'ಬಾಲಿವುಡ್‌ ಡೇ' ಸೆಲೆಬ್ರೆಟ್ ಮಾಡಿದ ಪಾಕಿಸ್ತಾನದ ವಿದ್ಯಾರ್ಥಿಗಳು: ಆನ್‌ಲೈನ್‌ನಲ್ಲಿ ಬಿಸಿಬಿಸಿ ಚರ್ಚೆ!

ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ತಮ್ಮದೇ ಶೈಲಿಯಲ್ಲಿ 'ಬಾಲಿವುಡ್ ಡೇ' ಸೆಲೆಬ್ರೆಟ್ ಮಾಡಿದೆ. ಈ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಮೊದಲು ಈ ವಿಡಿಯೋವನ್ನು ಟಿಕ್‌ಟಾನ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಇನ್‌ಸ್ಟಾಗ್ರಾಂನಲ್ಲಿ LUMS Photographic Society ಅನ್ನೋ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಶಾರುಖ್ ಖಾನ್ 'ದೇವದಾಸ್' ಸಿನಿಮಾದಿಂದ ಹಿಡಿದು ಪರೇಶ್‌ ರಾವಲ್ ನಟಿಸಿದ 'ಹೇರಾ ಪೇರಿ' ಸಿನಿಮಾ ಬಾಬುರಾಮ್ ಪಾತ್ರದವರೆಗೂ ಬಾಲಿವುಡ್ ಕೆಲವು ಪಾತ್ರಗಳ ಡೈಲಾಗ್‌ ಅನ್ನು ಮಿಮಿಕ್ರಿ ಮಾಡಲಾಗಿದೆ.

ಇದು ಪಾಕಿಸ್ತಾನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಡಿಯೋ ಆಗಿದೆ. ಇದರಲ್ಲಿ ಒಬ್ಬ ಯುವತಿ ಬಾಲಿವುಡ್‌ನ 'ಮೇ ಹೂ ನಾ' ಸಿನಿಮಾದಲ್ಲಿ ಸುಶ್ಮಿತಾ ಸೇನ್ ಧರಿಸಿದಂತೆ ಸೀರೆಯುಟ್ಟು ಕಂಡ್ರೆ, ಇನ್ನೊಬ್ಬ ವಿದ್ಯಾರ್ಥಿ ಕ್ಯಾಪ್ ಕೊಟ್ಟು ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸಿನಿಮಾ ಡೈಲಾಗ್‌ ಅನ್ನು ಮಿಮಿಕ್ರಿ ಮಾಡಿದ್ದಾರೆ. ಹಾಗೆಯೇ 'ಮೊಹಬ್ಬತ್ತೇನ್' ಸಿನಿಮಾದ ರಾಜ್ ಮಲ್ಹೋತ್ರ ಹಾಗೂ ಅಜಯ್ ದೇವಗನ್ ಅಭಿನಯದ 'ಸಿಂಗಂ' ಸಿನಿಮಾದ ಬಾಜಿರಾವ್ ಸಿಂಗಂ ಪಾತ್ರವನ್ನೂ ತೋರಿಸಲಾಗಿದೆ.ಇದೇ ವಿಡಿಯೋ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ.

Pakistan Lahore University Students Celebrating Bollywood Day Online Goes Debate

ಈ ವಿಡಿಯೋದಲ್ಲಿ ಪಾಕಿಸ್ತಾನದ ಯುವತಿಯೊಬ್ಬರು ಬಾಲಿವುಡ್ 'ಸ್ಟುಡೆಂಟ್ ಆಫ್ ದಿ ಇಯರ್' ಸಿನಿಮಾದ ಶಾನಯ ಸಿಂಘಾನಿಯ (ಆಲಿಯಾ ಭಟ್) ಅವತಾರವೆತ್ತಿದ್ದಾರೆ. ಹಾಗೇ " ಕೈಯಲ್ಲಿ ಪೊಂ ಪೊಂ ಹಿಡಿದುಕೊಂಡು ಹುಡುಗರಿಗಾಗಿ ಕೂಗುವುದನ್ನು ನನ್ನ ಸ್ಟೈಲ್ ಅಲ್ಲ" ಎಂದು ಡೈಲಾಗ್ ಬಿಟ್ಟಿದ್ದಾರೆ. ಅದೇ ಮತ್ತೊಬ್ಬ ಯುವತಿ 2012ರಲ್ಲಿ ತೆರೆಕಂಡ 'ಬರ್ಫಿ' ಸಿನಿಮಾದ ನಟಿ ಪ್ರಿಯಾಂಕಾ ಚೋಪ್ರಾರಂತೆ ಡ್ರೆಸ್ ಮಾಡಿಕೊಂಡು ಮಿಂಚಿದ್ದಾರೆ.

ಈ ವಿಡಿಯೋ ಐದು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಅಲ್ಲಿಂದ ಈ ವಿಡಿಯೋ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಕಂಡಿದೆ. ಈ ವಿಡಿಯೋ ಸಾಕಷ್ಟು ಲೈಕ್ಸ್ ಹಾಘೂ ಕಮೆಂಟ್ಸ್ ಕೂಡ ಸಿಕ್ಕಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು " ಪಾಕಿಸ್ತಾನದಲ್ಲಿ ಭಾರತದ ಸಂಸ್ಕೃತಿಯ ಸಂಭ್ರಮ" ಎಂದು ಕೆಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ವಿದ್ಯಾರ್ಥಿಗಳ ಪರ ನಿಂತಿದ್ದು, ಬಾಲಿವುಡ್‌ ಮೇಲಿನ ಪ್ರೀತಿಯನ್ನು ಪ್ರಶಂಸೆ ಮಾಡಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಲು ಆರಂಭ ಆದಲ್ಲಿಂದ ಟೀಕೆಗಳ ಸುರಿಮಳೆಯೇ ಕೇಳಿಬರುತ್ತಿದೆ. ಪಾಕಿಸ್ತಾನದಲ್ಲಿಯೇ ಈ ವಿದ್ಯಾರ್ಥಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ ಪಾಕಿಸ್ತಾನದ ಸಿನಿಮಾಗಳನ್ನು ನೋಡಿದೇ ಇರೋದಕ್ಕೆ ತರಾಟೆಗೆ ತೆಗೆದುಕೊಳ್ಳಲಾಗಿದೆ. " ಬಾಲಿವುಡ್ ಡೇ ಸೆಲೆಬ್ರೆಟ್ ಮಾಡುವುದು ಸಮಸ್ಯೆಯಲ್ಲ. ಆದರೆ, ಇದು ಸಮಸ್ಯೆಯ ಸಂಕೇತ. ನಮ್ಮ ಮನರಂಜನೆಗೆ ನಾವು ಯಾರು ಭಾರತದ ಕಡೆ ಮುಖ ಮಾಡಬೇಕು. ನಮ್ಮ ಚಿತ್ರರಂಗದಲ್ಲಿ ಏನು ಸಮಸ್ಯೆಯಾಗಿದೆ? ಯಾರಾದರೂ ಲಾಲಿವುಡ್‌ ಸಿನಿಮಾಗಳನ್ನು ನೋಡಿದ್ದೀರಾ?" ಎಂದು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

More from Filmibeat

English summary
Pakistan Lahore University Students Celebrating 'Bollywood Day' Online Goes Debate, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X