For Quick Alerts
    ALLOW NOTIFICATIONS  
    For Daily Alerts

    ಪುರುಷ ಕಾಮಿಡಿಯನ್ ಗರ್ಭಿಣಿಯಾಗಿದ್ದಾರೆ ಎಂದ ನೆಟ್ಟಿಗರು: ಕಾರಣವೇನು ಗೊತ್ತೇ?

    |

    ಭಾರತದ ಹೆಸರಾಂತ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಲ್ಲಿ ಒಬ್ಬರಾದ ಕೆನ್ನೆತ್ ಮ್ಯೂಥ್ಯೂ ಸೆಬಾಸ್ಟಿಯನ್ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳನ್ನು ಬಳಸಿ ನಿಂದಿಸುವ ಮೂಲಕ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

    Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

    ಕೆನ್ನಿ ಸೆಬಾಸ್ಟಿಯನ್ ಗರ್ಭಿಣಿಯಾಗಿದ್ದಾರೆ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಮೂಲಕ ಅವರನ್ನು ಅಣಕಿಸಲಾಗುತ್ತಿದೆ. ಜತೆಗೆ ಕೆನ್ನಿ ಅವರ ವಿಶೇಷ ಕಾರ್ಯಕ್ರಮಗಳ ಪ್ರಸಾರ ಮಾಡುತ್ತಿರುವ ನೆಟ್ ಫ್ಲಿಕ್ಸ್ ಇದರ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

    ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?

    ಇನ್ನು ಕೆಲವರು ಕೆನ್ನಿ ಅವರ ಬೆಂಬಲಕ್ಕೆ ಬಂದಿದ್ದು, ಮಾನವೀಯತೆಯ ದೃಷ್ಟಿಯಿಂದ ಅವರನ್ನು ಬಿಟ್ಟುಬಿಡಿ ಎಂದಿದ್ದಾರೆ. ಅದರ ಹಿನ್ನೆಲೆಯಲ್ಲಿಯೇ ಕೆನ್ನಿ ಸೆಬಾಸ್ಟಿಯನ್ ಗರ್ಭಿಣಿಯಾಗಿರುವುದರಿಂದ ಮಾನವೀಯತೆಯ ದೃಷ್ಟಿಕೋನದಿಂದ ಅವರನ್ನು ಉಳಿಸಿ ಎಂದು ಅವರ ಹಾಸ್ಯ ಕಾರ್ಯಕ್ರಮಗಳ ತುಣುಕುಗಳನ್ನು ಬಳಸಿ ವ್ಯಂಗ್ಯ ಮಾಡಲಾಗಿದೆ. ಮುಂದೆ ಓದಿ...

    ನಾನು ಹಾಗೆ ಹೇಳೇ ಇಲ್ಲ ಎಂದ ಕೆನ್ನಿ

    ನಾನು ಹಾಗೆ ಹೇಳೇ ಇಲ್ಲ ಎಂದ ಕೆನ್ನಿ

    ಕೆನ್ನಿ ಅವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ಧ ಬಳಸಿದ್ದರೆನ್ನಲಾದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆನ್ನಿ ಅವರ ಇನ್‌ಸ್ಟಾಗ್ರಾಂ ಖಾತೆಯ ಕಾಮೆಂಟ್ ಸೆಕ್ಷನ್‌ನಲ್ಲಿ ಅವರು ಅಸಭ್ಯ ಪದ ಬಳಸಿದ್ದಾರೆ. ಆದರೆ ಇದು ತಮ್ಮ ವಿರುದ್ಧ ಯಾರೋ ದುರುದ್ದೇಶದಿಂದ ಮಾಡಿರುವುದು. ತಮ್ಮ ಧರ್ಮದ ಕಾರಣದಿಂದ ಈ ರೀತಿ ಸುಳ್ಳು ಪೋಸ್ಟ್ ಸೃಷ್ಟಿಸಿ ವೈರಲ್ ಮಾಡಲಾಗಿದೆ ಎಂದು ಕೆನ್ನಿ ಸಮಜಾಯಿಷಿ ನೀಡಿದ್ದಾರೆ.

