ಒಂದು ಕ್ಯಾಬ್ ಆಪ್, 5 ಹುಡುಗಿಯರ ಜೊತೆ ಬಾಯ್‌ಫ್ರೆಂಡ್ ಚಕ್ಕಂದ - ಕಣ್ಣೀರಾದ ಅನಿಲ್ ಕಪೂರ್ ತಮ್ಮನ ಮಗಳು

ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ಹಿಂದೆ ಎಲ್ಲ ಹೃದಯದಲ್ಲಿ ಬೆಳೆದ ಪ್ರೀತಿ ಬಹುತೇಕ ರಿಯಲ್ ಆಗಿರುತ್ತಿತ್ತು. ಪ್ರೀತಿ ಸದಾ ಜಿನುಗುತ್ತಿರುತ್ತಿತ್ತು. ಆದರೆ ಈಗ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.

ಬದಲಾದ ಈ ಕಾಲದಲ್ಲಿ ಪ್ರೀತಿಯನ್ನು ಕೇವಲ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮತ್ತು ವಾಟ್ಸಾಪ್ ಸ್ಟೇಟಸ್ ಮೂಲಕ ಅಳೆಯಲಾಗುತ್ತಿದೆ. ನಂಬಿಕೆಗಿಂತ ಪರಿಪೂರ್ಣ ಸಂಬಂಧದ ಹೆಸರಿನಲ್ಲಿ ಡ್ರಾಮಾ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಲವ್ ಹೆಸರಿನಲ್ಲಿ ಸೆ* ಮತ್ತು ದೋಖಾ ಮಾಡುವವರ ಸಂತತಿ ಕೂಡ ದಿನದಿಂದ ದಿನಕ್ಕೆ ಕೂಡ ಹೆಚ್ಚಾಗುತ್ತಿದೆ. ಶನಾಯ ಕಪೂರ್ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ.

One Cab App 5 Other Women Shanaya Kapoor Unmasked Serial Cheater Ex and Guilty Earrings Sealed It

ಹೌದು,ಶನಯಾ ಕಪೂರ್.. ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಮುದ್ದಿನ ಮಗಳು. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಮೊದಲಿಂದ ತುಸು ಹೆಚ್ಚೇ ಲೈಮ್ ಲೈಟ್‌ನಲ್ಲಿರುವ ಶನಯಾ ನೋಡಲು ರೂಪವತಿ ಕೂಡ ಹೌದು.

ಈಗಾಗಲೇ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶಿಸಿರುವ ಶನಯಾ ''ಆಂಖೋ ಕಿ ಗುಸ್ತಾಕೀಯಾ''.. ''ಬೇದಢಕ್''.. ಚಿತ್ರಗಳ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಸದ್ಯ ಶನಯಾ ಅಭಿನಯದ ''ತು ಯಾ ಮೇ'' ಚಿತ್ರ ಬಿಡುಗಡೆಯಾಗಿದೆ. ತಮ್ಮ ಇದೇ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶನಯಾ ತಮ್ಮ ಬದುಕಿನ ಕಥೆಯೊಂದನ್ನು ಹೇಳಿದ್ದಾರೆ. ಪ್ರೀತಿಯಲ್ಲಿ ತಾವು ಮೋಸ ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಿಕ್ಕಿದ್ದಾರೆ.

