್‌ನಿಂದ ಇಳಿಯುತ್ತಾರೆ. ನಮಗೆ ಬೇಕಿರೋದು ಇದಷ್ಟೇ" ಎಂದು ನೆಟ್ಟಿಗರೊಬ್ಬರು ಟ್ವೀಟ್ (X) ಮಾಡಿದ್ದಾರೆ.
ಓ ದೇವರೇ..
" ಓ ದೇವರೇ.. ನಾನು ಇದನ್ನೆಲ್ಲ ನೋಡುವುದಕ್ಕೆ ಇನ್ನು ರೆಡಿಯಾಗಿಲ್ಲ" ಎಂದು ಹೃತಿಕ್ ಹಾಗೂ ದೀಪಿಕಾ ಪಡುಕೋಣೆಯ ಬೋಲ್ಡ್ ಸೀನ್‌ಗಳನ್ನು ಶೇರ್ ಮಾಡಿ ಇನ್ನೊಬ್ಬರು ಬರೆದುಕೊಂಡಿದ್ದಾರೆ.
2015ರಲ್ಲಿ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಈ ಇಬ್ಬರಿಗೂ ಒಂದೇ ಸಿನಿಮಾದಲ್ಲಿ ನಟಿಸುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದರು. ಸುಮಾರು ಎಂಟು ವರ್ಷಗಳ ಬಳಿಕ ಈಗ ಇಬ್ಬರು ಅಭಿಮಾನಿಗಳ ಕನಸು ಈಡೇರಿದೆ. ಯಶ್ ರಾಜ್ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರೆ, 'ಪಠಾಣ್' ಹಾಗೂ 'ವಾರ್' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟಿರೋ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳಿದ್ದಾರೆ. 'ಫೈಟರ್' 2024, ಜನವರಿ 25 ರಂದು ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











