ದಶಕದ ಬಳಿಕ ಪಾಕ್ ಸಿನಿಮಾ ಭಾರತದಲ್ಲಿ ರಿಲೀಸ್‌ಗೆ ಗ್ರೀನ್ ಸಿಗ್ನಲ್; ರೊಚ್ಚಿಗೆದ್ದ ಎಂಎನ್‌ಎಸ್
ಭಾರತ ಹಾಗೂ ಪಾಕಿಸ್ತಾನದ ನಡುವಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇನಿಲ್ಲ. ಸಂಬಂಧ ಹದಗೆಟ್ಟ ದಿನದಿಂದಲೂ ಪಾಕಿಸ್ತಾನದ ಸಿನಿಮಾ ಭಾರತದಲ್ಲಿ ತೆರೆಕಂಡಿಲ್ಲ. ಈಗ ದಶಕದ ಬಳಿಕ ಪಾಕಿಸ್ತಾನದ ಹೈ ಬಜೆಟ್ ಸಿನಿಮಾ ಭಾರತದಲ್ಲಿ ರಿಲೀಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅದುವೇ 'ದಿ ಲೆಜೆಂಡ್ ಆಫ್ ಮೌಲಾ ಜಟ್ಟ್'.
ದಶಕದ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಿನಿಮಾ ರಿಲೀಸ್ ಆಗುತ್ತಿದೆ. ಫವಾದ್ ಖಾನ್ ಹಾಗೂ ಮಾಹಿರಾ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಅಕ್ಟೋಬರ್ 2ನೇ ತಾರೀಕಿನಂದು ಭಾರತದ ಕೆಲವು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

ಈ ಆಕ್ಷನ್ ಥ್ರಿಲ್ಲರ್ ಸಿನಿಮಾ 2022ರಲ್ಲಿಯೇ ಬಿಡುಗಡೆಯಾಗಿದ್ದು, ವಿಶ್ವದ ಹಲವು ಭಾಗಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಈಗಾಗಲೇ ವರದಿಯಾಗಿರುವ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಮೇಕರ್ಸ್ ಸೆಪ್ಟೆಂಬರ್ 18ರಂದು ಭಾರತದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಡೇಟ್ ಅನೌನ್ಸ್ ಮಾಡಿದ್ದರು. ಅಲ್ಲಿಂದ 'ದಿ ಲೆಜೆಂಡ್ ಆಫ್ ಮೌಲಾ ಜಟ್ಟ್' ಸಿನಿಮಾ ಬಗ್ಗೆ ಭಾರತದಲ್ಲಿ ಚರ್ಚೆಯಾಗುತ್ತಿದೆ.
'ದಿ ಲೆಜೆಂಡ್ ಆಫ್ ಮೌಲಾ ಜಟ್ಟ್' ಸಿನಿಮಾವನ್ನು ಬಿಲಾಲ್ ಲಶಾರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಲೋಕಲ್ ಹೀರೊ ಮೌಲಾ ಜಟ್ಟ್ ಹಾಗೂ ಇನ್ನೊಂದು ಗ್ಯಾಂಗ್ ನಡುವಿನ ದ್ವೇಷ, ಹೋರಾಟವೇ ಈ ಸಿನಿಮಾದ ತಿರುಳು. ಫವಾದ್ ಖಾನ್, ಮಾಹಿರಾ ಖಾನ್ ಜೊತೆ ಹಂಸಾ ಅಲಿ ಅಬ್ಬಾಸ್, ಹುಮೈಮಾ ಮಲ್ಲಿಕ್, ಸೈಮಾ ಬಲೋಚ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2016ರಲ್ಲಿ 'ಉರಿ'ಯಲ್ಲಿ ಭಯೋತ್ಪಾದಕರ ದಾಳಿಯ ಬಳಿಕ ಪಾಕಿಸ್ತಾನ ಕಲಾವಿದರನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ಅಲ್ಲಿಂದ ಭಾರತೀಯ ಸಿನಿಮಾಗಳಲ್ಲಿ ಪಾಕಿಸ್ತಾನದ ಕಲಾವಿದರು ಕೆಲಸ ಮಾಡಿರಲಿಲ್ಲ. ಸುಪ್ರೀಂ ಕೋರ್ಟ್ ನವೆಂಬರ್ 2023ರಂದು ಈ ಮನವಿಯನ್ನು ತಿರಸ್ಕರಿಸಿದ್ದರೂ, ಭಾರತದಲ್ಲಿ ಸಿನಿಮಾಗಳಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ಪಾಕಿಸ್ತಾನದ ಬ್ಲಾಕ್ ಬಸ್ಟರ್ ಸಿನಿಮಾ 'ದಿ ಲೆಜೆಂಡ್ ಆಫ್ ಮೌಲಾ ಜಟ್ಟ್' ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಎಂಎನ್‌ಎಸ್ (Maharashtra Navnirman Sena) ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಪಾಕಿಸ್ತಾನದ ಈ ಬ್ಲಾಕ್ ಬಸ್ಟರ್ ಸಿನಿಮಾ ಭಾರತದಲ್ಲಿ ರಿಲೀಸ್ ಆಗುತ್ತಾ? ಅನ್ನೋದು ಅಕ್ಟೋಬರ್ 2ಕ್ಕೆ ಗೊತ್ತಾಗಲಿದೆ.
2016ರಲ್ಲಿ ಭಾರತದ ಪಾಕಿಸ್ತಾನ ಕಲಾವಿದರು ಹಾಗೂ ಸಿನಿಮಾಗಳನ್ನು ಬ್ಯಾನ್ ಅಂದಿದ್ದರೂ, ಅಧಿಕೃತವಾಗಿ ಜಾರಿಗೆ ಬಂದಿರಲಿಲ್ಲ. ಆದರೆ, 2019ರಲ್ಲಿ ಪಾಕಿಸ್ತಾನ ಕೂಡ ಭಾರತದ ಸಿನಿಮಾಗಳನ್ನು ಬ್ಯಾನ್ ಮಾಡಿತ್ತು. ಹೀಗಾಗಿ 'ದಿ ಲೆಜೆಂಡ್ ಆಫ್ ಮೌಲಾ ಜಟ್ಟ್' ಸಿನಿಮಾ ಎರಡೂ ದೇಶಗಳ ಚಿತ್ರರಂಗದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