ಈ ಕುರಿತು ರೌನಕ್ ರಜನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶನಯಾ ಬಾಯ್‌ಫ್ರೆಂಡ್ ಜೊತೆ ನಾನು ವಿದೇಶಕ್ಕೆ ತೆರಳಿದ್ದೆ, ಆ ಸಮಯದಲ್ಲಿ ಸ್ವರ್ಗ ನನ್ನ ಪಾಲಿಗೆ ಮೂರೇ ಗೇಣು ಆಗಿತ್ತು ಎಂದು ಹೇಳಿದ್ದಾರೆ. ನಾನು ಎಷ್ಟೊಂದು ಅದೃಷ್ಟವಂತೆ.. ಎಂಥಾ ಅದ್ಭುತ ಜೀವನ.. ಎಷ್ಟೊಂದು ಒಳ್ಳೆಯ ಪ್ರಿಯಕರ.. ಸಾಕಿನ್ನೂ, ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಡ ಎಂದು ನಾನು ಅಂದುಕೊಂಡಿದ್ದೇ ಎಂದು ಹೇಳಿರುವ ಶನಯಾ ಅದೊಂದು ದಿನ ನನ್ನ ಫೋನ್ ಬ್ಯಾಟರಿ ಖಾಲಿಯಾಗಿತ್ತು.ಅಲ್ಲಿಂದ ಎಲ್ಲವೂ ಬದಲಾಯ್ತು ಎಂದು ಹೇಳಿದ್ದಾರೆ.

ಫೋನ್ ಬ್ಯಾಟರಿ ಖಾಲಿಯಾದ ಕಾರಣ ನಾನು ಅಂದು ರಾತ್ರಿ ಡಿನ್ನರ್ ಗೆ ಹೋಗಲು ನನ್ನ ಪ್ರಿಯಕರನ ಫೋನ್ ಪಡೆದು, ಅವನ ಫೋನ್ ಮೂಲಕ ಕ್ಯಾಬ್ ಬುಕ್ ಮಾಡಲು ಮುಂದಾದೆ ಎಂದು ಹೇಳಿರುವ ಶನಯಾ ಆ ಕ್ಷಣದಲ್ಲಿ ಒಂದು ನೋಟಿಫಿಕೇಶನ್ ಬಂತು, ನಾನು ಕುತೂಹಲದಿಂದ ಓಪನ್ ಮಾಡಿದರೆ ಅಲ್ಲಿ ಒಬ್ಬರಲ್ಲ.. ಇಬ್ಬರಲ್ಲ.. ಬದಲಿಗೆ ಐದು ಜನರ ಜೊತೆ ನನ್ನ ಪ್ರಿಯಕರ ನಡೆಸಿದ್ದ ಸರಸದ ಮೆಸೇಜ್‌ಗಳು ಕಂಡವು ಎಂದು ಹೇಳಿದ್ದಾರೆ.

One Cab App 5 Other Women Shanaya Kapoor Unmasked Serial Cheater Ex and Guilty Earrings Sealed It

ನಂಬಿಕೆಯೇ ಪ್ರೀತಿಯ ಅಡಿಪಾಯ ಎಂದು ನಂಬಿದ್ದ ನನಗೆ ಆ ಕ್ಷಣ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು ಎಂದು ಹೇಳಿರುವ ಶನಯಾ ಆತ ನನ್ನೊಬ್ಬಳನ್ನೇ ಪ್ರೀತಿ ಮಾಡುತ್ತಿದ್ದಾನೆ ಎಂದು ನಾನು ನಂಬಿದ್ದೆ, ಅವನು ಕೂಡ ನಂಬಿಸಿದ್ದ ಆದರೆ ವಾಸ್ತವದಲ್ಲಿ ನನ್ನ ಬೆನ್ನ ಹಿಂದೆ ನಾನು ಇನ್ನೂ ಸಿಂಗಲ್ ಎಂದು ಸುಳ್ಳು ಹೇಳಿ ಆತ ನನಗೆ ಮೋಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಆ ವಿದೇಶಿ ಮಣ್ಣಿನಲ್ಲಿ ನನ್ನ ಬಾಯ್‌ಫ್ರೆಂಡ್‌ನ ಮುಖವಾಡ ನನ್ನೆದುರು ಕಳಚಿ ಬಿದ್ದ ನಂತರ ನನಗೆ ದಿಕ್ಕೇ ತೋಚದಂತಾಯ್ತು ಎಂದು ಹೇಳಿರುವ ಶನಯಾ,ನಾನು ತಕ್ಷಣ ನನ್ನ ಸ್ನೇಹಿತೆ ಅನನ್ಯಾ ಪಾಂಡೆಗೆ ಈ ವಿಷಯ ಹೇಳಿದೆ, ಅವಳು ಕೂಡಲೇ ಅಲ್ಲಿಂದ ಓಡಿ ಬಾ ಎಂದು ಹೇಳಿದಳು ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.

