ಕಮಲ್ ಹಾಸನ್ ಸಿನಿಮಾಗೆ ರಣ್‌ವೀರ್ ಬೆಂಬಲ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್ ನಟ!

ಬಾಲಿವುಡ್ ಸಿನಿಮಾಗಳಿಗೆ ಸೌತ್‌ ಸಿನಿಮಾಗಳು ಟಕ್ಕರ್ ಕೊಡುತ್ತಿದ್ದು, ಬಾಲಿವುಡ್‌ ಬಿಗ್ ಸ್ಟಾರ್‌ಗಳ ಸಿನಿಮಾಗಳೇ ಮೂಲೆ ಗುಂಪಾಗಿದೆ. ಇತ್ತೀಚಿಗೆ ರಿಲೀಸ್ ಆದ ಬಾಲಿವುಡ್‌ನ ಹಲವು ಸಿನಿಮಾಗಳ ಕಥೆ ಇದಾಗಿದ್ದು, ಬಾಲಿವುಡ್‌ನ ಪ್ರೇಕ್ಷಕರು ಸೌತ್ ಸಿನಿಮಾಗಳ ಕಡೆ ವಾಲುತ್ತಿದ್ದಾರೆ.

ಅದರಲ್ಲೂ ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದ್ದು, ಸೌತ್ ಸಿನಿಮಾಗಳು ಹಿಂದಿಯಲ್ಲೂ ಡಬ್‌ ಆಗಿ ಹಿಂದಿ ಪ್ರೇಕ್ಷಕರನ್ನು ಸಹ ಗೆಲ್ಲುವಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಇನ್ನು ಮುಂದೆ ಕೂಡ ಸೌತ್ ಸಿನಿಮಾಗಳು ಬಾಲಿವುಡ್‌ ಅಂಗಳದಲ್ಲಿ ಆರ್ಭಟಿಸಲು ಸಜ್ಜಾಗಿದೆ.

ಹೀಗಾಗಿ ಸೌತ್ ಸಿನಿಮಾಗಳಿಗೆ ಹಾಗೂ ನಟರಿಗೆ ಭಾರೀ ಬೇಡಿಕೆ ಕೂಡ ಕ್ರಿಯೇಟ್ ಆಗಿದೆ. ಅಲ್ಲದೆ ಇತ್ತೀಚಿಗೆ ಬಾಲಿವುಡ್‌ನ ಸ್ಟಾರ್‌ ನಟರು ಸೌತ್ ಸಿನಿಮಾಗಳಿಗೆ ಪ್ರಮೋಷನ್‌ ಕೂಡ ನೀಡುತ್ತಿದ್ದಾರೆ. ಹಿಂದಿಯಲ್ಲಿ ರಿಲೀಸ್ ಆಗುವ ಸೌತ್ ಸಿನಿಮಾಗಳಿಗೆ ಪ್ರಮೋಷನ್‌ ನೀಡುವ ಮೂಲಕ ದಕ್ಷಿಣ ಸಿನಿಮಾ ಹಾಗೂ ನಟರ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈಗ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ದಕ್ಷಿಣದ ಸಿನಿಮಾಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಣವೀರ್ ಸಿಂಗ್ ಟ್ರೋಲ್

ಬಾಲಿವುಡ್‌ ನಟ ಇತ್ತೀಚಿಗಷ್ಟೇ ದಕ್ಷಿಣ ಭಾರತದ ಚಿತ್ರಕ್ಕೆ ಬೆಂಬಲ ನೀಡಿದ್ದರು. ಕಮಲ್ ಹಾಸನ್ ನಟನೆಯ 'ವಿಕ್ರಮ್' ಸಿನಿಮಾಗೆ ಪ್ರಮೋಷನ್ ಮಾಡಿದ್ದರು. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗಿದ್ದು, ರಣವೀರ್‌ ಸಿಂಗ್‌ಗೆ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಕೇಳ್ತಿದ್ದಾರೆ. ನಿಮಗೆ ಇತರೆ ಉದ್ಯಮದ ಚಲನಚಿತ್ರಗಳನ್ನು ಪ್ರಚಾರ ಮಾಡಲು ಸಮಯವಿದೆ. ಆದರೆ, ನಿಮ್ಮದೆ ಇಂಡಸ್ಟ್ರಿ ಚಲನಚಿತ್ರವನ್ನು ಪ್ರಚಾರ ಮಾಡಲು ಸಮಯವಿಲ್ಲ. 'ಧಾಕಡ್' ಸಿನಿಮಾಗೆ ಯಾವೊಬ್ಬ ನಟ ನಟಿಯೂ ಪ್ರೋತ್ಸಾಹ ನೀಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದ್ದಕ್ಕಿಂದ್ದಂತೆ ಬಾಲಿವುಡ್‌ಗೆ ದಕ್ಷಿಣದ ಸ್ನೇಹಿತರನ್ನು ಮಾಡಿಕೊಳ್ಳುತ್ತಿರುವುದು ಆಶ್ಚರ್ಯವಾಗುತ್ತಿದೆ ಎಂದು ರಣವೀರ್‌ ಸಿಂಗ್‌ ನಾನಾ ಬಗೆಯಲ್ಲಿ ಟ್ರೋಲ್ ಮಾಡ್ತಿದ್ದಾರೆ.

