ಎಷ್ಟೋ ಸಿನಿಮಾಗಳಿಂದ ಶಿಲ್ಪಾ ಶೆಟ್ಟಿಯನ್ನು ತೆಗೆದು ಹಾಕಿದ್ರು; ಛಲ ಬಿಡದೆ ನಟಿಯ ಆಸ್ತಿ ಮೌಲ್ಯ ಎಷ್ಟು ಗೊತ್ತೇ?
ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಕರಾವಳಿಯವರಾದರೂ, ಹಲವು ವರ್ಷಗಳಿಂದ ಮುಂಬೈನಲ್ಲಿಯೇ ನೆಲೆಸಿದ್ದಾರೆ. ಕೇವಲ 17 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿಯ ವೃತ್ತಿ ಬದುಕು ಜೋಷ್‌ನಿಂದಲೇ ಆರಂಭ ಆಗಿತ್ತು. ಮೊದಲ ಸಿನಿಮದಲ್ಲಿಯೇ ಯಶಸ್ಸು ಸಿಕ್ಕಿತ್ತು. ಶಿಲ್ಪಾ ಶೆಟ್ಟಿಯನ್ನು ಪ್ರೇಕ್ಷಕರು ಇಷ್ಟ ಪಡುವುದಕ್ಕೆ ಶುರು ಮಾಡಿದ್ದರು. ಆದರೂ, ಬಾಲಿವುಡ್ ನಿರ್ಮಾಪಕರು ಕಾರಣವೇ ಕೊಡದೆ ಸಿನಿಮಾಗಳಿಂದ ಅವರನ್ನು ತೆಗೆದು ಹಾಕುತ್ತಿದ್ದರು.
90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ ಸ್ಟಾರ್ ನಟಿಯಾಗಿ ಬೆಳೆದಿದ್ದೇ ರೋಚಕ. ಸಿನಿಮಾದ ಗಂಧ ಗಾಳಿಯೇ ಗೊತ್ತಿರದ ಮಂಗಳೂರಿನ ಈ ಹುಡುಗಿ ಅತೀ ಚಿಕ್ಕ ವಯಸ್ಸಿನಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ತನ್ನ ಅಸ್ತಿತ್ವವನ್ನು ಕಂಡಕೊಂಡಿದ್ದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಸಾಕಷ್ಟು ನಿರ್ಮಾಪಕರು ತಮ್ಮನ್ನು ಸಿನಿಮಾಗಳಿಗೆ ತೆಗೆದು ಹಾಕಿದ್ದರು ಎಂದು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಂದು ನಿರ್ಮಾಪಕರು ಶಿಲ್ಪಾ ಶೆಟ್ಟಿಯನ್ನು ರಿಜೆಕ್ಟ್ ಮಾಡಿದ್ದರು. ಆದರೆ, ಇಂದು ಅದೇ ಬಾಲಿವುಡ್‌ನಲ್ಲಿ ಸ್ಡಾರ್ ನಟಿಯಾಗಿ ಮೆರೆಯುತ್ತಾರೆ. ಈ ನಟಿ ಮದುವೆ ಆಗಿರುವ ಉದ್ಯಮಿ ರಾಜ್ ಕುಂದ್ರ ಆಸ್ತಿಯ ಮೌಲ್ಯ 2800 ಕೋಟಿ ರೂಪಾಯಿ. ಆದರೂ, ಏನೂ ಇಲ್ಲದೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಶಿಲ್ಲಾ ಶೆಟ್ಟಿಯ ವೈಯಕ್ತಿಕ ಆಸ್ತಿಯೇನು ಕಮ್ಮಿಯಿಲ್ಲ. ಜೀರೊದಿಂದ ಶುರು ಮಾಡಿದ್ದ ನಟಿ ಇಂದು ನೂರಾರು ಕೋಟಿಗೆ ಬಾಳುತ್ತಾರೆ.
ಶಿಲ್ಪಾ ಶೆಟ್ಟಿ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಮುಂಬೈನಲ್ಲಿ ನೆಲೆಸಿದ್ದ ತಂದೆಗೆ ಸಹಾಯ ಮಾಡುತ್ತಿದ್ದರು. ಆದರೆ, ಅವರಿಗೆ ತಾನು ಇನ್ನೂ ಬೆಳೆಯಬೇಕು. ಇದು ನನ್ನ ಲೈಫ್ ಅಲ್ಲ ಎನಿಸುವುದಕ್ಕೆ ಶುರುವಾಗಿತ್ತು. ಹೀಗಾಗಿ ತನ್ನ ಲೈಫ್‌ನಲ್ಲಿ ಬೇರೆ ಏನೋ ಮಾಡಬೇಕು ಅಂತ ಹುಡುಕಾಡುತ್ತಲೇ ಇದ್ದರು. ಈ ವೇಳೆ ಸುಮ್ಮನೆ ಟೈಮ್ ಪಾಸ್‌ಗೆಂದು ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸಿದ್ದರು. ಅದು ಅವರ ಬದುಕಿನ ಟರ್ನಿಂಗ್ ಪಾಯಿಂಟ್ ಆಯ್ತು.
