ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಐಶ್ವರ್ಯಾ ರೈ ನೋಡಿ ಕಣ್ಣೀರಿಟ್ಟಿದ್ದ ಅಮಿತಾಬ್ ಬಚ್ಚನ್; ಯಾಕೆ? ಯಾವಾಗ?

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತನ್ನ ಕುಟುಂಬದ ವಿಷಯದಲ್ಲಿ ಓಪನ್ ಆಗಿ ಮಾತಾಡಿದ್ದು ತೀರಾ ಕಡಿಮೆ. ಕೌಟುಂಬಿಕ ವಿಷಯವನ್ನು ಖಾಸಗಿಯಾಗಿಯೇ ಇಡುವ ಬಿಗ್‌ ಬಿ ಅಗತ್ಯವಿದ್ದ ಕಡೆ ಮಾತ್ರ ಮಾತನಾಡುತ್ತಾರೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಚೇದನದ ವದಂತಿಗಳು ಹಬ್ಬಿದಾಗಲೂ ಬಿಗ್ ಬಿ ಒಂದೇ ಒಂದು ಮಾತನ್ನು ಆಡಿರಲಿಲ್ಲ. ಆ ಮಟ್ಟಿಗೆ ತಮ್ಮ ಕುಟುಂಬದ ಗೌಪ್ಯತೆಗಳನ್ನು ಕಾಪಾಡಿಕೊಂಡು ಬರುತ್ತಾರೆ.

ಇತ್ತ ಐಶ್ವರ್ಯಾ ರೈ ಕೂಡ ಹಾಗೇನೆ. ತಮ್ಮ ಕುಟುಂಬದ ಬಗ್ಗೆ ಹೆಚ್ಚು ಮಾತಾಡಿದ್ದ ತೀರಾ ಅಪರೂಪ. ಇನ್ನು ಅಮಿತಾಬ್ ಬಚ್ಚನ್ ಸೊಸೆಯಾಗುವುದಕ್ಕೂ ಮುನ್ನವೇ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ವಿವಾಹದ ಬಳಿಕ ಮಾವ ಸೊಸೆಯ ಸಂಬಂಧ ಚೆನ್ನಾಗಿಯೇ ಇದೆ. ಸೊಸೆಯ ಕೆಲಸಗಳನ್ನು ಅಮಿತಾಬ್ ಬಚ್ಚನ್ ಆಗಾಗ ಹೊಗಳಿದ್ದು, ಗೌರವಿಸಿದ್ದ ಉದಾಹರಣೆಗಳು ಕೂಡ ಇವೆ.

Once Bollywood Mega Star Amitabh Bachchan cried after Aishwarya rai came home from Hospital

ಅಮಿತಾಬ್ ಕುಟುಂಬದಿಂದ ಐಶ್ವರ್ಯಾ ರೈ ದೂರವಿದ್ದರೆ ಎಂಬ ಸುದ್ದಿ ಹಬ್ಬಿತ್ತು. ಆಗ ಮಾವನಿಗೆ ಐಶ್ವರ್ಯಾ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಎಲ್ಲಾ ವದಂತಿಗಳಿಗೂ ಬ್ರೇಕ್ ಹಾಕಿದ್ದರು. ಇದು ಬಿಗ್ ಬಿ ಹಾಗೂ ಐಶ್ವರ್ಯಾ ಬಚ್ಚನ್ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. ಇವರಿಬ್ಬರ ನಡುವಿನ ಬಾಂಧವ್ಯಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಐಶ್ವರ್ಯಾ ರೈ ಬಾಲಿವುಡ್‌ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮನೆಯ ಸೊಸೆಯಾಗಿ ಬಂದಿದ್ದರು. ಆಗ ಮಾಧ್ಯಮಗಳು ಒಮ್ಮೆ ಬಿಗ್‌ ಬಿಗೆ ಐಶ್ವರ್ಯಾ ರೈ ಬಂದ್ಮೇಲೆ ನಿಮ್ಮ ಮನೆಯಲ್ಲಿ ಏನಾದರೂ ಬದಲಾವಣೆ ಆಗಿದೆಯೇ? ಎಂದು ಪ್ರಶ್ನೆ ಮಾಡಿದ್ದರು. ಆಗ ಅಮಿತಾಬ್ ಬಚ್ಚನ್ ಕೊಟ್ಟ ಉತ್ತರ ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು. ನಮ್ಮ ಮನೆಯಲ್ಲಿ ಅಂತಹ ಬದಲಾವಣೆ ಏನೂ ಆಗಿಲ್ಲ. ಒಬ್ಬ ಮಗಳು ಬೇರೆ ಮನೆಗೆ ಹೋದಳು. ಇನ್ನೊಬ್ಬ ಮಗಳು ಮನೆಗೆ ಬಂದಳು ಎಂದು ಹೇಳಿದ್ದರು. ಹಾಗೇ ಮಗಳಂತೆ ಐಶ್ವರ್ಯಾ ಅವರನ್ನು ಸ್ವೀಕರಿಸಿದ್ದರು.