    ಪೊಲೀಸರಿಗೆ ದೂರು ನೀಡುತ್ತೇನೆ

    ಪೊಲೀಸರಿಗೆ ದೂರು ನೀಡುತ್ತೇನೆ

    'ನನ್ನ ಕುರಿತು ಕೆಲವು ನಕಲಿ ಸ್ಕೀನ್‌ಶಾಟ್‌ಗಳು ಹರಿದಾಡುತ್ತಿದೆ. ನಾನು ಜನರನ್ನು ನಿಂದಿಸಿದ್ದಾಗಿ ಬಿಂಬಿಸಲಾಗುತ್ತಿದೆ. ನನ್ನ ಧರ್ಮದ ಕಾರಣಕ್ಕೆ ನನ್ನ ವಿರುದ್ಧ ದಾಳಿ ಮಾಡುತ್ತಿದ್ದ ಖಾತೆಯೊಂದನ್ನು ರಿಪೋರ್ಟ್ ಮಾಡಿದ್ದಕ್ಕಾಗಿ ಈ ಕೃತ್ಯ ಎಸಗಿದ್ದಾರೆ. ನಾನು ಮುಂಬೈ ಪೊಲೀಸರಿಗೆ ಈ ಬಗ್ಗೆ ದೂರು ನೀಡುತ್ತಿದ್ದು, ತನಿಖೆ ನಡೆಸುವಂತೆ ಮನವಿ ಮಾಡಲಿದ್ದೇನೆ. ಈ ಯಾವ ವದಂತಿಗಳಿಗೂ ನೀವು ಕಿವಿಗೊಡಬೇಡಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

    ನಟಿ ಪಾಯಲ್ ರೋಹ್ಟಗಿ ಟ್ವಿಟ್ಟರ್ ಖಾತೆ ಮತ್ತೆ ಅಮಾನತುನಟಿ ಪಾಯಲ್ ರೋಹ್ಟಗಿ ಟ್ವಿಟ್ಟರ್ ಖಾತೆ ಮತ್ತೆ ಅಮಾನತು

    ಕೆನ್ನಿ ನಾಟಕವಾಡುತ್ತಿದ್ದಾರೆ

    ಕೆನ್ನಿ ನಾಟಕವಾಡುತ್ತಿದ್ದಾರೆ

    ಆದರೆ ಈ ಸ್ಕ್ರೀನ್‌ಶಾಟ್ ಹಾಗೂ ಅದರ ವಿಡಿಯೋಗಳನ್ನು ಅನೇಕರು ಹಂಚಿಕೊಂಡಿದ್ದು, ಇದು ನಕಲಿ ಅಲ್ಲ, ಕೆನ್ನಿ ಅವರ ಖಾತೆಯ ಕಾಮೆಂಟ್ ವಿಭಾಗದಿಂದಲೇ ತೆಗೆದುಕೊಳ್ಳಲಾಗಿದೆ. ಕೆನ್ನಿ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಮತ್ತೊಂದು ನಾಟಕವಾಡುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

    ಅಮೆಜಾನ್, ನೆಟ್‌ಫ್ಲಿಕ್ಸ್‌ಗೆ ಪ್ರಶ್ನೆ

    ಅಮೆಜಾನ್, ನೆಟ್‌ಫ್ಲಿಕ್ಸ್‌ಗೆ ಪ್ರಶ್ನೆ

    ಇನ್ನು ಕೆಲವರು ಕೆನ್ನಿ ಸೆಬಾಸ್ಟಿಯನ್ ಅವರ ಕಾಮಿಡಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ನೆಟ್ ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್ ಫಾರ್ಮ್‌ಗಳಿಗೆ, ನೀವು ಅವರ ನಿಂದನಾತ್ಮಕ ವರ್ತನೆಗಳನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕೆನ್ನಿ ಅವರ ಕೆಲವು ಕಾರ್ಯಕ್ರಮಗಳನ್ನು ಜನರು ಇಷ್ಟಪಡದೆ ಕಾಮೆಂಟ್ ಮಾಡಿದ್ದರಿಂದ ಜನರ ಮೇಲೆ ಈ ರೀತಿ ಕಿಡಿಕಾರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಟಿಕ್ ಟಾಕ್ ನಿಷೇಧದ ಸುತ್ತ: ಗೆದ್ದವರು ಯಾರು? ಸೋತವರು ಯಾರು?ಟಿಕ್ ಟಾಕ್ ನಿಷೇಧದ ಸುತ್ತ: ಗೆದ್ದವರು ಯಾರು? ಸೋತವರು ಯಾರು?

    English summary
    Netizens slams comedian Kenny Sebastian for obscene abuses against people on social media.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X