»   » ಮುಂಬೈನಲ್ಲಿ ಯುವತಿಯರಿಗೆ ಸಲ್ಮಾನ್ ಹೇಳಿದ್ದೇನು?

ಮುಂಬೈನಲ್ಲಿ ಯುವತಿಯರಿಗೆ ಸಲ್ಮಾನ್ ಹೇಳಿದ್ದೇನು?

Posted By:
Subscribe to Filmibeat Kannada

ಅಂದಚೆಂದದ ತರುಣಿಯರು ಭಯ್ಯಾ ಎಂದರೆ ಯುವ ಸಮುದಾಯಕ್ಕೆ ಏನಾಗಬೇಡ? ಅದೇ ರೀತಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನಿಗೂ 'ಭಯ್ಯಾ ' ಅಂದಿದ್ದಕ್ಕೆ ಬೇಸರ ಆದಂತಿದೆ. ಅದನ್ನು ಸಲ್ಮಾನ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಭಯ್ಯಾ ಎನ್ನುವ ಪದವನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಆದರೂ ಎಲ್ಲರೂ ತನ್ನನ್ನು ಭಯ್ಯಾ ಎಂದು ಸಂಭೋದಿಸುವುದು ಸಲ್ಲು ಮಿಯಾಗೆ ಬಹುಷಃ ಇಷ್ಟವಿಲ್ಲವೇನೋ?

ಕೃಷ್ಣಮೃಗ ಬೇಟೆ ಕೇಸು ಒಂದೆಡೆಯಾದರೆ, ಫುಟ್ ಪಾತ್ ಮೇಲೆ ಕಾರು ಹತ್ತಿಸಿದ ಕೇಸು ಇನ್ನೊಂದೆಡೆ. ಈ ಕೇಸುಗಳ ತೀರ್ಪು ಏನು ಬರುತ್ತೋ ಎಂದು ಚಿಂತೆಯಲ್ಲಿದ್ದರೂ ಸಲ್ಮಾನ್ ಖಾನ್, ಚಿತ್ರರಂಗದವರು ಮತ್ತು ನಿರ್ಮಾಪಕರ ಪಾಲಿಗೆ ಬಹಳ ಆತ್ಮೀಯರು.

ಪ್ರೀತಿಯಿಂದ ಕರೆದಲ್ಲಿಗೆ ಹೋಗುವ ಸಲ್ಮಾನ್, ಮೊನ್ನೆ ಅಂದರೆ ಶುಕ್ರವಾರ (ಜೂ 20) ತನ್ನದೇ ಚಿತ್ರದ ಹಾಡಿನ ವಿಡಿಯೋ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಸಲ್ಮಾನ್ 'ಕಿಕ್' ಟ್ರೇಲರ್ ಸೂಪರ್)

ಕಾರ್ಯಕ್ರಮದಲ್ಲಿ ಎಂದಿನಂತೆ ಲವಲವಿಕೆಯಿಂದ ಇದ್ದ ಸಲ್ಮಾನ್ ಯುವತಿಯೊಬ್ಬರು ಸಲ್ಲು ಭಯ್ಯಾ ಎಂದು ಕರೆದಿದ್ದಕ್ಕೆ ತುಂಟವಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

ಸಲ್ಮಾನ್ ಭಾಯ್

ಗೆಳೆಯರು, ನಿರ್ಮಾಪಕರು, ತಾಂತ್ರಿಕ ವರ್ಗದವರು, ಅಭಿಮಾನಿಗಳು ಮತ್ತು ನಿರ್ದೇಶಕರಿಂದ ಭಯ್ಯಾ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್ ಯುವ ಪತ್ರಕರ್ತೆಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಹೇಗೆ ಗೊತ್ತಾ?

ಜುಮ್ಮೆ ಕೆ ರಾತ್

ತನ್ನ ಮುಂದಿನ 'ಕಿಕ್' ಚಿತ್ರದ ಜುಮ್ಮೆ ಕೆ ರಾತ್ ಎನ್ನುವ ಹಾಡಿನ ವಿಡಿಯೋ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕರು ಸಲ್ಮಾನ್ ಅವರನ್ನು ಸಲ್ಲು..ಸಲ್ಲು.. ಜಾನೂ.. ಜಾನೂ ಎಂದು ಕೂಗುತ್ತಿದ್ದರು.

ಜಾನೂ ಅನ್ನಬೇಡಿ

ಕೂಡಲೇ ಯುವ ಸಮುದಾಯವನ್ನು ನಿವೇದಿಸಿಕೊಂಡ 47ರ ಹರೆಯದ ಬ್ರಹ್ಮಚಾರಿ ಸಲ್ಮಾನ್, ನೀವೆಲ್ಲಾ ನನ್ನನ್ನು ಜಾನೂ ಎನ್ನಬಾರದು, ಭಯ್ಯಾ ಎನ್ನಬೇಕು ಎಂದರು. ಆಗ ಅಲ್ಲೇ ಇದ್ದ ಪತ್ರಕರ್ತೆಯೊಬ್ಬಳು ಯಾಕೆ ನಿಮ್ಮನ್ನು ಭಯ್ಯಾ ಎನ್ನಬೇಕು ಎಂದು ಸಲ್ಮಾನಿಗೆ ಮರುಪ್ರಶ್ನೆ ಹಾಕಿದರು.

ಯುವಕರು ಮಾತ್ರ ಭಯ್ಯಾ ಅನ್ನಬೇಕು

ಯುವಕರು ಮಾತ್ರ ನನ್ನನ್ನು ಭಯ್ಯಾ ಎಂದು ಸಂಭೋದಿಸಬೇಕು, ಯುವತಿಯರಲ್ಲ. ನಾನು ಭಾಯ್ 'only for boys, not for girls' ಅನ್ನಬೇಕೇ! ನನಗೆ ಇಬ್ಬರು ಸಹೋದರಿಯರು, ಮತ್ತಿಬ್ಬರು ಪ್ರೀತಿಯ ಸಹೋದರಿಯರಿಗೆ ರಾಖಿ ಕಟ್ಟುತ್ತೇನೆ. ನಾನು ಅವರಿಗೆ ಮಾತ್ರ ಭಯ್ಯಾ, ಎಲ್ಲರಿಗೂ ಅಲ್ಲ ಎಂದು ಕೋಪ ಮಿಶ್ರಿತ ಧ್ವನಿಯಲ್ಲೇ ಹೇಳಿದರು. ಆಗ ಅಲ್ಲಿ ನೆರೆದಿದ್ದ ಯುವತಿಯರು ಯಾವ ರೀತಿ ನಾಚಿ ಪ್ರತಿಕ್ರಿಯಿಸಿದರು ಎನ್ನುವ ಬಗ್ಗೆ ಸದ್ಯ ಮಾಹಿತಿಯಿಲ್ಲ.

ಸಲ್ಮಾನ್ ಮುಂದಿನ ಕಿಕ್

ಸಾಜಿದ್ ನಾಡಿಯಾವಾಲ ನಿರ್ದೇಶನದ, ಸಲ್ಮಾನ್ ಪ್ರಮುಖ ಭೂಮಿಕೆಯಲ್ಲಿರುವ 'ಕಿಕ್' ಚಿತ್ರ ರಂಜಾನ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಶ್ರೀಲಂಕಾದ ಜಾಕ್ಲಿನ್ ಫರ್ನಾಂಡಿಸ್ ಚಿತ್ರದ ನಾಯಕಿ.

English summary
Bollywood actor Salman Khan said, only Boys should call me Bhai not Girls.
Please Wait while comments are loading...