'ಧುರಂಧರ್' ಸವಾಲು ಎಸೆಯಲು ಹೊರಟ ಪಾಕ್ ಸಿನಿಮಾ; ಸೇಲ್ ಆಗಿದ್ದು ಬರೀ 22 ಟಿಕೆಟ್

ಭಾರತದ ಬಾಕ್ಸಾಫೀಸ್‌ನಲ್ಲಿ ಹಳೆ ದಾಖಲೆಗಳನ್ನೆಲ್ಲ ಉಡೀಸ್ ಮಾಡಿ ಹೊಸ ದಾಖಲೆಗಳನ್ನು ಬರೆದಿದ್ದು 'ಧುರಂಧರ್' ಹಾಗೂ 'ಧುರಂಧರ್ 2'. ಈ ಎರಡು ಪಾರ್ಟ್‌ಗಳು ಗಲ್ಲಾಪೆಟ್ಟಿಗೆಯಲ್ಲಿ ಗುಡುಗಿದ್ದು ನೋಡಿ ವಿದೇಶಿ ಸಿನಿಮಾಗಳೇ ತಂಡಾ ಹೊಡೆದಿದ್ದವು. ಇಂತಹ ದಾಖಲೆ ಬರೆದ ಸಿನಿಮಾಗೆ ಕೌಂಟರ್ ಕೊಡುವ ಸಾಹಸ ಪಾಕಿಸ್ತಾನದ ಸಿನಿಮಾವೊಂದು ಮಾಡಿತ್ತು. ಟ್ರೈಲರ್ ರಿಲೀಸ್ ಮಾಡಿ, ಇದು 'ಧುರಂಧರ್'ಗೆ ಪ್ರತಿಕ್ರಿಯೆ ಎಂದು ಸಿನಿಮಾ ತಂಡ ಹೇಳಿಕೊಂಡಿತ್ತು.

ಭೇಷ್ ಪಾಕಿಸ್ತಾನದ ಸಿನಿಮಾವೊಂದು ಹೊಸ ಸಾಹಸಕ್ಕೆ ಮುಂದಾಗಿದ್ದನ್ನು ಕಂಡು ಅಚ್ಚರಿಯಿಂದ ನೋಡಿದವರೇ ಹೆಚ್ಚು. ಇಷ್ಟು ಕಾನ್ಫಿಡೆನ್ಸ್ ಅಲ್ಲಿ 'ಧರಂಧರ್'ಗೆ ಟಕ್ಕರ್ ಕೊಡುವುದಕ್ಕೆ ಮುಂದೆ ಬಂದಿದೆ ಅಂದರೆ, ಏನೋ ಕ್ರಾಂತಿ ಆಗುತ್ತೆ ಅಂತಲೇ ಭಾವಿಸಿದ್ದರು. ಆದರೆ, ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಠಸ್ ಪಟಾಕಿ ಆಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದರಲ್ಲಿ ಹಿಂದೆ ಬಿದ್ದಿದೆ.

Pakistan movie Mera Lyari described as a response to the Dhurandhar kicked out of Theatres

'ಧುರಂಧರ್' ಪಾಕಿಸ್ತಾನದ ಕರಾಚಿಯ ಅತ್ಯಂತ ಹಳೆಯ ಪ್ರದೇಶ ಲಿಯಾರಿ ಹಾಗೂ ಅಲ್ಲಿನ ಚಟುವಟಿಕೆಗಳನ್ನು ಬಿಂಬಿಸಿತ್ತು. ಇದೇ 'ಧುರಂಧರ್' ಕಥೆಯ ಪ್ರಮುಖ ಭಾಗವಾಗಿತ್ತು. ಆದರೆ, ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪಾಕಿಸ್ತಾನದಿಂದ ಕೆಲವು ಪ್ರತಿಕ್ರಿಯೆಗಳು ಬಂದಿದ್ದವು. ಲಿಯಾರಿ ಪ್ರದೇಶ 'ಧುರಂಧರ್'ನಲ್ಲಿ ತೋರಿಸಿದಂತೆ ಇಲ್ಲವೇ ಇಲ್ಲ ಎಂದು ಹೇಳಿತ್ತು. ಅದೇ ವೇಳೆ ಪಾಕಿಸ್ತಾನದ ಫಿಲ್ಮ್ ಮೇಕರ್ಸ್ 'ಮೇರಾ ಲಿಯಾರಿ' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು 'ಧುರಂಧರ್'ಗೆ ಪಾಕಿಸ್ತಾನದ ಪ್ರತಿಕ್ರಿಯೆ ಎಂದು ಬಣ್ಣಿಸಲಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಎಲ್ಲಾ ತಲೆ ಕೆಳಗಾಗಿದೆ.

Also Read
Dhurandhar 2 On Netflix: ನೆಟ್‌ಫ್ಲಿಕ್ಸ್‌ನಲ್ಲಿ ಕತ್ತರಿ ಹಾಕದ 'ಧುರಂಧರ್ 2'.. ಎಷ್ಟೋತ್ತು ಸಿನಿಮಾ ನೋಡ್ಬೇಕು?
Dhurandhar 2 On Netflix: ನೆಟ್‌ಫ್ಲಿಕ್ಸ್‌ನಲ್ಲಿ ಕತ್ತರಿ ಹಾಕದ 'ಧುರಂಧರ್ 2'.. ಎಷ್ಟೋತ್ತು ಸಿನಿಮಾ ನೋಡ್ಬೇಕು?

