ತಮ್ಮ ಕೊನೆಯ ಆಸೆ ಹೇಳಿಕೊಂಡಿದ್ದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ; ಹೇಳಿದಂತೆ ಆಗಿ ಹೋಯ್ತು..!

ಸಂಗೀತ ಲೋಕದ ದಂತಕಥೆ ಗಾಯಕಿ ಆಶಾ ಭೋಸ್ಲೆ ಹೃದಯ ಸ್ತಂಭನದಿಂದ ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಸಂಗೀತ ಪ್ರೇಮಿಗಳು ಕಣ್ಣೀರು ಹಾಕಿದ್ದಾರೆ. ಆಶಾ ಭೋಸ್ಲೆ ಅವರ ಹಾಡುಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅವರ ಸಂದರ್ಶನದ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆಶಾ ಭೋಸ್ಲೆ ಸಾವಿನ ನಂತರ ಅವರ ಸಂದರ್ಶನದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ಅಭಿಮಾನಿಗಳು ನೋಡಿ ಭಾವುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಆಶಾ ಭೋಸ್ಲೇ ತಮ್ಮ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದನ್ನೇ ನೋಡುತ್ತಾ ಸಂಗೀತ ಪ್ರೇಮಿಗಳು ಭಾವುಕರಾಗಿದ್ದಾರೆ.

Once legendary singer Asha Bhosle was revealed her last wish in an interview

ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಅಮೃತಾ ರಾವ್ ಹಾಗೂ ಆರ್‌ಜೆ ಅನ್ಮೋಲ್ ನಡೆಸಿದ್ದ ಪಾಡ್‌ಕ್ಯಾಸ್ಟ್‌ನ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ತನ್ನ ಜೀವನದ ಅಂತ್ಯ ಹೇಗಿರಬೇಕು ಎಂದು ಆಶಾ ಭೋಸ್ಲೆ ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಅವರು ಆ ವಿಡಿಯೋದಲ್ಲಿ ಹೇಳಿದಂತೆಯೇ ನಡೆದಿದ್ದನ್ನು ಕಂಡು ಮತ್ತಷ್ಟು ಭಾವುಕರಾಗಿದ್ದಾರೆ.

ಈ ಪಾಡ್‌ಕಾಸ್ಟ್‌ನಲ್ಲಿ ಆಶಾ ಭೋಸ್ಲೆ ಲವಲವಿಕೆಯಿಂದ ಮಾತಾಡಿದ್ದರು. ತಮ್ಮ ಜೀವನದ ಪ್ರತಿ ಹಂತದಲ್ಲೂ ಗಾಯನ ಅನ್ನೋದು ಎಷ್ಟು ಆವರಿಸಿಕೊಂಡಿದೆ ಅನ್ನೋದನ್ನು ಹೇಳಿದ್ದರು. ಹಾಗೇ 3 ವರ್ಷವಿರುವಾಗಲೇ ತಂದೆಯಿಂದ ಕ್ಲಾಸಿಕಲ್ ಸಂಗೀತ ಕಲಿತಿದ್ದನ್ನು ನೆನಪಿಸಿಕೊಂಡಿದ್ದರು. ಅಲ್ಲದೇ ಸಿನಿಮಾ ಕ್ಷೇತ್ರದಲ್ಲಿ 80-82 ವರ್ಷಗಳ ಕಾಲ ತಮ್ಮ ವೃತ್ತಿ ಬದುಕು ಹೇಗೆ ರೂಪುಗೊಂಡಿತ್ತು ಅನ್ನೋದನ್ನು ಹೇಳಿಕೊಂಡಿದ್ದರು. ಇದೇ ತುಣುಕಿನಲ್ಲಿ ತಮ್ಮ ಕೊನೆಯ ಆಸೆ ಬಗ್ಗೆ ಏನು ಹೇಳಿದ್ದರೆಂದು ನೋಡುವುದಾರೇ,

Also Read
Asha Bhosle: ಕೇವಲ ಗಾಯಕಿ ಅಷ್ಟೇ ಅಲ್ಲ.. 5 ದೇಶಗಳಲ್ಲಿದೆ ಆಶಾಸ್ ರೆಸ್ಟೋರೆಂಟ್; ಏನೇನು ಸಿಗುತ್ತೆ ಗೊತ್ತೇ?
Asha Bhosle: ಕೇವಲ ಗಾಯಕಿ ಅಷ್ಟೇ ಅಲ್ಲ.. 5 ದೇಶಗಳಲ್ಲಿದೆ ಆಶಾಸ್ ರೆಸ್ಟೋರೆಂಟ್; ಏನೇನು ಸಿಗುತ್ತೆ ಗೊತ್ತೇ?