Once Bollywood Mega Star Amitabh Bachchan cried after Aishwarya rai came home from Hospital

ಇಷ್ಟೇ ಅಲ್ಲ ಒಮ್ಮೆ ಅಮಿತಾಬ್ ಬಚ್ಚನ್ ತನ್ನ ಸೊಸೆಗಾಗಿ ಕಣ್ಣೀರು ಇಟ್ಟ ಗಳಿಗೆ ಕೂಡ ಇದೆ. ಅದು ಯಾವಾಗ? ಯಾಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಐಶ್ವರ್ಯಾ ರೈ ಆಸ್ಪತ್ರೆ ದಾಖಲಾಗಿದ್ದರು. ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸೊಸೆಯನ್ನು ಕಂಡು ಭಾವುಕರಾಗಿದ್ದರು. ಸೊಸೆ ಮನೆಗೆ ಮರಳಿದ್ದಕ್ಕೆ ಕಣ್ಣೀರು ಹಾಕಿದ್ದರು.

ಹೌದು, ಕೋವಿಡ್ 19 ಉತ್ತುಂಗದಲ್ಲಿದ್ದ ಸಮಯದಲ್ಲಿ ಐಶ್ವರ್ಯಾ ರೈ ಆಸ್ಪತ್ರೆಗೆ ದಾಖಲಾಗಿದ್ದರು. ಜೊತೆಗೆ ಮಗಳು ಆರಾಧ್ಯ ಕೂಡ ಕೋವಿಡ್‌ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇಬ್ಬರೂ ವೈರಸ್‌ನಿಂದ ಬಳಲುತ್ತಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಐಶ್ವರ್ಯಾ ರೈ ಹಾಗೂ ಆರಾಧ್ಯ ಇಬ್ಬರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿ ಮನೆಗೆ ಮರಳಿದ್ದರು. ಆಗ ವೇಳೆ ಅಮಿತಾಬ್ ಬಚ್ಚನ್ ಸೊಸೆಯನ್ನು ಕಂಡು ಮನೆಯಲ್ಲಿ ಕಣ್ಣೀರು ಹಾಕಿದ್ದರು ಎಂಬ ಸುದ್ದಿ ಹಬ್ಬಿತ್ತು.

ಆ ವೇಳೆ ಅಮಿತಾಬ್ ಬಚ್ಚನ್ ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. "ನನ್ನ ಪುಟ್ಟ ಮೊಮ್ಮಗಳು ಹಾಗೂ ಸೊಸೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದನ್ನು ನೋಡಿ, ನನ್ನ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ದೇವರು ದೇವರು ನಿಜಕ್ಕೂ ದೊಡ್ಡವನು" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಹೀಗಿರುವಾಗ ಅಮಿತಾಬ್ ಕುಟುಂಬ ಹಾಗೂ ಐಶ್ವರ್ಯಾ ರೈ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿತ್ತು. ಅಭಿಷೇಕ್ ಹಾಗೂ ಐಶ್ವರ್ಯಾ ಇಬ್ಬರೂ ಬೇರೆಯಾಗುತ್ತಾರೆ ಎಂಬ ವದಂತಿಗಳು ಜೋರಾಗಿಯೇ ಹರಿದಾಡಿದ್ದವು.

More from Filmibeat

English summary
Once Bollywood Mega Star Amitabh Bachchan cried after Aishwarya Rai came home from Hospital;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X