ಅದೇ ಫ್ಯಾಷನ್ ಶೋ ಬಂದಿದ್ದ ಫೋಟೋಗ್ರಾಫರ್ ಒಬ್ಬರು ಶಿಲ್ಪಾ ಶೆಟ್ಟಿಯ ಫೋಟೋ ತೆಗೆಯುವುದಾಗಿ ಹೇಳಿದ್ದರು. ಆ ಫೋಟೋಗಳು ಶಿಲ್ಪ ಶೆಟ್ಟಿಯ ಬದುಕನ್ನೇ ಬದಲಿಸಿತ್ತು. ಸಿನಿಮಾಗಳಲ್ಲಿ ಆಫರ್ ಬರುವುದಕ್ಕೆ ಶುರುವಾಗಿತ್ತು. ಹಾಗೇ ಬಂದಿದ್ದೇ ಶಾರುಖ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಬಾಜೀಘರ್'. ಈ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಸೆಕೆಂಡ್ ಹೀರೋಯಿನ್ ಆಗಿ ಆಯ್ಕೆ ಆಗಿದ್ದರು. ಇಲ್ಲಿಂದ ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿಯ ಹೆಸರು ಓಡಾಡುವುದಕ್ಕೆ ಶುರುವಾಗಿತ್ತು. ಆದರೆ, ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ನಿರ್ಮಾಪಕರು ಶಿಲ್ಪಾ ಶೆಟ್ಟಿಯನ್ನು ತಮ್ಮ ಸಿನಿಮಾಗಳಿಂದ ಕೈ ಬಿಡುತ್ತಿದ್ದರು. ಇದನ್ನು ಹಿಂದೊಮ್ಮೆ ನೀಡಿದ ಸಂದರ್ಶನದಲ್ಲಿ ಖುದ್ದಾಗಿ ಶಿಲ್ಪಾ ಶೆಟ್ಟಿಯೇ ಹೇಳಿಕೊಂಡಿದ್ದಾರೆ.

ಈ ಹಿಂದೆ ಹ್ಯೂಮಸ್ ಆಫ್ ಬಾಂಬೆಗೆ ಶಿಲ್ಪಾ ಶೆಟ್ಟಿ ಸಂದರ್ಶನ ನೀಡಿದ್ದರು. ಅದರಲ್ಲಿ "ನಾನು ಸಿಕ್ಕಾಪಟ್ಟೆ ಕಷ್ಟಪಡುತ್ತಿದ್ದೆ. ಆದರೂ ನನಗೆ ನಾನು ತುಂಬಾನೇ ಹಿಂದೆ ಬಿದ್ದಿದ್ದೇನೆ ಎಂದು ಅನಿಸುತ್ತಿತ್ತು. ಒಂದು ಸಂದರ್ಭವನ್ನು ಸಂಭ್ರಮಿಸಿದರೆ, ಇನ್ನೊಂದರಲ್ಲಿ ನನ್ನನ್ನು ತಿರಸ್ಕರಿಸಲಾಗುತ್ತಿತ್ತು. ಕೆಲವು ನಿರ್ಮಾಪಕರು ಇದ್ದರು, ಕಾರಣವೇ ಕೊಡದೇ ನನ್ನನ್ನು ಸಿನಿಮಾಗಳಿಂದ ತೆಗೆದು ಹಾಕುತ್ತಿದ್ದರು. ಆ ವೇಳೆ ಎಲ್ಲವೂ ನನ್ನ ಪರವಾಗಿ ನಡೆಯುತ್ತಿರಲಿಲ್ಲ. ಆದರೆ, ನಾನು ಪ್ರಯತ್ನ ಪಡುವುದನ್ನು ನಿಲ್ಲಿಸಲಿಲ್ಲ" ಎಂದು ಶಿಲ್ಪಾ ಶೆಟ್ಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಶಿಲ್ಪಾ ಶೆಟ್ಟಿ ಈಗ ಬಾಲಿವುಡ್‌ನ ಶ್ರೀಮಂತ ನಟಿಯರಲ್ಲಿ ಒಬ್ಬರು. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಶಿಲ್ಪಾ ಶೆಟ್ಟಿ ಆಸ್ತಿ ಮೌಲ್ಯ 134 ಕೋಟಿ ರೂಪಾಯಿ ದಾಟಿದೆ. ಸಿನಿಮಾ ಅಷ್ಟೇ ಅಲ್ಲ, ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಎಸ್‌ವಿಎಸ್ ಸ್ಟುಡಿಯೋದಲ್ಲಿ ಶಿಲ್ಪಾ ಶೆಟ್ಟಿ ಪಾಲುದಾರರು, ಬಾಸ್ಟಿಯನ್ ಎನ್ನುವ ಜನಪ್ರಿಯ ಹೋಟೆಲ್‌ಗೆ ನಡೆಸುತ್ತಿರುವುದು ಕೂಡ ಇವರೇ. ಬೆಂಗಳೂರಿನಲ್ಲೂ ಬ್ರ್ಯಾಂಚ್ ಇದೆ. ಡ್ರೀಮ್ ಎಸ್‌ಎಸ್ ಎಂಬ ಫ್ಯಾಷನ್ ಬ್ರ್ಯಾಂಡ್ ಇದೆ. ಅಲ್ಲದೆ ಫಿಟ್ನೆಸ್ ಆಪ್ ಅನ್ನೂ ನಡೆಸುತ್ತಿದ್ದಾರೆ.


Click it and Unblock the Notifications











