ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೇ ದೀಪಿಕಾ, ಆಲಿಯಾ, ಕರಣ್ ಜೋಹರ್ ವಿರುದ್ಧ ಆಕ್ರೋಶ: ಕಾರಣವೇನು?

ಬಾಲಿವುಡ್ ಎನ್ನುವುದು ಬಹುದೊಡ್ಡ ಕುಟುಂಬ. ಇಲ್ಲಿ ಗಾಡ್ ಫಾದರ್ ಇಲ್ಲದೆ ಪ್ರವೇಶಿಸುವುದು ಸುಲಭವಲ್ಲ. ಪ್ರತಿಭೆ ಪ್ರದರ್ಶಿಸಿ ಪ್ರವೇಶಿಸಿದರೂ ಅವರನ್ನು ಅಷ್ಟು ಸುಲಭಕ್ಕೆ ಅಲ್ಲಿನ 'ಕುಟುಂಬ ರಾಜಕಾರಣ' ಒಪ್ಪಿಕೊಳ್ಳುವುದಿಲ್ಲ. ಅದರಲ್ಲಿಯೂ ಕಿರುತೆರೆಯಿಂದ ಬಂದ ಕಲಾವಿದರೆಂದರೆ ಬಾಲಿವುಡ್‌ನಲ್ಲಿ ಒಂದು ಬಗೆಯ ತಿರಸ್ಕಾರ ಸಹಜ. ಈ ಎಲ್ಲ ಅವಮಾನಗಳನ್ನೂ ಸುಶಾಂತ್ ಸಿಂಗ್ ರಜಪೂತ್ ಅನುಭವಿಸಿದ್ದರು ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆಗಳಿವೆ.

ಸುಶಾಂತ್ ಆಘಾತಕಾರಿ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಅನೇಕರು ಈ ಉದಾಹರಣೆಗಳನ್ನು ಕೆದಕುತ್ತಿದ್ದಾರೆ. ಸುಶಾಂತ್ ಯಾರಿಂದೆಲ್ಲ ಅವಮಾನ ಎದುರಿಸಿದ್ದರು? ಯಾರು ಯಾರು ಅವರನ್ನು ಕೀಳಾಗಿ ಕಂಡಿದ್ದರು? ಎಂಬುದನ್ನೆಲ್ಲ ಹುಡುಕಿ ತೆಗೆಯುತ್ತಿದ್ದಾರೆ. ಸುಶಾಂತ್ ಸಾವಿನ ಬಳಿಕ ಸಂತಾಪ ಸೂಚಿಸಿರುವ ಆಲಿಯಾ ಭಟ್, ಕರಣ್ ಜೋಹರ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ...

ಸುಶಾಂತ್‌ನನ್ನು ಸಾಯಿಸುತ್ತೇನೆ!

ಸುಶಾಂತ್‌ನನ್ನು ಸಾಯಿಸುತ್ತೇನೆ!

ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ 2014ರಲ್ಲಿ ಆಲಿಯಾ ಭಟ್ ಭಾಗವಹಿಸಿದ್ದರು. 'ಸ್ಟುಡೆಂಟ್ ಆಫ್ ದಿ ಇಯರ್' ಚಿತ್ರದ ಪ್ರಚಾರಕ್ಕಾಗಿ ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಪಾಲ್ಗೊಂಡಿದ್ದರು. ಅದರಲ್ಲಿ ಕರಣ್, ಯಾರನ್ನು ಮದುವೆಯಾಗಲು, ಸಂಬಂಧವಿರಿಸಿಕೊಳ್ಳಲು ಮತ್ತು ಕೊಲ್ಲಲು ಇಷ್ಟಪಡುತ್ತೀರಿ ಎಂಬ ಮೂರು ಪ್ರಶ್ನೆಗಳನ್ನು ಇರಿಸಿದ್ದರು. ಅದಕ್ಕೆ ಆಲಿಯಾ ನೀಡಿದ್ದ ಉತ್ತರ ಕ್ರಮವಾಗಿ ರಣಬೀರ್ ಕಪೂರ್, ರಣವೀರ್ ಸಿಂಗ್ ಮತ್ತು ಸುಶಾಂತ್ ಸಿಂಗ್. ಪ್ರಶ್ನೆಗೆ ಉತ್ತರವಾಗಿ ಸುಶಾಂತ್‌ನನ್ನು ಸಾಯಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾಗಿ ನಂತರ ಆಲಿಯಾ ಕ್ಷಮೆ ಕೇಳಿದ್ದರು.

