ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ; ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ ಎಂದ ನೋರಾ ಫತೇಹಿ..!

ನೋರಾ ಫತೇಹಿ .. ಯಾರಿಗೆ ತಾನೇ ಗೊತ್ತ್ ಇಲ್ಲ. ಬಾಲಿವುಡ್ ನ ರಾಣಿ ಜೇನು. ವಯ್ಯಾರದಿಂದ ನೋರಾ ಕುಣಿಯುತ್ತಿದ್ದರೆ, ಅನೇಕರು ಕುಂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಚಡಪಡಿಸುತ್ತಾರೆ.

ಇಂಥ ನೋರಾ ಫತೇಹಿ ಅವರ ಹೃದಯ ಯಾರಿಗಾಗಿ ಚಡಪಡಿಸುತ್ತೆ ಅನ್ನುವ ಕುತೂಹಲ ಸಹಜವಾಗಿಯೇ ಇದ್ದೇ ಇರುತ್ತೆ. ಹೀಗಾಗಿಯೇ.. ನಿಮ್ಮ ಲವ್ ಸ್ಟೋರಿ ಹೇಳಿ ಅಂದರೆ ಕೆನಡಾದ ಈ ಕಿನ್ನರಿ, ಪ್ರೀತಿ..ಪ್ರೇಮ..ಪುಸ್ತಕದ ಬದನೆಕಾಯಿ ಅಂದಿದ್ದಾರೆ. ಬಾಲಿವುಡ್‌ನವರ ಲೆಕ್ಕಾಚಾರದ ಬದುಕಿನ ಕಥೆಯನ್ನ ಹೇಳಿದ್ದಾರೆ.

ಹೌದು, ರಣ್‌ವೀರ್ ಅಲಹಾಬಾದಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನೋರಾ, ಬಾಲಿವುಡ್‌ನಲ್ಲಿ ಪ್ರೇಮಕ್ಕೆ ಬೆಲೆ ಇಲ್ಲ ಅಂದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅನೇಕರು ಮದುವೆ ಬಂಧನಕ್ಕೊಳಗಾಗುವುದು ಕೇವಲ ಅವರ ಅವರ ಲಾಭಕ್ಕಷ್ಟೇ ಹೊರತು, ಅಲ್ಯಾವ ಪ್ರೇಮ ಇರಲ್ಲ ಅಂದಿದ್ದಾರೆ.

Nora Fatehi said that there is no love in Bollywood where people marry only for profit

ಸಂದರ್ಶನದ ಮೂಲಕ ಬಾಲಿವುಡ್ ನ ಮತ್ತೊಂದು ಮುಖವಾಡ ಕಳಚುವ ಪ್ರಯತ್ನವನ್ನ ಮಾಡಿರುವನೋರಾ ಫತೇಹಿ, ಹಿಂದಿ ಚಿತ್ರರಂಗದಲ್ಲಿ ಬಹುತೇಕರು ಮದುವೆಯಾಗುವುದು ಅವರ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಅಷ್ಟೇ ಅಂದಿದ್ದಾರೆ. ಖ್ಯಾತಿಯ ಶಿಖರವನ್ನೇರಿದ ನಾಯಕಿ ಅಥವಾ ನಾಯಕನನ್ನ ಇಲ್ಲಿ ಚೆನ್ನಾಗಿ ಬಳಸಿಕೊಳ್ಳುತ್ತಾರೆ, ಅವರ ಸಂಪರ್ಕದಿಂದ ತಮ್ಮ ಸಂಪರ್ಕ ಸೇತುವೆಯನ್ನ ಇನ್ನಷ್ಟು ಬಲಿಷ್ಠಗೊಳಿಸಿಕೊಳ್ಳುತ್ತಾರೆ ಎಂದಿದ್ದಾರೆ ನೋರಾ ಫತೇಹಿ.

ನೇಮ್-ಫೇಮ್ ಇರುವ ವ್ಯಕ್ತಿಯನ್ನ ಮದುವೆಯಾದರೆ, ಮುಂದಿನ ಮೂರು ವರ್ಷ ಆರಾಮಾಗಿ ಬದುಕಬಹುದು, ಅನ್ನುವ ಲೆಕ್ಕಾಚಾರವನ್ನ ಹಾಕಿಯೇ ಇಲ್ಲಿ ಪ್ರೀತಿಯ ಬಲೆಯನ್ನ ಬೀಸಲಾಗುತ್ತೆ ಎಂದಿರುವ ನೋರಾ ಫತೇಹಿ ಆ ವ್ಯಕ್ತಿ ಕೈಯಲ್ಲಿ ಮೂರು ಸಿನಿಮಾಗಳಿವೆ. ಆ ಮೂರು ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾಗಳಾಗಿಯೇ ಆಗುತ್ತವೆ ಅನ್ನುವ ನಂಬಿಕೆ ಇರುತ್ತೆ. ಈ ಹಿನ್ನೆಲೆಯಲ್ಲಿಯೇ ಪ್ರೀತಿ-ಪ್ರೇಮದ ನಾಟಕವನ್ನಾಡಿ ಬೇರೆಯವರ ಗೆಲುವಿನ ಅಲೆಯಲ್ಲಿ ತೇಲುವ ಪ್ರಯತ್ನವನ್ನ ಇಲ್ಲಿ ಅನೇಕರು ಮಾಡುತ್ತಾರೆ ಎಂದಿದ್ದಾರೆ ಬಾಲಿವುಡ್‌ನ ಬಳಕುವ ಬಳ್ಳಿ ನೋರಾ ಫತೇಹಿ.