 'ವಿಕ್ರಮ್' ಹಿಂದಿ ವರ್ಷನ್ ಟ್ರೈಲರ್ ರಿಲೀಸ್

'ವಿಕ್ರಮ್' ಹಿಂದಿ ವರ್ಷನ್ ಟ್ರೈಲರ್ ರಿಲೀಸ್

ಬಹುಭಾಷಾ ನಟ ಕಮಲ್ ಹಾಸನ್ ಅಭಿಯನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಿಕ್ರಮ್‌' ಸಿನಿಮಾದ ಹಿಂದಿ ವರ್ಷನ್‌ ಟ್ರೈಲರ್‌ನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದರು. ಅಲ್ಲದೆ ತಮ್ಮ ಟ್ವೀಟ್‌ನಲ್ಲಿ ಸಿನಿಮಾದ ಟ್ರೈಲರ್‌ ಹಂಚಿಕೊಂಡು "ನನ್ನ ಪ್ರತಿಭಾವಂತ ಗೆಳೆಯ ಲೋಕೇಶ್ ಮತ್ತು ಭಾರತೀಯ ಚಿತ್ರರಂಗದ ದಂತಕಥೆಯಾದ ಕಮಲ್ ಹಾಸನ್ ಅವರಿಗೆ ಅಭಿನಂದನೆಗಳು ವಿಕ್ರಮ್ ಸಿನಿಮಾದ ಟ್ರೈಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ." ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಕೂಡ ಆಗಿತ್ತು. ಇದಕ್ಕೆ ಕಮಲ್ ಹಾಸನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರೆ, ಕೆಲವರು ರಣವೀರ್ ಸಿಂಗ್ ಟ್ವೀಟ್‌ಗೆ ಮರು ಟ್ವೀಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.

 ದಕ್ಷಿಣ ಸಿನಿಮಾ ಬಗ್ಗೆ ಒಲವಿರುವ ರಣವೀರ್ ಸಿಂಗ್

ದಕ್ಷಿಣ ಸಿನಿಮಾ ಬಗ್ಗೆ ಒಲವಿರುವ ರಣವೀರ್ ಸಿಂಗ್

ಬಾಲಿವುಡ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರ ಹೆಚ್ಚಾಗಿದ್ದ ಸಮಯದಲ್ಲಿ ಬಾಲಿವುಡ್ ವರ್ಸಸ್ ಸೌತ್ ಸಿನಿಮಾ ಎಂಬ ಚರ್ಚೆ ಎದ್ದಿತ್ತು. ಈ ಸಮಯದಲ್ಲಿ ನಟ ರಣವೀರ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. "ನನಗೆ ತೆಲುಗು ಮಾತನಾಡಲು ಬರುವುದಿಲ್ಲ. ಆದರೂ ನಾನು 'ಪುಷ್ಪ', 'RRR' ಸಿನಿಮಾ ನೋಡಿದ್ದೇನೆ. ಆ ಸಿನಿಮಾಗಳ ಬಗ್ಗೆ ನಿಜಕ್ಕೂ ವಿಸ್ಮಯಗೊಂಡೆ. ಸಿನಿಮಾ ಮೇಕಿಂಗ್‌ ಅನ್ನು ನಾನು ಪ್ರಶಂಸಿಸುತ್ತೇನೆ. ಬೇರೆ ಬೇರೆ ವಲಯದ ಪ್ರೇಕ್ಷಕರು ಈ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನನಗೆ ತುಂಬಾ ಹೆಮ್ಮೆಇದೆ. ಅವುಗಳೆಲ್ಲವೂ ನಮ್ಮ ಚಿತ್ರಗಳು ಎಲ್ಲಾ ಸಿನಿಮಾಗಳು ಭಾರತೀಯ ಸಿನಿಮಾಗಳೇ," ಎಂದು ಹೇಳಿಕೆ ನೀಡಿದ್ದರು.

 ಜೂನ್ 3 ಕ್ಕೆ 'ವಿಕ್ರಮ್' ಸಿನಿಮಾ ಬಿಡುಗಡೆ

ಜೂನ್ 3 ಕ್ಕೆ 'ವಿಕ್ರಮ್' ಸಿನಿಮಾ ಬಿಡುಗಡೆ

ಕಮಲ್ ಹಾಸನ್ ಈ ಬಾರಿ ವಿಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದ ಟ್ರೈಲರ್‌ನಲ್ಲಿ ರಗಡ್‌ ಲುಕ್‌ ಕೊಟ್ಟಿದ್ದಾರೆ. ಸದ್ಯ 'ವಿಕ್ರಮ್' ಸಿನಿಮಾ ದೇಶದಾದ್ಯಂತ ಜೂನ್ 3 ರಂದು ಅಬ್ಬರಿಸಲು ಸಜ್ಜಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ 'ವಿಕ್ರಮ್' ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ವಿಜಯ್ ಸೇತುಪತಿ, ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೈಲರ್, ಪೋಸ್ಟರ್‌ಗಳಿಂದಲೇ ಸಿನಿಮಾ ಹೈಪ್ ಕ್ರಿಯೆಟ್ ಮಾಡಿದ್ದು, ಮತ್ತೊಂದು ದಕ್ಷಿಣದ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಲು ಸಿದ್ಧವಾಗಿದೆ.

More from Filmibeat

English summary
Netizens Troll Ranveer Singh For Promoting Kamal Haasan Tamil Movie Vikram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X