ಸುಶಾಂತ್ ಎಂದರೆ ಯಾರು?

ಸುಶಾಂತ್ ಎಂದರೆ ಯಾರು?

ಇದಿಷ್ಟೇ ಅಲ್ಲ, ಮತ್ತೊಮ್ಮೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಅಲಿಯಾ ತೆರಳಿದ್ದರು. ಆಗ ಅತ್ಯಂತ ಹಾಟೆಸ್ಟ್ ಸೆಲೆಬ್ರಿಟಿ ಯಾರು? ಎಂದು ಕರಣ್ ಮೂರು ಆಯ್ಕೆಗಳನ್ನು ನೀಡಿದ್ದರು. ರಣವೀರ್ ಸಿಂಗ್, ಸುಶಾಂತ್ ಸಿಂಗ್ ರಜಪೂತ್ ಮತ್ತು ವರುಣ್ ಧವನ್. ಆಗ ಆಲಿಯಾ, 'ಸುಶಾಂತ್ ಸಿಂಗ್ ರಜಪೂತ್ ಎಂದರೆ ಯಾರು?' ಎಂದು ಕೇಳಿದ್ದರು.

ಆಲಿಯಾ ಭಟ್ ಸಂತಾಪ

ಆಲಿಯಾ ಭಟ್ ಸಂತಾಪ

ತನ್ನ ಕಠಿಣ ಪರಿಶ್ರಮದಿಂದಲೇ ಚಿತ್ರರಂಗ ಪ್ರವೇಶಿಸಿ ಸ್ಥಾನ ಪಡೆದುಕೊಂಡು ಬೆಳೆದ ಸುಶಾಂತ್ ಅವರನ್ನು ಆಲಿಯಾ ಭಟ್ ಮತ್ತು ಕರಣ್ ಜೋಹರ್ ವ್ಯಂಗ್ಯವಾಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. 'ನನಗೆ ತೀವ್ರ ಆಘಾತವಾಗಿದೆ. ಅದರ ಬಗ್ಗೆ ಎಷ್ಟು ಚಿಂತಿಸುತ್ತಿದ್ದೇನೋ ಅದಕ್ಕೆ ಪದಗಳೇ ಇಲ್ಲ. ಬಲು ಬೇಗನೆ ನಮ್ಮನ್ನು ಬಿಟ್ಟು ಹೊರಟಿರಿ. ನಿಮ್ಮನ್ನು ನಾವೆಲ್ಲರೂ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಆಲಿಯಾ, ಸುಶಾಂತ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದರು. ಸುಶಾಂತ್ ಆರಂಭದ ದಿನಗಳಲ್ಲಿ ಅವರೊಬ್ಬ ಟಿವಿ ನಟ ಎಂದು ಹೀಯಾಳಿಸಿದವರು ನೀವು. ಈಗ ಟ್ವಿಟ್ಟರ್‌ನಲ್ಲಿ ನಟಿಸುತ್ತಿದ್ದೀರಾ ಎಂದು ಅನೇಕರು ಕಿಡಿಕಾರಿದ್ದಾರೆ.