ಆಜ್ ತಕ್ ವರದಿಯ ಪ್ರಕಾರ, ಪಾಕಿಸ್ತಾನದ 'ಮೇರಾ ಲಿಯಾರಿ' ಅಲ್ಲಿನ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಥಿಯೇಟರ್‌ಗಳಿಂದ ಸಿನಿಮಾವನ್ನು ತೆಗೆದು ಹಾಕಲಾಗಿದೆ. ಅಲ್ಲಿನ ಮಾಧ್ಯಮಗಳೇ ವರದಿ ಮಾಡಿದಂತೆ, ಬಿಡುಗಡೆಯಾದ ಮೊದಲ ದಿನ ಕೇವಲ 22 ಟಿಕೆಟ್‌ಗಳನ್ನು ಮಾರುವುದಕ್ಕೆ ಮಾತ್ರ ಸಾಧ್ಯವಾಗಿದೆ. ಹೀಗಾಗಿ ಮೊದಲ ದಿನವೇ ಚಿತ್ರಮಂದಿರದಿಂದ ಗೇಟ್ ಪಾಸ್ ಕೊಡಲಾಗಿದೆ.

ಅಂದ್ಹಾಗೆ 'ಧುರಂಧರ್'ಗೆ ರಿವೇಂಜ್ ತೀರಿಸಿಕೊಳ್ಳುವಂತಹ ಸಿನಿಮಾ 'ಮೇರಾ ಲಿಯಾರಿ' ಮಾಡಿದ ನಿರ್ದೇಶಕನ ಹೆಸರು ಅಬೂ ಅಲೀಹಾ. ಈ ಸಿನಿಮಾದಲ್ಲಿ ಪಾಕಿಸ್ತಾನದ ಕಲಾವಿದರಾದ, ಐಷಾ ಒಮರ್, ದನಾನ್ ಮೊಬೀನ್, ಸಾಮಿಯಾ ಮುಮ್ತಾಜ್ ಮತ್ತು ಟ್ರಿನೆಟ್ ಲೂಕಾಸ್ ಸೇರಿದಂತೆ ಜನಪ್ರಿಯ ನಟರು ನಟಿಸಿದ್ದಾರೆ. ಹಾಗಂತ 'ಧುರಂಧರ್'ಗೂ 'ಮೇರಾ ಲಿಯಾರಿ' ಸ್ಟೋರಿಗೂ ಸಂಬಂಧವೇ ಇಲ್ಲ. 'ಧುರಂಧರ್' ಗೂಢಚಾರಿಕೆ, ಪಾಕಿಸ್ತಾನದ ಭಯೋತ್ಪಾದನೆಯನ್ನು ಸಾರುವ ಕಥೆಯಾಗಿದ್ದರೆ, ಪಾಕಿಸ್ತಾನದ 'ಮೇರಾ ಲಿಯಾರಿ' ಮಹಿಳಾ ಫುಟ್‌ಬಾಲ್ ಆಟಗಾರ್ತಿಯರ ಸ್ಟೋರಿ. ಹೀಗಾಗಿ ಎರಡೂ ಸಿನಿಮಾಗಳ ಕಥೆಗೆ ಸಂಬಂಧವೇ ಇಲ್ಲ.

Pakistan movie Mera Lyari described as a response to the Dhurandhar kicked out of Theatres

'ಮೇರಾ ಲಿಯಾರಿ' ಹೀನಾಯ ಸೋಲಿಗೆ ಪಾಕಿಸ್ತಾನ ಮಾಧ್ಯಮಗಳು ಕಾರಣಗಳನ್ನು ಕೊಟ್ಟಿವೆ. ಅತೀ ಕಡಿಮೆ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸಾಧಾರಾಣ ಸ್ಟೋರಿ, ಕಮರ್ಷಿಯಲ್ ಎಲಿಮೆಂಟ್‌ಗಳ ಕೊರತೆಯೇ ಈ ಸಿನಿಮಾ ಈ ಮಟ್ಟಿಗೆ ಸೋಲುವುದಕ್ಕೆ ಕಾರಣವಿರಬಹುದು ಎಂದು ಊಹಿಸಲಾಗಿದೆ. ಪಾಕ್ ಸಿನಿಮಾ ನಿರ್ದೇಶಕ ಅಬೂ ಅಲೀಹಾ ಸಿನಿಮಾ ಬಿಡುಗಡೆಗೂ ಮುನ್ನ ಈ ಸಿನಿಮಾ ವಾಸ್ತವಕ್ಕೆ ತುಂಬಾನೇ ಹತ್ತಿರವಾಗಿದೆ ಎಂದಿದ್ದರು. "ಸಹ ನಟರು, ಸ್ಥಳೀಯ ಫುಟ್‌ಬಾಲ್ ತಂಡಗಳ ಸದಸ್ಯರು ಮತ್ತು ನಮ್ಮ ನಾಯಕ ಶೋಯೆಬ್ ಹಸನ್ ಸೇರಿದಂತೆ ಶೇಕಡಾ 80ರಷ್ಟು ಕಲಾವಿದರು ನಿಜವಾದ ಲಿಯಾರಿ ನಿವಾಸಿಗಳು" ಎಂದಿದ್ದನ್ನು ಡಾನ್ ವರದಿ ಮಾಡಿತ್ತು.

English summary
Pakistan movie Mera Lyari described as a response to the Dhurandhar kicked out of Theatres . This Pakistani movie sells only 22 Tickets. Mera Lyari was released on May 8 and consider flop at the box office in Pakistan.
Read more about: Dhurandhar 2 pakistan tickets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X