ಆದರೂ ನಾನು ಪರಿಸ್ಥಿತಿಯ ಕೈಗೊಂಬೆಯಾಗಿದ್ದೆ, ಪ್ರವಾಸ ಮುಗಿಯಲು ಇನ್ನೂ ಮೂರು ದಿನ ಬಾಕಿ ಇತ್ತು. ಹೀಗಾಗಿ ನನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡುವುದು ನನಗೆ ಅನಿವಾರ್ಯವಾಗಿತ್ತು ಎಂದು ಹೇಳಿರುವ ಶನಯಾ ಆ ಮೂರು ದಿನಗಳು ನನಗೆ ಒಂದು ಯುಗದಂತೆ ಭಾಸವಾಗಿದ್ದವು ಎಂದು ಅವರು ಹೇಳಿದ್ದಾರೆ.

ಮುಂದುವರೆದು ಬದಲಾದ ನನ್ನ ನಡುವಳಿಕೆಯಿಂದ ಆ ನನ್ನ ಬಾಯ್‌ಫ್ರೆಂಡ್‌ಗೆ ನನ್ನ ಮೇಲೆ ಅನುಮಾನ ಬಂತು, ತನ್ನ ಸತ್ಯ ಗೊತ್ತಾಗಿದೆಯಾ ಎನ್ನುವ ಚಿಂತೆ ಅವನಿಗೆ ಶುರುವಾಗಿತ್ತು, ಹೀಗಾಗಿ ನನ್ನನ್ನು ಸಮಾಧಾನ ಪಡಿಸಲು ದುಬಾರಿ ಬೆಲೆಯ ಕಿವಿಯೋಲೆಯನ್ನು ತಂದು ಉಡುಗೊರೆಯನ್ನಾಗಿ ಆತ ನೀಡಿದ ಎಂದು ಹೇಳಿರುವ ಶನಯಾ ಆ ಓಲೆಗಳನ್ನು ನೋಡಿದರೆ ನನಗೆ ಆತ ಮಾಡಿದ ದ್ರೋಹ ಕಣ್ಮುಂದೆ ಬರುತ್ತೆ ಎಂದು ಹೇಳಿದ್ದಾರೆ. ಆ ಮೂರು ದಿನ ಆತನನ್ನು ಸಹಿಸಿಕೊಂಡಿದ್ದಕ್ಕೆ ಆ ಓಲೆಗಳು ನನಗೆ ಸಿಕ್ಕ ಸಂಭಾವನೆ ಎಂದಿದ್ದಾರೆ.

ಆ ನಂತರ ಭಾರತಕ್ಕೆ ಮರಳಿದ ನಂತರ ನಾನು ಕೇವಲ ಮೆಸೇಜ್ ಮಾಡಿದ್ದೇ ಅಷ್ಟೆ, ದೈಹಿಕವಾಗಿ ನಮ್ಮ ನಡುವೆ ಯಾವ ಸಂಪರ್ಕವೂ ಇರಲಿಲ್ಲ ಎಂದು ಆತ ಸಮಜಾಯಿಷಿ ನಿಡುವ ಪ್ರಯತ್ನ ಮಾಡಿದನಾದರೂ,ನಾನು ಅವನನ್ನು ಕ್ಷಮಿಸಲಿಲ್ಲ ಯಾಕೆಂದರೆ ನನ್ನ ಪಾಲಿಗೆ ಅದು ಭಾವನಾತ್ಮಕವಾದ ದ್ರೋಹ ಆಗಿತ್ತು ಎಂದು ಶನಯಾ ಹೇಳಿದ್ದಾರೆ.

More from Filmibeat

English summary
1 Boyfriend, 5 Women, and a Cab App. Actress Shanaya Kapoor reveals the wild way she caught her ex-boyfriend cheating and why he tried to "buy" her silence with jewelry. Read the full story here!
Read more about: anil kapoor love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X