"ನನ್ನ ಆಸೆ ಏನು ಅಂದರೆ, ಹಾಡುತ್ತಾ ಹಾಡುತ್ತಲೇ ನಾನು ಹೊರಟು ಹೋಗಿಬಿಡಬೇಕು. ಇದೇ ನನ್ನ ಆಸೆ. ನನಗೆ ಈಗ ಕಲಿಯುವುದಕ್ಕೆ ಏನೂ ಇಲ್ಲ. ಗಾಯನವೇ ನನ್ನ ಜೀವನ. ನಾನು ಚಿಕ್ಕವಳಿದ್ದಾಗಿನಿಂದ ಹಾಡಿದ್ದೇನೆ. ಮೂರು ವರ್ಷ ಅಪ್ಪನ ಹತ್ತಿರ ಕ್ಲಾಸಿಕಲ್ ಕಲಿತೆ. ಹಾಗೇ ಪೂರ್ತಿ ಬದುಕು ನಡೆದು ಹೋಯ್ತು. ಈಗ ಸಿನಿಮಾದಲ್ಲೂ 80 ರಿಂದ 82 ವರ್ಷ ಆಯ್ತು. ಈಗ ಹಾಡುತ್ತಾ ಹಾಡುತ್ತಲೇ ನಾನು ಹೊರಟು ಹೋಗಬೇಕು. ಹಾಡುತ್ತಾ ಹಾಡುತ್ತಲೇ ಹೊರಟು ಹೋಗುವುದರಲ್ಲೇ ನನಗೆ ಹೆಚ್ಚು ಖುಷಿ ಸಿಗುತ್ತೆ." ಎಂದು ಆ ಸಂದರ್ಶನದಲ್ಲಿ ಹೇಳಿದ್ದರು.

Once legendary singer Asha Bhosle was revealed her last wish in an interview

ಆಶಾ ಭೋಸ್ಲೇ ಅಂದುಕೊಂಡಂತೆ ಆಗಿದೆ. ಕುಟುಂಬದೊಂದಿಗೆ ಚೆನ್ನಾಗಿ ಇದ್ದರು. ಇದ್ದಕ್ಕಿದ್ದ ಹಾಗೆ ಹೃದಯ ಸ್ತಂಭನ ಆಗಿ ಕೊನೆಯುಸಿರೆಳೆದಿದ್ದಾರೆ. ಈ ಸಮಯದಲ್ಲಿ ಅವರ ಅಭಿಮಾನಿಗಳು ಇದೇ ಸಂದರ್ಶನವನ್ನು ನೋಡಿ ಭಾವುಕರಾಗುತ್ತಿದ್ದಾರೆ. ಅವರು ಅಂದುಕೊಂಡಂತೆ ಆಗಿಹೋಯ್ತಲ್ಲ ಅಂತ ಕಣ್ಣೀರು ಹಾಕುತ್ತಿದ್ದಾರೆ.

ಆಶಾ ಭೋಸ್ಲೆ ಹಿಂದಿ, ಮರಾಠಿ, ಬಂಗಾಳಿ, ತಮಿಳು, ಮಲಯಾಳಂ, ಕನ್ನಡ, ಇಂಗ್ಲಿಷ್, ರಷ್ಯನ್ ಸಹಿತ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಸುಮಾರು 8 ದಶಕಗಳ ಕಾಲ, ಶಾಸ್ತ್ರೀಯ, ಗಜಲ್, ಕ್ಯಾಬರೆ ಹಾಗೂ ಪಾಪ್ ಸೇರಿದಂತೆ ವಿವಿಧ ಸಂಗೀತ ಶೈಲಿಯಲ್ಲಿ ಹಾಡಿದ್ದಾರೆ. ಬದಲಾಗುತ್ತಿರುವ ಸಂಗೀತ ಕ್ಷೇತ್ರಕ್ಕೆ ಒಗ್ಗಿಕೊಂಡಿದ್ದರು. 2011ರಲ್ಲಿ, ಆಶಾ ಭೋಸ್ಲೆ 11,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಬರೆದಿದ್ದರು. ಕೆಲವು ಮೂಲಗಳ ಪ್ರಕಾರ, ಅವರು ಹಾಡಿದ ಹಾಡು 12,000 ದಾಟಿರಬಹುದು ಎಂದು ಅಂದಾಜಿಸಿದ್ದಾರೆ.

ಆಶಾ ಭೋಸ್ಲೆ ಅವರ ಸಾಧನೆಗೆ 2000ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹಾಗೇ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಆಶಾ ಭೋಸ್ಲೆ ಸಂದರ್ಶನಗಳನ್ನು ಅವರ ಅಭಿಮಾನಿಗಳು ನೋಡಿ ಸ್ಮರಿಸುತ್ತಿದ್ದಾರೆ. ಆಶಾ ಭೋಸ್ಲೆ ಅವರ ಬದುಕಿನಲ್ಲಿ ಸಂಗೀತ ಎಷ್ಟು ನಿಕಟ ಸಂಬಂಧ ಹೊಂದಿತ್ತು ಅನ್ನೋದು ಈ ಸಂದರ್ಶನ ಹೇಳುತ್ತೆ.

More from Filmibeat

English summary
Once legendary singer Asha Bhosle was revealed her last wish in an interview.
Read more about: asha bhosle singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X