ಅವಕಾಶ ನೀಡದ ಕರಣ್

ಅವಕಾಶ ನೀಡದ ಕರಣ್

ಕರಣ್ ಜೋಹರ್ ಕೂಡ ಸುಶಾಂತ್‌ಗೆ ಅವಕಾಶ ನೀಡದೆ ಆಟವಾಡಿದ್ದರು ಎನ್ನಲಾಗಿದೆ. ಒಮ್ಮೆ ಕರಣ್ ತಮ್ಮ ಕಚೇರಿಯ ಫೋನ್ ನಂಬರ್‌ಅನ್ನು ಸುಶಾಂತ್‌ಗೆ ನೀಡಿದ್ದರು. ತಮ್ಮ ಸಿನಿಮಾ ಜೀವನ ಇನ್ನು ಗಟ್ಟಿಯಾಯಿತು ಎಂದು ಸುಶಾಂತ್ ಖುಷಿಯಿಂದ ಕುಣಿದಾಡಿದ್ದರಂತೆ. ಮರುದಿನ ಕರಣ್ ನೀಡಿದ್ದ ನಂಬರ್‌ಗೆ ಫೋನ್ ಮಾಡಿದಾಗ ಅವರು ಕಚೇರಿಯಲ್ಲಿಲ್ಲ ಎಂಬ ಉತ್ತರ ಬಂತು. ಅದರ ನಂತರ ಮತ್ತೊಮ್ಮೆ ಪ್ರಯತ್ನಿಸಿದಾಗ ಅವರು ಬಿಜಿ ಎಂದರಂತೆ. ಮತ್ತೊಮ್ಮೆ ಪ್ರಯತ್ನ ಮಾಡಿದಾಗ ಆಚೆಯಿಂದ ಬಂದ ಉತ್ತರ, 'ನಾವು ಸ್ಟಾರ್‌ಗಳ ಜತೆ ಮಾತ್ರ ಸಿನಿಮಾ ಮಾಡುವುದು. ನಿಮಗೆ ಅವಕಾಶ ನೀಡಲು ಸಾಧ್ಯವಿಲ್ಲ'! ಇದನ್ನು ಸ್ವತಃ ಸುಶಾಂತ್ ಹೇಳಿಕೊಂಡಿದ್ದರು.

ಕರಣ್ ಜೋಹರ್ ವಿರುದ್ಧ ಕಿಡಿ

ಕರಣ್ ಜೋಹರ್ ವಿರುದ್ಧ ಕಿಡಿ

ಈಗ ಕರಣ್, ಈ ವರ್ಷಗಳಲ್ಲಿ ನಿಮ್ಮೊಂದಿಗೆ ಸಂಪರ್ಕದಲ್ಲಿ ಇರಲ್ಲದೆ ಇರುವುದಕ್ಕೆ ನನ್ನನ್ನು ನಾನು ದೂಷಿಸಿಕೊಳ್ಳುತ್ತೇನೆ. ನಿಮ್ಮ ಬದುಕಿನ ಸಂಗತಿಗಳನ್ನು ಹಂಚಿಕೊಳ್ಳಲು ನಿಮಗೆ ಜನರ ಅಗತ್ಯವಿತ್ತು ಎನಿಸುತ್ತಿದೆ. ಈ ತಪ್ಪನ್ನು ನಾನು ಮತ್ತೆ ಮಾಡುವುದಿಲ್ಲ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಕರಣ್ ಜೋಹರ್‌ ಅವರಲ್ಲಿ ಈಗ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಆದರೆ ಅವರನ್ನು ಲೇವಡಿ ಮಾಡುವಾಗ ಮತ್ತು ಟಿವಿ ನಟ ಎಂದು ಅವಕಾಶ ನಿರಾಕರಿಸುವಾಗ ಕನಿಷ್ಠ ಪ್ರಜ್ಞೆ ಇರಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಮದುವೆಗೆ ಆಹ್ವಾನವಿರಲಿಲ್ಲ

ದೀಪಿಕಾ ಮದುವೆಗೆ ಆಹ್ವಾನವಿರಲಿಲ್ಲ

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಸುಶಾಂತ್‌ಗೆ ಆಹ್ವಾನ ನೀಡಿರಲಿಲ್ಲ ಎನ್ನುವುದೂ ಈಗ ಚರ್ಚೆಯಾಗುತ್ತಿದೆ. ದೀಪಿಕಾ ತಾವೂ ಖಿನ್ನತೆಯಿಂದ ಹೊರಬಂದಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಪಿ.ಕೆ. ಚಿತ್ರದ ವೇಳೆ ಸುಶಾಂತ್‌ಗೆ ಚುಂಬನ ನೀಡಲು ಅನುಷ್ಕಾ ಆರಂಭದಲ್ಲಿ ನಿರಾಕರಿಸಿದ್ದರು ಎಂದೂ ಹೇಳಲಾಗುತ್ತಿದೆ. ಬಾಲಿವುಡ್‌ನಲ್ಲಿ ಸುಶಾಂತ್ ಇಂತಹ ಅನೇಕ ಅವಮಾನಗಳನ್ನು ಎದುರಿಸಿದ್ದರು.