ಇನ್ನೂ ನಾನು ಹೇಳ್ತಿರುವುದೆಲ್ಲವೂ, ಬಾಲಿವುಡ್ ಬಗ್ಗೆ ನಾನು ಬೇರೆ ಯಾರಿಂದನೋ ಕೇಳಿರುವ ಕಟ್ಟು ಕಥೆಯಲ್ಲ,ನನ್ನ ಎದುರು ನಡೆದ ಹಾಗೂ ನಡೆಯುತ್ತಿರುವ ಬದುಕಿನ ವಾಸ್ತವದ ಕಥೆ ಎಂದು ಸ್ಪಷ್ಟವಾಗಿ ಹೇಳಿರುವ ನೋರಾ ಫತೇಹಿ, ಈ ಎಲ್ಲ ಕಾರಣಗಳಿಂದ ನಾನು ಯಾವುದೇ ಹುಡುಗನ ಹಿಂದೆ ಹೋಗಿಲ್ಲ. ಡೇಟಿಂಗ್​ ಮಾಡಿಲ್ಲ ಎಂದಿದ್ದಾರೆ. ಪ್ರೀತಿ-ಪ್ರೇಮಕ್ಕೆ ನನ್ನ ಬಳಿ ಸದ್ಯಕ್ಕೆ ಸಮಯ ಇಲ್ಲ ಅಂದಿದ್ದಾರೆ.

ಎಲ್ಲವೂ ನನ್ನ ಕಣ್ಮುಂದೆಯೇ ನಡೆದಿದೆ. ಅನೇಕರು ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಷ್ಟವೇ ಇಲ್ಲದ ವ್ಯಕ್ತಿಯನ್ನು ಮದುವೆ ಆಗಿ ಜೀವನ ಮಾಡುವುದಕ್ಕಿಂತ
ಕಷ್ಟಾನೋ ಸುಖಾನೋ ಒಬ್ಬಂಟಿಯಾಗಿರುವುದು ಉತ್ತಮ ಎಂದಿರುವ ನೋರಾ, ವೈಯಕ್ತಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಸಂತಸವನ್ನು ತ್ಯಾಗ ಮಾಡುವುದರಲ್ಲಿ ಅರ್ಥವಿಲ್ಲ. ಕೆಲಸ ಮತ್ತು ವೈಯಕ್ತಿಕ ಬದುಕನ್ನು ಮಿಶ್ರಣ ಮಾಡಬಾರದು ಎಂದು ಕೂಡ ನೋರಾ ಫತೇಹಿ ಹೇಳಿದ್ದಾರೆ.

ಒಟ್ನಲ್ಲಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವಂತೆ, ಹೊರಗಡೆಯಿಂದ ಬಾಲಿವುಡ್ ತುಂಬಾನೇ ಕಲರ್ ಫುಲ್ ಕಾಣಿಸುತ್ತೆ. ಆದರೆ ಇಲ್ಲಿ ಒಳಗೆ ಬಂದ ನಂತರ ನಿಜವಾದ ಬಣ್ಣ ಬಯಲಾಗುತ್ತೆ ಎಂದು ನೋರಾ ಫತೇಹಿ ಹೇಳಿದ್ದಾರೆ. ಇಲ್ಲಿ ದುಡ್ಡೇ ದೊಡ್ಡಪ್ಪ.. ದುಡ್ಡಿಗಾಗಿ ಇಲ್ಲಿ ಏನ್ ಬೇಕಾದರೂ ನಡೆಯುತ್ತೆ, ಏನ್ ಬೇಕಾದರೂ ಮಾಡಲು ಬಹುತೇಕರು ಸಿದ್ಧರಿರುತ್ತಾರೆ ಎಂದು ನೋರಾ ಹೇಳಿದ್ದಾರೆ. ನೋರಾ ಅವರ ಈ ಹೇಳಿಕೆಯನ್ನ ಬಾಲಿವುಡ್ ಹೇಗೆ ಸ್ವೀಕರಿಸುತ್ತೆ ಅನ್ನುವುದನ್ನ ಕಾದು ನೋಡಬೇಕಿದೆ.

More from Filmibeat

English summary
Beautiful Bollywood Actress Noora Fatehi, Who Is Best Known For Her Dance Says That Most Bollywood Couples Aren't in Love: 'They Just Want To Be In Right Circles, Camps And Be Relevant'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X