ಬಾಲಿವುಡ್ ಸ್ವೀಕರಿಸುತ್ತಿಲ್ಲ

ಬಾಲಿವುಡ್ ಸ್ವೀಕರಿಸುತ್ತಿಲ್ಲ

'ನನ್ನನ್ನು ಯಾರೂ ತಮ್ಮ ಪಾರ್ಟಿಗಳಿಗೆ ಆಹ್ವಾನಿಸುವುದಿಲ್ಲ. ನನ್ನನ್ನು ತಮ್ಮ ಕುಟುಂಬದವನು ಎಂದು ಬಾಲಿವುಡ್ ಸ್ವೀಕರಿಸುತ್ತಿಲ್ಲ' ಎಂದು ಸುಶಾಂತ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಈ ಕಾರಣದಿಂದಲೇ ಸುಶಾಂತ್ ಬಾಲಿವುಡ್‌ನ ಸ್ಟಾರ್‌ಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಆದರೆ ತಾವು ಬೆಳೆದು ಬಂದ ಧಾರಾವಾಹಿ ಲೋಕದ ಗೆಳೆಯರನ್ನು ಅವರು ಮರೆತಿರಲಿಲ್ಲ.

ನನಗೆ ಗಾಡ್ ಫಾದರ್‌ಗಳಿಲ್ಲ

ನನಗೆ ಗಾಡ್ ಫಾದರ್‌ಗಳಿಲ್ಲ

ಅಭಿಮಾನಿಗಳ ಪೋಸ್ಟ್‌ಗಳಿಗೆ ಸುಶಾಂತ್ ನೀಡಿದ್ದ ಪ್ರತಿಕ್ರಿಯೆಗಳು ಈ ಅನುಮಾನಗಳನ್ನು ಬಲಪಡಿಸುತ್ತವೆ. 'ಈ ಚಿತ್ರದಲ್ಲಿಯೂ ನೀವು ಸಾಯುತ್ತೀರಾ? ನಾನು ಸಿನಿಮಾ ನೋಡೊಲ್ಲ. ಈ ಚಿತ್ರೋದ್ಯಮದಲ್ಲಿ ನೀವು ವಿಶಾಲ ಹೃದಯವುಳ್ಳವರು. ನಿಮ್ಮಂತಹ ಜನರು ಸುದೀರ್ಘ ಕಾಲ ಬದುಕಬೇಕು ಎಂದು ಅಭಿಮಾನಿಯೊಬ್ಬರು ಹೇಳಿದ್ದರು. ಅದಕ್ಕೆ ಸುಶಾಂತ್, 'ಅರೆ, ನೀವು ಸಿನಿಮಾ ನೋಡದೆಯೇ ಇದ್ದರೆ ಬಾಲಿವುಡ್ ನನ್ನನ್ನು ಹೊರಗೆ ಎಸೆಯುತ್ತದೆ. ನನಗೆ ಗಾಡ್ ಫಾದರ್‌ಗಳಿಲ್ಲ. ನೀವೇ ನನ್ನ ಎಲ್ಲ ಗಾಡ್ ಮತ್ತು ಫಾದರ್‌ಗಳನ್ನು ಮಾಡಿದ್ದೀರಿ. ನಾನು ಬಾಲಿವುಡ್‌ನಲ್ಲಿ ಉಳಿಯಬೇಕೆಂದು ನೀವು ಬಯಸಿದ್ದರೆ ದಯವಿಟ್ಟು ಸಿನಿಮಾ ನೋಡಿ' ಎಂದು ಪ್ರತಿಕ್ರಿಯಿಸಿದ್ದರು.

More from Filmibeat

English summary
Netizens blamming Bollywood nepotism over Sushant Singh Rajput's death and criticising Alia Bhat and Karan Johar for mocking him a long ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X